ರಶ್ಮಿಕಾ ಮಂದಣ್ಣ ಬೇಡಿಕೆ ಕುಸಿಯಲಿದೆ, ಆ ನಟನಿಂದ ಸಮಸ್ಯೆ: ಭವಿಷ್ಯ
ನಟಿ ರಶ್ಮಿಕಾ ಮಂದಣ್ಣ ವೃತ್ತಿ ಜೀವನದ ತುತ್ತತುದಿಯಲ್ಲಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ಪ್ರಾರಂಭಿಸಿ, ಟಾಲಿವುಡ್, ಕಾಲಿವುಡ್ ಬಳಿಕ ಇದೀಗ ಬಾಲಿವುಡ್‌ನಲ್ಲೂ ತಮ್ಮ ಬೇಡಿಕೆಯ ನಟಿಯಾಗುವತ್ತ ಕಾರ್ಯಪ್ರವೃತ್ತರಾಗಿದ್ದಾರೆ.
ರಶ್ಮಿಕಾಗಿಂತಲೂ ಸುಂದರವಾದ, ಉತ್ತಮವಾಗಿ ನಟಿಸುವ, ನೃತ್ಯ ಮಾಡುವ ಹಲವು ನಟಿಯರು ಚಿತ್ರರಂಗದಲ್ಲಿದ್ದಾರೆ ಆದರೆ ರಶ್ಮಿಕಾ ಮಂದಣ್ಣಗೆ ಸಿಗುತ್ತಿರುವ ದೊಡ್ಡ ಅವಕಾಶಗಳು ಅವರಿಗೆ ಸಿಗುತ್ತಿಲ್ಲ. ಈ ವಿಷಯದಲ್ಲಿ ಅವರು ಲಕ್ಕಿ ಎಂದೇ ಹೇಳಬೇಕು.
ಆದರೆ ರಶ್ಮಿಕಾರ ವೃತ್ತಿ ಜೀವನದ ಆರಂಭದ ಸಮಯದಲ್ಲಿ ಅವರ ಜಾತಕ ಅಧ್ಯಯನ ಮಾಡಿರುವ ವೇಣು ಸ್ವಾಮಿ ಹೇಳುವುದೇ ಬೇರೆ. ರಶ್ಮಿಕಾಗೆ ಅಪರೂಪದ ಯೋಗವೊಂದು ಇರುವ ಕಾರಣ ಅವರು ನಟಿಯಾಗಿ ಬಹಳ ಎತ್ತರಕ್ಕೆ ಏರುತ್ತಿದ್ದಾರಂತೆ. ಆದರೆ ಈ ಪ್ರಗತಿ ಹೆಚ್ಚು ದಿನ ಇರುವುದಿಲ್ಲವೆಂದು ಸ್ವತಃ ವೇಣು ಸ್ವಾಮಿಯೇ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಬೇಡಿಕೆ ಕಡಿಮೆಯಾಗುತ್ತೆ!
ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜ್ಯೋತಿಷಿ ವೇಣು ಸ್ವಾಮಿ. ರಶ್ಮಿಕಾ ಮಂದಣ್ಣ ಇದೀಗ ಟಾಪ್ ನಟಿ, ಒಂದು ಸಿನಿಮಾಕ್ಕೆ ಆರು-ಏಳು ಕೋಟಿ ಪಡೆಯುತ್ತಿದ್ದಾರೆ. ಆದರೆ ಅವರ ಈ ಸ್ಪೀಡು ಆದಷ್ಟು ಬೇಗ ತಗ್ಗಿಹೋಗುತ್ತದೆ. 2024 ರ ಬಳಿಕ ಅವರ ಕಾಲ ಮುಗಿಯುತ್ತದೆ, ಅವರಿಗೆ ಅವಕಾಶಗಳು ಕಡಿಮೆಯಾಗುತ್ತವೆ ಎಂದಿದ್ದಾರೆ.

ಮೂವರು ನಟಿಯರ ಬೇಡಿಕೆ ಇಳಿಯುತ್ತೆ: ವೇಣು ಸ್ವಾಮಿ
ಪ್ರಸ್ತುತ ತೆಲುಗು ಚಿತ್ರರಂಗವನ್ನು ಆಳುತ್ತಿರುವ ನಟಿಯರೆಂದರೆ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಮತ್ತು ಸಮಂತಾ. ಆದರೆ ಇವರು ಮೂವರಿಗೂ ಇರುವ ಬೇಡಿಕೆ 2024 ರ ಬಳಿಕ ತೀವ್ರವಾಗಿ ಕಡಿಮೆಯಾಗುತ್ತದೆ ಆ ವೇಳೆಗೆ ಹೊಸ ನಾಯಕಿಯರು ಮೇಲ್ಪಂಕ್ತಿಗೆ ಬರುತ್ತಾರೆ. ಇವರು ಜಾಗ ಖಾಲಿ ಮಾಡುತ್ತಾರೆ ಎಂದಿದ್ದಾರೆ. ಅತಿ ಹೆಚ್ಚು ಕಾಲ ಟಾಪ್ ನಾಯಕಿಯಾಗಿ ಉಳಿದಿದ್ದು ನಯನತಾರಾ ಮಾತ್ರ, ಅವರ ಜಾತಕವೇ ಅಂಥಹದ್ದು ಆಕೆಗೆ ಸದಾ ರಾಜಯೋಗವೇ ಎಂದಿದ್ದಾರೆ.

ಆ ನಟನ ಸಹವಾಸ ಮಾಡಬೇಡ ಎಂದು ಎಚ್ಚರಿಸಿದ್ದ ಸ್ವಾಮೀಜಿ
ಅಲ್ಲದೆ ರಶ್ಮಿಕಾರ ವಿಷಯವಾಗಿ ಇನ್ನೂ ಕೆಲವು ವಿಷಯ ಮಾತನಾಡಿರುವ ವೇಣು ಸ್ವಾಮಿ, ರಶ್ಮಿಕಾ ಮಂದಣ್ಣ ತಮ್ಮ ಖಾಸಗಿ ಜೀವನಗಳ ವಿಷಯಗಳಲ್ಲಿ ಕೆಲವು ನಿರ್ಣಯಗಳು ಅವರಿಗೆ ಮಾರಕವಾಗಲಿವೆ. ಅದರಲ್ಲಿಯೂ ನಾನು ಖುದ್ದಾಗಿ ಆಕೆಗೆ ಹೇಳಿದ್ದೆ ಆ ಹುಡುಗನ (ನಟ) ಗೆಳೆತನ ಒಳ್ಳೆಯದಲ್ಲ, ಆತನನ್ನು ಪ್ರೀತಿಸಬೇಡ ಎಂದಿದ್ದೆ. ಆದರೆ ಅದು ರಶ್ಮಿಕಾಗೆ ಇಷ್ಟವಾಗಲಿಲ್ಲ, ನನ್ನ ಖಾಸಗಿ ಜೀವನದಲ್ಲಿ ನೀವು ತಲೆ ಹಾಕಬೇಡಿ ಎಂದರು. ಸರಿ ಎಂದು ನಾನು ದೂರವಾಗಿಬಿಟ್ಟೆ. ಆಗ (ರಕ್ಷಿತ್ ಶೆಟ್ಟಿ ವಿಷಯವಾಗಿ) ಇದೇ ಮಾತನ್ನು ನಾನು ಹೇಳಿದಾಗ ನಾನು ಒಳ್ಳೆಯವನಾಗಿದ್ದೆ ಆದರೆ ಈಗ ನಾನು ಕೆಟ್ಟವನಾಗಿಬಿಟ್ಟೆ ಎಂದಿದ್ದಾರೆ ವೇಣು ಸ್ವಾಮಿ. ಜ್ಯೋತಿಷಿ ವೇಣು ಸ್ವಾಮಿ ಹೇಳಿರುವುದು ವಿಜಯ್ ದೇವರಕೊಂಡ ವಿಷಯವಾಗಿಯೇ ಎನ್ನುವ ಅನುಮಾನ ಅಭಿಮಾನಿಗಳದ್ದು.

ಸಂಸದೆಯಾಗುವ ಯೋಗವಿದೆ ರಶ್ಮಿಕಾಗೆ
ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆದರೂ ಸಹ ರಶ್ಮಿಕಾಗೆ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯವೇ ಇದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ. ಕರ್ನಾಟಕದಿಂದಲೇ ರಶ್ಮಿಕಾ ಸಂಸದೆ ಆಗುತ್ತಾರೆ ಅದೂ ಕಾಂಗ್ರೆಸ್ ಪಕ್ಷದಿಂದಲೇ ಆಗುತ್ತಾರೆ ಎಂದು ವೇಣು ಸ್ವಾಮಿ ಹೇಳಿದ್ದಾರೆ. ರಮ್ಯಾ ರೀತಿಯಲ್ಲಿಯೇ ಕಾಂಗ್ರೆಸ್ ಪಕ್ಷದಲ್ಲಿ ಎತ್ತರದ ಸ್ಥಾನಕ್ಕೂ ಹೋಗುತ್ತಾರೆ ಎಂದು ವೇಣು ಸ್ವಾಮಿ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ನಟನಾ ವೃತ್ತಿ ಜೀವನದ ಆರಂಭದಲ್ಲಿ ವೇಣು ಸ್ವಾಮಿಯವರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆದಿದ್ದರು. ರಶ್ಮಿಕಾರಿಗಾಗಿ ವಿಶೇಷ ಪೂಜೆಗಳನ್ನು ಸಹ ವೇಣು ಸ್ವಾಮಿ ಆಗ ಮಾಡಿದ್ದರು.


Click it and Unblock the Notifications











