ಹೊಸ ಸಿನಿಮಾದಲ್ಲಿ ಒಂದಾದ ವಿಜಯ್ ದೇವರಕೊಂಡ, ರಶ್ಮಿಕಾ ಜೋಡಿ!

ನಟಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು, ತಮಿಳು, ಹಿಂದಿ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ರಶ್ಮಿಕಾ ಪ್ರಕಟ ಮಾಡುತ್ತಲೇ ಇದ್ದಾರೆ. ಈಗ ರಶ್ಮಿಕಾ ಮತ್ತೊಂದು ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹೊರಬಂದಿದೆ.

ನಟಿ ರಶ್ಮಿಕಾ ಮಂದಣ್ಣ ತೆಲುಗಿನ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಕೂಡ ನಟ ವಿಜಯ್ ದೇವರಕೊಂಡ ಜೊತೆಗೆ. ತೆಲುಗಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಹೆಚ್ಚಾಗಿ ಸದ್ದು ಮಾಡಿದ್ದು ವಿಜಯ್ ದೇವರಕೊಂಡ ಜೊತೆಗೆ ಅಭಿನಯಿಸಿದ ಸಿನಿಮಾಗಳ ಮೂಲಕವೇ. ಇವರ ಅಭಿಮಾನಿಗಳು ಕೂಡ ಮತ್ತೆ ಈ ಜೋಡಿ ಜೊತೆಗೆ ಸಿನಿಮಾ ಮಾಡಿ ಎಂದು ಕೇಳಿಕೊಂಡಿದ್ದರು. ಅಭಿಮಾನಿಗಳ ಆಸೆ ಇದೀಗ ನೆರವೇರುತ್ತಿದೆ.

ಅರೆ, ಈ ಜೋಡಿ ಮತ್ತೆ ಜೊತೆಯಾಗಿ ಸಿನಿಮಾ ಮಾಡುತ್ತಿದೆಯಾ, ಈ ಜೋಡಿಯನ್ನು ಒಟ್ಟಿಗೆ ತೆರೆ ಮೇಲೆ ನೋಡಬಹುದು ಎನ್ನುವ ಪ್ರಶ್ನೆಗಳು ಈಗ ಸೃಷ್ಟಿಯಾಗಿದೆ. ಅಷ್ಟಕ್ಕು ಆ ಸಿನಿಮಾ ಯಾವುದು ರಶ್ಮಿಕಾ ಪಾತ್ರ ಹೇಗೆ ಇರಲಿದೆ ಎನ್ನುವ ಬಗ್ಗೆ ಮುಂದೆ ಓದಿ...

ರಶ್ಮಿಕಾ, ವಿಜಯ್ ಹಿಟ್ ಕಾಂಬಿನೇಶನ್!

ರಶ್ಮಿಕಾ, ವಿಜಯ್ ಹಿಟ್ ಕಾಂಬಿನೇಶನ್!

ಈ ಜೋಡಿಯ ಹೆಸರು ಕೇಳುತ್ತಲೇ ಇವರು ಅಭಿನಯದ ಹಿಟ್ ಸಿನಿಮಾ ನೆನಪಾಗುತ್ತೆ. ಹೌದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ 'ಗೀತಾ ಗೋವಿಂದಂ' ಸಿನಿಮಾ ಸೂಪರ್ ಹಿಟ್ ಆದಂತಹ ಸಿನಿಮಾ. ಈ ಚಿತ್ರ ಇವರಿಬ್ಬರಿಗೂ ಕೂಡ ದೊಡ್ಡ ಮಟ್ಟದ ಯಶಸ್ಸು ಕೊಟ್ಟಿತು. ಇದಕ್ಕೂ ಮುನ್ನ ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಬೇರೆ ಸಿನಿಮಾ ಮಾಡಿದ್ದರು. ಆದರೆ ತೆಲುಗಿನಲ್ಲಿ ರಶ್ಮಿಕಾಗೆ ಬ್ರೇಕ್ ಕೊಟ್ಟಿದ್ದು 'ಗೀತಾ ಗೋವಿಂದಂ'. ಹಾಗಾಗಿಯೇ ಈ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿತ್ತು. ಈ ಚಿತ್ರದ ಬಳಿಕ 'ಡಿಯರ್ ಕಾಮ್ರೇಡ್' ಚಿತ್ರದಲ್ಲೂ ಕೂಡ ಈ ಜೋಡಿ ಒಟ್ಟಿಗೆ ತೆರೆ ಹಂಚಿಕೊಂಡಿತ್ತು. ಆದರೆ 'ಗೀತಾ ಗೋವಿಂದಂ'ನಷ್ಟು ಈ ಸಿನಿಮಾ ಹಿಟ್ ಆಗಲಿಲ್ಲ.

ವಿಜಯ್ ಚಿತ್ರದಲ್ಲಿ ರಶ್ಮಿಕಾ ಅತಿಥಿಯ ಪಾತ್ರ

ವಿಜಯ್ ಚಿತ್ರದಲ್ಲಿ ರಶ್ಮಿಕಾ ಅತಿಥಿಯ ಪಾತ್ರ

ಈ ಬಾರಿ ನಟಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗೆ ನಾಯಕಿಯಾಗಿ ನಟಿಸುತ್ತಿಲ್ಲ. ವಿಜಯ್ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಸಿನಿಮಾದುದ್ದಕ್ಕೂ ಇರುವುದಿಲ್ಲ. ಸಿನಿಮಾದ ಹಾಡಿನಲ್ಲಿ ಮಾತ್ರ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ದೇವರಕೊಂಡ ನಟನೆಯ 'ಜನ ಗಣ ಮನ' ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಲಿದ್ದಾರೆ. ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ವಿಜಯ್ ಜೊತೆಗೆ ಡಾನ್ಸ್ ಮಾಡಲಿದ್ದಾರೆ. ಎಂಬ ಕಾಲಿವುಡ್ ನಲ್ಲಿ ಹಬ್ಬಿದೆ.

ಪೂಜಾ ಹೆಗ್ಡೆ ಚಿತ್ರದಲ್ಲಿ ರಶ್ಮಿಕಾ ಸಾಂಗ್!

ಪೂಜಾ ಹೆಗ್ಡೆ ಚಿತ್ರದಲ್ಲಿ ರಶ್ಮಿಕಾ ಸಾಂಗ್!

ವಿಜಯ್ ದೇವರಕೊಂಡ ಅಭಿನಯದ 'ಜನ ಗಣ ಮನ' ಚಿತ್ರದಲ್ಲಿ ಇಬ್ಬರು ಸ್ಟಾರ್ ನಟಿಯರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಈಗಾಗಲೇ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ಪೂಜಾ ಹೆಗ್ಡೆ ನಾಯಕಿಯಾಗಿ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ರಶ್ಮಿಕಾ ಮಂದಣ್ಣ ಕೂಡ ಇದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಕೇವಲ ಒಂದು ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ಈ ಸಿನಿಮಾಗಿಂತಲೂ ಹೆಚ್ಚಾಗಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಹಾಡು ಹೇಗೆ ಮೂಡಿಬರಲಿದೆ ಎನ್ನುವ ಚರ್ಚೆ ಶುರುವಾಗಿಬಿಟ್ಟಿದೆ.

ಮತ್ತೆ ವಿಜಯ್-ರಶ್ಮಿಕಾ ಸಿನಿಮಾ ಮಾಡೋದು ಯಾವಾಗ?

ಮತ್ತೆ ವಿಜಯ್-ರಶ್ಮಿಕಾ ಸಿನಿಮಾ ಮಾಡೋದು ಯಾವಾಗ?

ಇನ್ನು ರೀತಿಯ ಸುದ್ದಿಗೊಂದು ಟಾಲಿವುಡ್‌ನಲ್ಲಿ ಹಬ್ಬುತ್ತಿದ್ದಂತೆ ಅಭಿಮಾನಿಗಳು ಈ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡುವುದು ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಟಾಲಿವುಡ್‌ನ ಹಿಟ್ ಜೋಡಿಗಳಲ್ಲಿ ಈ ಜೋಡಿ ಕೂಡ ಒಂದು. 'ಗೀತ ಗೋವಿಂದಂ', 'ಡಿಯರ್ ಕಾಮ್ರೆಡ್' ಸಿನಿಮಾಗಳ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ಸಿನಿಮಾ ಮಾಡಿಲ್ಲ. ಅತ್ತ ವಿಜಯ್ ದೇವರಕೊಂಡ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾದರೆ, ರಶ್ಮಿಕಾ ಮಂದಣ್ಣ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಳ್ಳುವುದಲ್ಲದೆ ಬಾಲಿವುಡ್‌ನಲ್ಲಿ ಕೂಡ ಸಿನಿಮಾಗಳನ್ನು ಮಾಡುತ್ತಿದ್ದಾರೆ.

More from Filmibeat

English summary
Rashmika Mandanna Will share screen again with Vijay Devarkonda in Jana Gan Mana movie. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X