ಆತ್ಮೀಯನ ಕಳೆದುಕೊಂಡು ರಶ್ಮಿಕಾ ಮಂದಣ್ಣ ಭಾವುಕ, ವಿಷಾದಕರ ಪೋಸ್ಟ್
ಟಾಲಿವುಡ್, ಬಾಲಿವುಡ್, ಕಾಲಿವುಡ್ ಅಂತ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ನಿಮಿತ್ತ ಮುಂಬೈ, ಹೈದರಾಬಾದ್ ಹಾಗೂ ಚೆನ್ನೈ ಫ್ಲೈಟ್ ಆಗಾಗ್ಗೆ ಹತ್ತಿ ಇಳಿಯುತ್ತಿದ್ದಾರೆ. ಆಗಾಗ್ಗೆ ವಿದೇಶಕ್ಕೆ ಹೋಗಿ ಬರುತ್ತಿದ್ದಾರೆ. ಇತ್ತೀಚೆಗೆ ಅಂಬಾನಿ ಮನೆ ಮದುವೆಗೆ ಹಾಜರಾಗಿದ್ದರು. ಸದ್ಯ ಆಕೆಯ ಮನೆಯಲ್ಲಿ ಸೂತಕದ ಛಾಯೆ ಮನೆಮಾಡಿದೆ.
ಅಲ್ಲು ಅರ್ಜುನ್ ಜೊತೆ 'ಪುಷ್ಪ'-2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ದಿ ಗರ್ಲ್ ಫ್ರೆಂಡ್ ಹಾಗೂ ರೈನ್‌ಬೋ ಎನ್ನುವ ಮತ್ತೆರಡು ಸಿನಿಮಾಗಳು ಕೈಯಲ್ಲಿದೆ. ಧನುಷ್ ಜೊತೆ 'ಕುಬೇರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸಲ್ಮಾನ್ ಖಾನ್ ಮುಂದಿನ ಚಿತ್ರ 'ಸಿಕಂದರ್'ಗೂ ರೋಶ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಹಿಂದಿಯ ಐತಿಹಾಸಿಕ 'ಚಾವಾ' ಚಿತ್ರದ ಲೀಡ್ ರೋಲ್‌ನಲ್ಲಿ ಮಿಂಚುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಕೊಡಗಿನ ಬೆಡಗಿ ಯಾವಾಗ ಪೋಸ್ಟ್ ಮಾಡ್ತಾರೆ? ಯಾವಾಗ ಲೈಕ್ ಮಾಡೋಣ ಎಂದು ಅಭಿಮಾನಿಗಳು ಕಾಯುತ್ತಿರುತ್ತಾರೆ. ಆಗಾಗ್ಗೆ ಹೊಸ ಹೊಸ ಫೋಟೊಶೂಟ್ ಹಂಚಿಕೊಳ್ಳುತ್ತಿರುತ್ತಾರೆ. ಸಿನಿಮಾ ಮಾತ್ರವಲ್ಲ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆಯೂ ಪೋಸ್ಟ್ ಮಾಡುತ್ತಿರುತ್ತಾರೆ.
ಸದ್ಯ ರಶ್ಮಿಕಾ ತನಗೆ ಬಹಳ ಆತ್ಮೀಯ ಸಾಕು ನಾಯಿ ಸತ್ತುಹೋದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಮುದ್ದಿನ ನಾಯಿ ಅಸುನೀಗಿದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. . 'ರೆಸ್ಟ್ ಇನ್ ಪೀಸ್ ಮೈ ಗುಡೆಸ್ಟ್ ಬೊಯ್ ಮ್ಯಾಕ್ಸಿ. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿನ್ನನ್ನು ಕಳೆದುಕೊಂಡಿದ್ದಕ್ಕೆ ನನಗೆ ತುಂಬಾ ವಿಷಾದವಿದೆ. ನಾವು ಶೀಘ್ರದಲ್ಲೇ ಪರಸ್ಪರ ತಿಳಿದುಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಹಿಂದೆ ಸಾಕಷ್ಟು ಬಾರಿ ರಶ್ಮಿಕಾ ತಮ್ಮ ಮುದ್ದು ನಾಯಿ ಮರಿಗಳ ಫೋಟೊ, ವೀಡಿಯೋಗಳನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದರು. ಈ ಹಿಂದೆ ನಾಯಿ- ಬೆಕ್ಕಿನ ಜೊತೆಗಿರುವ 10ಕ್ಕೂ ಅಧಿಕ ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ಕೆಲವೊಮ್ಮೆ ತಮ್ಮ ಮುದ್ದಾದ ನಾಯಿಮರಿಯನ್ನು ಬ್ಯಾಗ್‌ನಲ್ಲಿಕೊಟ್ಟು ರಶ್ಮಿಕಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅಷ್ಟರಮಟ್ಟಿಗೆ ಪ್ರಾಣಿಗಳಂತೆ ಆಕೆಗೆ ಇಷ್ಟ. ಹೋದಲ್ಲಿ ಬಂದಲ್ಲಿ ತಮ್ಮೊಟ್ಟಿಗೆ ಕಾರಿನಲ್ಲಿ ನಾಯಿಯನ್ನು ಕೊರೆದೊಯ್ದ ವೀಡಿಯೋಗಳು ವೈರಲ್ ಆಗಿತ್ತು.
ಸಾಕಷ್ಟು ಜನರ ಮನೆಯಲ್ಲಿ ಸಾಕು ಪ್ರಾಣಿಗಳು ಮನೆಯ ಸದಸ್ಯನೇ ಆಗಿಬಿಟ್ಟಿರುತ್ತವೆ. ಅವು ಸತ್ತಾಗ ಆತ್ಮೀಯರನ್ನು ಕಳೆದುಕೊಂಡಷ್ಟೆ ನೋವು ಅನುಭವಿಸುತ್ತಾರೆ. ಸಿನಿಮಾ ತಾರೆಯರು ಇದಕ್ಕೆ ಹೊರತಲ್ಲ. ನಟಿಯರಾದ ರಮ್ಯಾ, ಚಾರ್ಮಿ ಸೇರಿದಂತೆ ಹಲವರು ನಾಯಿಗಳನ್ನು ಸಾಕುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ.


Click it and Unblock the Notifications











