ರಶ್ಮಿಕಾ ಹೆಸರನ್ನೇ ತಪ್ಪು ಬರೆದ 'ಪುಷ್ಪ' ಚಿತ್ರತಂಡ! ಅಭಿಮಾನಿಗಳ ಬೇಸರ

ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಸೂಪರ್ ಹಿಟ್ ಆಗಿದೆ. ಕೇವಲ 20 ದಿನಗಳಲ್ಲಿ 300 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ.

ಸಿನಿಮಾ ಬಿಡುಗಡೆ ಆದ ಕೇವಲ 20 ದಿನಕ್ಕೆ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿರುವ 'ಪುಷ್ಪ' ಸಿನಿಮಾವನ್ನು ಹಲವು ಮಂದಿ ವೀಕ್ಷಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

'ಪುಷ್ಪ' ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗಲೂ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್, ವಿಲನ್ ಪಾತ್ರದಲ್ಲಿ ನಟಿಸಿರುವ ಸುನಿಲ್, ಫಹಾದ್ ಫಾಸಿಲ್ ಪಾತ್ರಗಳನ್ನು ಬಹುವಾಗಿ ಹೊಗಳಲಾಗಿತ್ತು. ರಶ್ಮಿಕಾ ಮಂದಣ್ಣ ಪಾತ್ರದ ಬಗ್ಗೆ ಹೆಚ್ಚಾಗಿ ಚರ್ಚೆ ಆಗಿರಲಿಲ್ಲ. ಅವರಿಗೆ ಹೆಚ್ಚು ಪ್ರಶಂಸೆಯೂ ಧಕ್ಕಿರಲಿಲ್ಲ. ಇದು ರಶ್ಮಿಕಾ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿತ್ತು. ಇದೀಗ ಚಿತ್ರತಂಡ ಇನ್ನೂ ದೊಡ್ಡ ಪ್ರಮಾದವೊಂದನ್ನು ಮಾಡಿದೆ. ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿ ರಶ್ಮಿಕಾ ಹೆಸರನ್ನೇ ತಪ್ಪು ಬರೆದಿದೆ!

ನಾಯಕಿಯ ಹೆಸರೇ ತಪ್ಪು!

ನಾಯಕಿಯ ಹೆಸರೇ ತಪ್ಪು!

ಡಿಸೆಂಬರ್ 07ರಂದು 'ಪುಷ್ಪ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು ಸಿನಿಮಾ ಅಂತ್ಯವಾದ ಬಳಿಕ ಟೈಟಲ್ ಕಾರ್ಡ್‌ ಪ್ರದರ್ಶಿಸಲಾಗಿದೆ. ಪ್ರತಿಯೊಬ್ಬ ನಟರ ಚಿತ್ರದೊಟ್ಟಿಗೆ ಇಂಗ್ಲೀಷ್‌ನಲ್ಲಿ ಅವರ ಹೆಸರನ್ನು ಹಾಕಲಾಗಿದೆ. ಮೊದಲಿಗೆ ನಾಯಕ ಅಲ್ಲು ಅರ್ಜುನ್, ನಂತರ ನಟ ಫಹಾದ್ ಫಾಸಿಲ್ ಬಳಿಕ ರಶ್ಮಿಕಾ ಮಂದಣ್ಣ ಹೆಸರು ಹಾಕಲಾಗಿದೆ. ಆದರೆ ಇಂಗ್ಲೀಷ್‌ನಲ್ಲಿ ರಶ್ಮಿಕಾ ಮಂದಣ್ಣ ಎಂದು ಬರೆವ ಬದಲಿಗೆ 'ರಸ್ಮಿಕಾ ಮಡೊನಾ' ಎಂದು ಬರೆಯಲಾಗಿದೆ.

ಪ್ರಮಾದ ಯಾರದ್ದು?

ಪ್ರಮಾದ ಯಾರದ್ದು?

ರಶ್ಮಿಕಾ ಹೆಸರು ತಪ್ಪಾಗಿರುವುದು ಚಿತ್ರತಂಡದ ಪ್ರಮಾದವೋ ಅಥವಾ ಅಮೆಜಾನ್ ಪ್ರೈಂನವರ ಪ್ರಮಾದವೋ ಸ್ಪಷ್ಟತೆ ಇಲ್ಲ. ಆದರೆ ಒಟಿಟಿಗೆ ತಕ್ಕಂತೆ ಸಿನಿಮಾ ತಂಡದವರೇ ಸಿನಿಮಾವನ್ನು ಡಿಸೈನ್ ಮಾಡಿಕೊಡುವುದು ವಾಡಿಕೆ ಹಾಗಾಗಿ ಸಿನಿಮಾ ತಂಡವದವೇ ಹೀಗೆ ಟೈಟಲ್ ಕಾರ್ಡ್ ಹಾಕಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಿನಿಮಾದ ನಾಯಕ ನಟಿಯ ಹೆಸರನ್ನೇ ತಪ್ಪಾಗಿ ಬರೆದಿರುವುದು ಚಿತ್ರತಂಡಕ್ಕೆ ನಟಿಯರ ಬಗ್ಗೆ ಇರುವ ಅಸಡ್ಡೆಯನ್ನು ತೋರಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಎದ್ದಿವೆ.

ರಶ್ಮಿಕಾ ಬಗ್ಗೆ ಉಲ್ಲೇಖಿಸದ ಮಹೇಶ್ ಬಾಬು

ರಶ್ಮಿಕಾ ಬಗ್ಗೆ ಉಲ್ಲೇಖಿಸದ ಮಹೇಶ್ ಬಾಬು

ಕೆಲವು ದಿನಗಳ ಹಿಂದೆ ತೆಲುಗಿನ ಸ್ಟಾರ್ ನಟ ಮಹೇಶ್ ಬಾಬ 'ಪುಷ್ಪ' ಸಿನಿಮಾ ನೋಡಿದ್ದರು. ಸಿನಿಮಾ ನೋಡಿ ಬಹಳ ಖುಷಿಪಟ್ಟಿದ್ದ ಮಹೇಶ್ ಬಾಬು, ಟ್ವಿಟ್ಟರ್‌ನಲ್ಲಿ ವಿಮರ್ಶೆ ಬರೆದುಕೊಂಡಿದ್ದರು. ಸಿನಿಮಾ ಬೊಂಬಾಟಾಗಿದೆ ಎಂದಿದ್ದ ಮಹೇಶ್ ಬಾಬು, ಅಲ್ಲು ಅರ್ಜುನ್ ನಟನೆಯ, ಸುಕುಮಾರ್ ನಿರ್ದೇಶನ, ದೇವಿಶ್ರೀ ಪ್ರಸಾದ್ ಸಂಗೀತ, ಫಹಾದ್ ಫಾಸಿಲ್ ನಟನೆಯನ್ನು ಮೆಚ್ಚಿಕೊಂಡಿದ್ದರು. ಆದರೆ ಟ್ವೀಟ್‌ನಲ್ಲಿ ರಶ್ಮಿಕಾ ಬಗ್ಗೆ ಏನೂ ಬರೆದಿರಲಿಲ್ಲ. ರಶ್ಮಿಕಾ ಹಾಗೂ ಮಹೇಶ್ ಬಾಬು ಒಟ್ಟಿಗೆ 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ನಟಿಸಿದ್ದರು. ಆದರೂ ರಶ್ಮಿಕಾ ಬಗ್ಗೆ ಮಹೇಶ್ ಟ್ವೀಟ್ ಮಾಡದೇ ಇರುವುದು ರಶ್ಮಿಕಾರ ಅಭಿಮಾನಿಗಳಿಗೆ ಬೇಸರ ತರಿಸಿತ್ತು.

ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ಹೆಸರು ತಪ್ಪಾಗಿದೆ!

ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ಹೆಸರು ತಪ್ಪಾಗಿದೆ!

ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ಏಳು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎರಡು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಿದ್ದರೂ ಅವರ ಹೆಸರನ್ನು ತಪ್ಪಾಗಿ ಬರೆದಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ, ನಾಯಕಿಯ ಹೆಸರು ತಪ್ಪಾಗಿ ಬರೆಯುವ ಮೂಲಕ ನಾಯಕಿಯರ ಬಗ್ಗೆ ಕಮರ್ಶಿಯಲ್ ಸಿನಿಮಾಗಳು ಎಷ್ಟು ಅಸಡ್ಡೆವಹಿಸುತ್ತವೆ ಎಂಬುದಕ್ಕೆ ಉದಾಹರಣೆಯನ್ನು ನೀಡಿದಂತಿದೆ ಈ ಪ್ರಕರಣ. ರಶ್ಮಿಕಾ ಮಂದಣ್ಣ ಪ್ರಸ್ತುತ, ತೆಲುಗಿನ 'ಆಡುವಾಳ್ಳು ಮೀಕು ಜೋಹಾರ್ಲು', 'ಪುಷ್ಪ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಹೊರತಾಗಿ ಹಿಂದಿಯ 'ಮಿಶನ್ ಮಜ್ನು', ಅಮಿತಾಬ್ ಬಚ್ಚನ್ ಜೊತೆ ನಟಸಿರುವ 'ಗುಡ್ ಬೈ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

More from Filmibeat

English summary
Rashmika Mandanna's name changed in Pushpa movie title card. Rashmika's name written as Rasmika Madona in title card.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X