ರಶ್ಮಿಕಾಗೆ ಮತ್ತೆ ಡೀಪ್‌ಫೇಕ್ ಶಾಕ್: ಯುವತಿಯ ಹಾಟ್ ವಿಡಿಯೋಗೆ ನಟಿಯ ಮುಖ ಜೋಡಿಸಿ ರಿಲೀಸ್

ಸಿನಿಮಾ ನಟಿಯರನ್ನು ಡೀಪ್‌ಫೇಕ್ ಕಾಡುತ್ತಿದೆ. ರಶ್ಮಿಕಾ ಮಂದಣ್ಣ ಫೇಕ್ ವಿಡಿಯೋ ವೈರಲ್ ಆದ ಬಳಿಕ ಕತ್ರೀನಾ ಕೈಫ್, ಆಲಿಯಾ ಭಟ್, ಕಾಜೋಲ್ ಸೇರಿದಂತೆ ಕೆಲ ನಟಿಯರ ಮಾರ್ಪ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದ್ದವು. ಈಗಾಗಲೇ ಸರ್ಕಾರ ಕೂಡ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆದರೂ ಕಿಡಿಗೇಡಿಗಳ ಅಟ್ಟಹಾಸ ಕಮ್ಮಿ ಆಗುತ್ತಿಲ್ಲ.

ತಿಂಗಳ ಹಿಂದೆ ರಶ್ಮಿಕಾ ಮಂದಣ್ಣ ಫೇಕ್ ವಿಡಿಯೋ ಬರುತ್ತಿದ್ದಂತೆ ಅಮಿತಾಬ್ ಬಚ್ಚನ್ ಸೇರಿದಂತೆ ಸಾಕಷ್ಟು ಜನ ಆಕೆಯ ಬೆಂಬಲಕ್ಕೆ ನಿಂತಿದ್ದರು. ಇಂತಹ ತಂತ್ರಜ್ಞಾನವನ್ನು ಕೆಟ್ಟ ರೀತಿಯಲ್ಲಿ ಬಳಸುವವರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು, ದುರುದ್ದೇಶಕ್ಕೆ ಇಂತಹ ಆಪ್, ಸಾಫ್ಟ್‌ವೇರ್ ಬಳಕೆ ಆಗದಂತೆ ತಡೆಯಬೇಕು ಎಂದು ಎನ್ನುವ ಆಗ್ರಹ ವ್ಯಕ್ತವಾಗಿತ್ತು. ಇವತ್ತು ನಟಿಯರ ಡೀಪ್‌ಫೇಕ್ ವಿಡಿಯೋ ಹರಿದಾಡುವಂತೆ ಮುಂದೆ ನಮ್ಮ ಅಕ್ಕ ಪಕ್ಕ ಇರುವವರ ಫೇಕ್ ವಿಡಿಯೋಗಳು ಹೊರಬರುವ ಸಾಧ್ಯತೆ ಇದೆ ಎಂದು ಕೆಲವರು ಕಳವಳಗೊಂಡಿದ್ದರು.

Rashmika Mandannas onemore deepfake video goes viral

ಪ್ರಧಾನಿ ನರೇಂದ್ರ ಮೋದಿ ಸಹ ಡೀಪ್‌ಫೇಕ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದರು. "ಪ್ರಸ್ತುತ ನಮ್ಮ ಭಾರತೀಯ ವ್ಯವಸ್ಥೆಯು ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಡೀಪ್‌ಫೇಕ್‌ ಕೂಡ ಒಂದು" ಎಂದಿದ್ದರು. ಹೊಸ ತಂತ್ರಜ್ಞಾನದಿಂದ ಹೆಚ್ಚುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮಗಳಲ್ಲಿ ಮನವಿ ಮಾಡಿದ್ದರು.

ಇದೀಗ ರಶ್ಮಿಕಾ ಮಂದಣ್ಣಳ ಮತ್ತೊಂದು ಡೀಪ್‌ಫೇಕ್‌ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಾಡಿಕಾನ್‌ ಡ್ರೆಸ್‌ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಯುವತಿಯೊಬ್ಬಳು ಕಾಣಿಸಿಕೊಂಡಿರುವ ವಿಡಿಯೋಗೆ ರಶ್ಮಿಕಾ ಮುಖ ಅಂಟಿಸಿ ತೇಲಿ ಬಿಡಲಾಗಿದೆ. ಕೆಲವರು ಇದು ಕೊಡಗಿನ ಕುವರಿನಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದು ಡೀಪ್‌ಫೇಕ್ ಎನ್ನುವುದು ನೋಡುತ್ತಿದ್ದಂತೆ ಗೊತ್ತಾಗುತ್ತಿದೆ.

ರಶ್ಮಿಕಾ ಫೇಕ್‌ ವಿಡಿಯೋ ನೋಡಿದ ನೆಟ್ಟಿಗರು, ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ತಮ್ಮ ಡೀಪ್‌ಫೇಕ್ ವಿಡಿಯೋ ಬಂದಾಗರ ರಶ್ಮಿಕಾ ಬೇಸರ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ಬಳಿಕ 'ಅನಿಮಲ್' ಸಿನಿಮಾ ಸುದ್ದಿಗೋಷ್ಠಿಯಲ್ಲೂ ಮಾತನಾಡಿದ್ದರು.

"ಈ ಸಮಸ್ಯೆ ಎಲ್ಲರಿಗೂ ಇದೆ. ಮೊದಲಿಗೆ ಅಮಿತಾನ್ ಬಚ್ಚನ್ ಸರ್ ಸಪೋರ್ಟ್ ಮಾಡಿದರು. ನಂತರ ಎಲ್ಲರೂ ಬೆಂಬಲಿಸಿದರು. ಮೊದಲು ಆ ವಿಡಿಯೋ ನೋಡಿದಾಗ ನೋವಾಯಿತು. ಆದ್ರೆ ಇದು ಸರ್ವೇ ಸಾಧಾರಣ ಆಗಿಬಿಟ್ಟಿದೆ. ಮೊದಮೊದಲು ಭಯ ಆಯ್ತು.. ಆದ್ರೆ ನಾವೇನು ​​ಮಾಡೋಕೆ ಸಾಧ್ಯ ಎಂದುಕೊಂಡೆ.. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದುಕೊಂಡೆ. ಆದ್ರೆ ಎಲ್ಲರೂ ಮುಂದೆ ಬಂದು ಸಪೋರ್ಟ್ ಮಾಡಿದ್ದು ನೋಡಿ ಇದು ಸಾಮಾನ್ಯ ವಿಷಯ ಅಲ್ಲ, ನಾನು ಪ್ರತಿಕ್ರಿಯಿಸಬೇಕು ಎಂದುಕೊಂಡೆ"

"ಇದೇ ಕಾರಣಕ್ಕೆ ಈಗ ಡೀಪ್‌ಫೇಕ್‌ ಬಗ್ಗೆ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಹಾಗಾಗಿ ಎಲ್ಲಾ ಹುಡುಗಿಯರಿಗೆ ಹೇಳಲು ಬಯಸುತ್ತೇನೆ.. ಈ ವಿಷಯಗಳು ಸಾಮಾನ್ಯವಲ್ಲ.. ಇದು ನಿಮಗೆ ಎದುರಾದರೆ ಮೌನವಾಗಿರಬೇಡ.. ಪ್ರತಿಕ್ರಿಯಿಸಿ.. ಜನ ಬೆಂಬಲಿಸುತ್ತಾರೆ.. ನಾವು ಒಳ್ಳೆ ದೇಶದಲ್ಲಿದ್ದೇವೆ" ಎಂದು ರಶ್ಮಿಕಾ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದರು.

ಸಿನಿಮಾಗಳ ವಿಚಾರಕ್ಕೆ ಬಂದರೆ ರಶ್ಮಿಕಾ ಸದ್ಯ 'ಅನಿಮಲ್' ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರೋಶ್ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮತ್ತೆ 'ಪುಷ್ಪ'-2 ಚಿತ್ರೀಕರಣ ಆರಂಭವಾಗಿದೆ. ಶ್ರೀವಲ್ಲಿಯಾಗಿ ಮತ್ತೊಮ್ಮೆ ಆಕೆ ಕ್ಯಾಮರಾ ಮುಂದೆ ನಿಂತಿದ್ದಾರೆ. 'ರೈನ್‌ಬೋ' ಹಾಗೂ 'ದಿ ಗರ್ಲ್ ಫ್ರೆಂಡ್' ಎನ್ನುವ ಎರಡು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ದಿ ಗರ್ಲ್ ಫ್ರೆಂಡ್' ಚಿತ್ರವನ್ನು ಅಲ್ಲು ಅರ್ಜುನ್ ನಿರ್ಮಾಣ ಮಾಡುತ್ತಿದ್ದು ಕನ್ನಡ ನಟ ದೀಕ್ಷಿತ್ ಶೆಟ್ಟಿ ಹೀರೊ ಆಗಿ ನಟಿಸುತ್ತಿದ್ದಾರೆ.

More from Filmibeat

English summary
Rashmika mandanna again Targeted with Deepfake;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X