ತನ್ನದೇ ಶೈಲಿಯಲ್ಲಿ 'ಗರ್ಲ್‌ಫ್ರೆಂಡ್' ಪರಿಚಯಿಸಿದ ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಚಿತ್ರದಲ್ಲಿ ಮತ್ತೊಮ್ಮೆ ಶ್ರೀವಲ್ಲಿಯಾಗಿ ಆಕೆಯ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆಕೆಗೆ ಚಿತ್ರದಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಇದೀಗ ಆಕೆ ನಟಿಸಿರುವ 'ದಿ ಗರ್ಲ್‌ಫ್ರೆಂಡ್' ಚಿತ್ರದ ಟೀಸರ್ ಬಂದಿದೆ.

ರಾಹುಲ್ ರವೀಂದ್ರನ್ ನಿರ್ದೇಶನದ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ದೀಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದಾರೆ. ಧೀರಜ್ ಮೊಗಿಲಿನೇನಿ ಮತ್ತು ವಿದ್ಯಾ ಕೊಪ್ಪಿನೀಡಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಟೈಟಲ್ಲೇ ಹೇಳುವಂತೆ ಇದು ಲವ್ ಸ್ಟೋರಿ ಸಿನಿಮಾ.

Rashmika Mandanna s The girl friend teaser out with vijay devarakonda voice

ವಿಜಯ್ ದೇವರಕೊಂಡ ಹಿನ್ನೆಲೆ ಧ್ವನಿಯಲ್ಲಿ 'ದಿ ಗರ್ಲ್‌ಫ್ರೆಂಡ್' ಟೀಸರ್ ರಿಲೀಸ್ ಆಗಿ ಸದ್ದುಮಾಡ್ತಿದೆ. ದೇವರಕೊಂಡ ಹಾಗೂ ರಶ್ಮಿಕಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಈ ಚಿತ್ರದಲ್ಲಿ ದೇವರಕೊಂಡ ವಾಯ್ಸ್ ನೀಡಿರುವುದು ವಿಶೇಷ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ದಿ ಗರ್ಲ್‌ಫ್ರೆಂಡ್' ಸಿನಿಮಾ ತೆರೆಗೆ ಬರಲಿದೆ. ತೆಲುಗು ಟೀಸರ್‌ನಲ್ಲಿ ದೇವರಕೊಂಡ ಧ್ವನಿ ಕೇಳಿಬಂದಿದೆ. ಕಥೆಯನ್ನ ಬಿಟ್ಟುಕೊಡದೇ ಟೀಸರ್ ಕಟ್ ಮಾಡಿರೋದು ಗೊತ್ತಾಗುತ್ತದೆ. "ಕಣ್ಣು ಕಣ್ಣು ಕಲೆತ ವೇಳೆ ಮನದಲ್ಲೇನೊ ವೇಗದ ಬೇಗೆ ಮತ್ತೆ ಮತ್ತೆ ನಿನ್ನ ನೋಡುವ ತವಕ ನಿಲ್ಲದಿ ಪಯಣ ನಿನ್ನ ಸೇರುವ ತನಕ" ಎನ್ನುವ ಹಿನ್ನೆಲೆ ಧ್ವನಿಯೊಂದಿಗೆ ಟೀಸರ್ ಶುರುವಾಗುತ್ತದೆ.

ನಗರಕ್ಕೆ ಬಂದು ಕಾಲೇಜಿನಲ್ಲಿ ಓದುವ ಹುಡುಗಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸಲ್ವಾರ್‌ನಲ್ಲಿ ಬಹಳ ಸಿಂಪಲ್ ಆಗಿ ಮಿಂಚಿದ್ದಾರೆ. ನಾಯಕನ ಮುಖ ತೋರಿಸದೇ ಟೀಸರ್ ಮೂಡಿಬಂದಿದೆ. ಹಾಗಾಗಿ ಟೀಸರ್ ತುಂಬಾ ರಶ್ಮಿಕಾ ಆವರಿಸಿಕೊಂಡಿದ್ದಾರೆ. ಕ್ಯಾಂಟೀನ್, ಕ್ಲಾಸ್‌ರೂಮ್, ಥಿಯೇಟರ್‌ ಹೀಗೆ ನಾನಾ ಬ್ಯಾಕ್‌ಡ್ರಾಪ್‌ನಲ್ಲಿ ದೃಶ್ಯಗಳನ್ನು ನೋಡಬಹುದು.

ಮಹಿಳಾ ಪ್ರಧಾನ ಸಿನಿಮಾ ಎನ್ನುವಂತೆ ಇಡೀ ಕಥೆ ರಶ್ಮಿಕಾ ಪಾತ್ರದ ಸುತ್ತಾ ಸುತ್ತುವಂತಿದೆ. ಪ್ರೀತಿ ಬಿದ್ದು ನೋವು ಅನುಭವಿಸುವ ಹುಡುಗಿಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ರಾವ್ ರಮೇಶ್ ಹಾಗೂ ರೋಹಿಣಿ ಕೂಡ ತಾರಾಗಣದಲ್ಲಿದ್ದಾರೆ. ಕೃಷ್ಣನ್ ವಸಂತ್ ಛಾಯಾಗ್ರಹಣ, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಚಿತ್ರಕ್ಕಿದೆ.

ಸದ್ಯ ರಶ್ಮಿಕಾ ಮಂದಣ್ಣ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಟಿಯರಿಗೂ ಟಫ್ ಕಾಂಪಿಟೇಷನ್ ಕೊಡುತ್ತಿದ್ದಾರೆ. ತೆಲುಗು, ತಮಿಳು ಜೊತೆಗೆ ಹಿಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಪುಷ್ಪ'-2 ಸಕ್ಸಸ್ ಆಕೆಗೆ ಮತ್ತಷ್ಟು ಕ್ರೇಜ್ ತಂದು ಕೊಟ್ಟಿದೆ. ಮಂದೆ ಇನ್ನು ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸೋ ಅವಕಾಶ ಸಿಗುವ ಸಾಧ್ಯತೆಯಿದೆ.

'ಚಾವ' ಎಂಬ ಐತಿಹಾಸಿಕ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫೆಬ್ರವರಿ 14ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಛತ್ರಪತಿ ಶಿವಾಜಿ ಪುತ್ರ ಸಾಂಬಾಜಿ ಜೀವನಾಧರಿತ ಚಿತ್ರ ಇದು. ರಶ್ಮಿಕಾ ಚಿತ್ರದಲ್ಲಿ ಸಾಂಬಾಜಿ ಪತ್ನಿ ಯೇಸುಬಾಯಿ ಭೋನ್ಸಾಲೆ ಆಗಿ ಮಿಂಚಿದ್ದಾರೆ.

ಧನುಷ್ ಜೊತೆ 'ಕುಬೇರ' ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಸಿದಂದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಮಿಂಚಿದರೆ 'ರೈನ್‌ಬೋ' ಎಂಬ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ ಕೂಡ ರಶ್ಮಿಕಾ ಮಂದಣ್ಣ ಕೈಯಲ್ಲಿದೆ.

More from Filmibeat

English summary
Vijay Devarakonda voice over for The girl friend movie teaser
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X