ಅಬ್ಬಬ್ಬಾ, ಮೈತುಂಬಾ ಬಂಗಾರ; ದಿಢೀರ್ ಶ್ರೀಮಂತಳಾಗಿದ್ಹೇಗೆ ಶ್ರೀವಲ್ಲಿ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ಒಂದು ಕ್ಷಣವೂ ಪುರಸೊತ್ತು ಇಷ್ಟದಷ್ಟು ಬ್ಯುಸಿಯಾಗಿರುವ ಕೊಡಗಿನ ಕುವರಿಗೆ ಅಭಿಮಾನಿಗಳು, ಆಪ್ತರು ಶುಭಾಶಯ ಕೋರುತ್ತಿದ್ದಾರೆ. ಇನ್ನು ರೋಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಡಬಲ್ ಗಿಫ್ಟ್ ಕೂಡ ಸಿಕ್ಕಿದೆ.

ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲೆಲ್ಲೂ ರಶ್ಮಿಕಾ ಮಂದಣ್ಣ ಕ್ರೇಜ್ ಜೋರಾಗಿದೆ. ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡು ಚೆಲುವೆ ಗಮನ ಸೆಳೆಯುತ್ತಿದ್ದಾರೆ. ಸದ್ಯ ಮೂರ್ನಾಲ್ಕು ಸಿನಿಮಾಗಳು ಆಕೆಯ ಕೈಯಲ್ಲಿವೆ. ಮತ್ತಷ್ಟು ಕಥೆಗಳ ಬಗ್ಗೆ ಚರ್ಚೆ ನಡೀತಿದೆ. ಮತ್ತೆ ಬಾಲಿವುಡ್ ಸಿನಿಮಾಗಳಲ್ಲಿ ಕಿರಿಕ್ ಬೆಡಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಅನಿಮಲ್' ಬ್ಲಾಕ್‌ಬಸ್ಟರ್ ಹಿಟ್ ಆಕೆಗೆ ಮತ್ತಷ್ಟು ಡಿಮ್ಯಾಂಡ್ ಸೃಷ್ಟಿಸಿದೆ.

Rashmika Mannada starrer Pushpa- 2 and the Girl Girlfriend film posters releases on her birthday

ಅಲ್ಲು ಅರ್ಜುನ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ 'ಪುಷ್ಪ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಮಾಸ್ ಮಸಾಲಾ ಸಿನಿಮಾ ಸದ್ದು ಮಾಡಿತ್ತು. ಪುಷ್ಪರಾಜ್ ಪ್ರೇಯಸಿ ಶ್ರೀವಲ್ಲಿ ಪಾತ್ರದಲ್ಲಿ ಲಂಗಾ ದಾವಣಿಯಲ್ಲಿ ರಶ್ಮಿಕಾ ಮಿಂಚಿದ್ದರು. ಆಕೆಯ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಚಿತ್ರದ ಸೀಕ್ವೆಲ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಲಿದೆ.

'ಪುಷ್ಪ' ಸಿನಿಮಾ ಕ್ಲೈಮ್ಯಾಕ್ಸ್ ವೇಳೆಗೆ ಪುಷ್ಪರಾಜ್- ಶ್ರೀವಲ್ಲಿ ಪ್ರೀತಿಲಿ ಬಿದ್ದು ಇಬ್ಬರೂ ಮದುವೆ ಕೂಡ ಆಗುತ್ತಾರೆ. ಸೀಕ್ವೆಲ್‌ನಲ್ಲಿ ಪುಷ್ಪನ ಮಡದಿಯಾಗಿ ಶ್ರೀವಲ್ಲಿ ಪಾತ್ರ ಮುಂದುವರೆಯುತ್ತದೆ. ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಹಿನ್ನೆಲೆ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡ ಶುಭ ಕೋರಿದೆ.

Rashmika Mannada starrer Pushpa- 2 and the Girl Girlfriend film posters releases on her birthday

ಮೊದಲ ಭಾಗದಲ್ಲಿ ಹಳ್ಳಿ ಹುಡುಗಿಯಾಗಿ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದ ಶ್ರೀವಲ್ಲಿ ಎರಡನೇ ಭಾಗದಲ್ಲಿ ತುಂಬಾ ಶ್ರೀಮಂತಳಾಗಿದ್ದಾಳೆ. ರೇಷ್ಮೆ ಸೀರೆಯುಟ್ಟು, ಮೈತುಂಬಾ ಬಂಗಾರ ಧರಿಸಿ ಮಿಂಚುತ್ತಿದ್ದಾಳೆ. ಕೈತುಂಬಾ ಬಳೆಗಳು, ಕುತ್ತಿಗೆಯ ನೆಕ್ಲೇಸ್‌ಗಳು, ಸೊಂಟಕ್ಕೆ ಡಾಬು ಧರಿಸಿ ಯಾವುದೇ ವಿಚಾರದಲ್ಲಿ ಪುಷ್ಪರಾಜ್‌ಗೆ ತಗ್ಗಲ್ಲ ಎನ್ನುವಂತೆ ಪೋಸ್ ಕೊಟ್ಟಿದ್ದಾಳೆ. ಅಂದಹಾಗೆ ಇದು ಹಾಡಿನ ಚಿತ್ರೀಕರಣದ ಫೋಟೊ ಎನ್ನುವುದು ಗೊತ್ತಾಗುತ್ತಿದೆ.

ಮೊದಲು ಆಮಾನ್ಯ ರಕ್ತಚಂದನ ಸ್ಮಗರ್ ಆಗಿದ್ದ ಪುಷ್ಪರಾಜ್ ಕೊನೆಗೆ ಬಳಿಕ ಆ ಇಡೀ ಸಿಂಡಿಕೇಟ್‌ನ ತನ್ನ ಹತೋಟಿಗೆ ತೆಗೆದುಕೊಳ್ಳುತ್ತಾನೆ. ಸೀಕ್ವೆಲ್‌ನಲ್ಲಿ ಇಡೀ ಮಾಫಿಯಾ ಡಾನ್ ಆಗಿ ಆತ ಹೇಗೆ ಮೆರೆಯುತ್ತಾನೆ ಎನ್ನುವ ಕಥೆ ಹೇಳಲಾಗುತ್ತಿದೆ. ಸಹಜವಾಗಿಯೇ ಆತ ಶ್ರೀಮಂತನಾಗಲಿದ್ದು ಮಡದಿ ಶ್ರೀವಲ್ಲಿಯೂ ಮೆರೆಯುವ ಸಾಧ್ಯತೆಯಿದೆ. ಅದನ್ನೇ ಈ ಪೋಸ್ಟರ್ ಕೂಡ ಸಾರಿ ಹೇಳುತ್ತಿದೆ. ಏಪ್ರಿಲ್ 8ಕ್ಕೆ ಅಲ್ಲು ಅರ್ಜುನ್ ಹುಟ್ಟುಹಬ್ಬದ ವಿಶೇಷವಾಗಿ ಟೀಸರ್ ಬಿಡುಗಡೆ ಆಗಲಿದೆ.

'ದಿ ಗರ್ಲ್ ಫ್ರೆಂಡ್' ಎನ್ನುವ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕೂಡ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ಆ ಚಿತ್ರದಿಂದಲೂ ಹೊಸ ಪೋಸ್ಟರ್ ರಿವೀಲ್ ಆಗಿದೆ. ಸಲ್ವಾರ್ ತೊಟ್ಟು ರಶ್ಮಿಕಾ ಕಾಲೇಜು ಹುಡುಗಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು ರಾಹುಲ್ ರವೀಂದ್ರನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ದಿಯಾ' ಸಿನಿಮಾ ಖ್ಯಾತಿಯ ದೀಕ್ಷಿತ್ 'ದಿ ಗರ್ಲ್ ಫ್ರೆಂಡ್' ಚಿತ್ರದಲ್ಲಿ ರಶ್ಮಿಕಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರದ ಟೀಸರ್‌ ಬಿಡುಗಡೆಗೂ ಸಿದ್ಧತೆ ನಡೀತಿದೆ. 5 ಭಾಷೆಗಳಲ್ಲಿ ಖುದ್ದು ರಶ್ಮಿಕಾ ಮಂದಣ್ಣ ಚಿತ್ರಕ್ಕೆ ಡಬ್ ಮಾಡುತ್ತಿದ್ದಾರೆ. ಈ ಸಿನಿಮಾ ಕೂಡ ಭಾರೀ ನಿರೀಕ್ಷೆ ಮೂಡಿಸಿದೆ. 'ರೈಬೋ' ಎನ್ನುವ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲೂ ರೋಶ್ ನಟಿಸುತ್ತಿದ್ದಾರೆ.

ತಮಿಳಿನಲ್ಲಿ 'ಕುಬೇರ' ಚಿತ್ರದಲ್ಲಿ ನಟಿಸಲು ರಶ್ಮಿಕಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಧನುಷ್ ಜೋಡಿಯಾಗಿ ಈ ಚಿತ್ರದಲ್ಲಿ ಆಕೆ ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನಲ್ಲೂ ಈ ಕಾಲಕ್ಕೆ ಈ ಸಿನಿಮಾ ನಿರ್ಮಾಣವಾಗಲಿದ್ದು ನಾಗಾರ್ಜುನ ಕೂಡ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Rashmika Mannada birthday, makers of Pushpa- 2 and the Girl Girlfriend released posters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X