'ಮಿಸ್ಸಿಂಗ್ ಯೂ..' ಎಂದ ವಿಜಯ್ ದೇವರಕೊಂಡಗೆ ರಶ್ಮಿಕಾ ಪ್ರತಿಕ್ರಿಯೆ ಹೀಗಿದೆ
ಕನ್ನಡದ ಕಿರಿಕ್ ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗಿನ ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಜೋಡಿ. ಇಬ್ಬರ ನಡುವೆ ಎಷ್ಟೇ ಗಾಸಿಪ್, ಲಿಂಕ್ ಅಪ್ ಸುದ್ದಿಗಳು ಹರಿದಾಡುತ್ತಿದ್ದರು ಇವರ ಸ್ನೇಹ, ಸಂಬಂಧ ಗಟ್ಟಿಯಾಗುತ್ತಲೆ ಇದೆ.
Recommended Video
ಇಬ್ಬರ್ ಆನ್ ಸ್ಕ್ರೀನ್ ಕೆಮಿಷ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇತ್ತೀಚಿಗೆ ಇಬ್ಬರ ನಡುವಿನ ಸ್ನೇಹ ಮುರಿದುಬಿದ್ದಿದ್ಯಾ ಎನ್ನುವ ಸುದ್ದಿ ಸಹ ಹರಿದಾಡಲು ಪ್ರಾರಂಭವಾಗಿತ್ತು. ಆದರೀಗ ವಿಜಯ್ ದೇವರಕೊಂಡ, ರಶ್ಮಿಕಾಗೆ ಕಳುಹಿಸಿರುವ ಸಂದೇಶ ಗಾಳಿಸುದ್ದಿಗೆ ಬ್ರೇಕ್ ಹಾಕಿದೆ. ರಶ್ಮಿಕಾರನ್ನು ಮಿಸ್ ಮಾಡಿಕೊಳ್ಳುತ್ತಿರುವ ಹೈದರಾಬಾದ್ ಗ್ಯಾಂಗ್ ಅನ್ನು ಬೇಗ ಸೇರಿಕೊ ಎಂದ ವಿಜಯ್ ಗೆ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿಯೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಕರ್ನಾಟಕದಲ್ಲಿ ರಶ್ಮಿಕಾ, ಹೈದರಾಬಾದ್ ನಲ್ಲಿ ದೇವರಕೊಂಡ
ಸದ್ಯ ಕೊರೊನಾ ಲಾಕ್ ಡೌನ್ ಹಿನ್ನಲೆ ಎಲ್ಲರೂ ಮನೆಯಲ್ಲಿಯೆ ಇರುವಂತಾಗಿದೆ. ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಗಳು ಸಂಪೂರ್ಣ ಬಂದ್ ಆಗಿದೆ. ಲಾಕ್ ಡೌನ್ ನಲ್ಲೀಗ ರಶ್ಮಿಕಾ ಹೈದರಾಬಾದ್ ಬಿಟ್ಟು ಕರ್ನಾಟಕದಲ್ಲಿ ನೆಲೆಸಿದ್ದಾರೆ. ಈ ಸಮಯದಲ್ಲಿ ಒಬ್ಬರನೊಬ್ಬರು ಮಿಸ್ ಮಾಡಿಕೊಳ್ಳುತ್ತಿರುವ ರಶ್ಮಿಕಾ ಮತ್ತು ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸುತ್ತಿದ್ದಾರೆ.

ಕಾಮ್ರೇಡ್ ಗೆ ವಿಶ್ ಮಾಡಿದ್ದ ರಶ್ಮಿಕಾ
ಇತ್ತೀಚಿಗೆ ವಿಜಯ್ ದೇವರಕೊಂಡ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ವಿಜಯ್ ಗೆ ಸಾಕಷ್ಟು ಗಣ್ಯರು, ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಶುಭಕೋರಿದ್ದಾರೆ. ನಟಿ ರಶ್ಮಿಕಾ ಸಹ ವಿಶ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. "ಹುಟ್ಟುಹಬ್ಬದ ಶುಭಾಶಯಗಳು ನನ್ನ ಕಾಮ್ರೇಡ್ ವಿಜಯ್ ದೇವರಕೊಂಡ" ಎಂದು ಹೇಳಿದ್ದಾರೆ.

'ಬೇಗ ಹೈದರಾಬಾದ್ ಗೆ ಬಾ...'
ರಶ್ಮಿಕಾ ವಿಶ್ ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ "ಮಂದಣ್ಣ ನಮ್ಮ ಗ್ಯಾಂಗ್ ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ. ಬೇಗ ಹೈದರಾಬಾದ್ ಗೆ ಬಾ" ಎಂದು ಹಾರ್ಟ್ ಇಮೋಜಿ ಹಾಕಿದ್ದಾರೆ.

'ನಾನು ಇಲ್ಲದೆ ನೀವು ಫನ್ ಮಾಡುವ ಹಾಗಿಲ್ಲ..'
ವಿಜಯ್ ದೇವರಕೊಂಡ ಪೋಸ್ಟ್ ಗೆ ರಶ್ಮಿಕಾ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. "ನೀವು ನಾನು ಇಲ್ಲದೆ ಫನ್ ಮಾಡದೆ ಇರುವುದು ಉತ್ತಮ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











