ಹಿಂದಿ ಜೆರ್ಸಿ ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ? ಕಾರಣ ಬಹಿರಂಗ ಪಡಿಸಿದ ರಶ್ಮಿಕಾ
ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮೆರೆಯುತ್ತಿರುವ ಸ್ಯಾಂಡಲ್ ವುಡ್ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು. ತೆಲುಗಿನ ಸೂಪರ್ ಹಿಟ್ 'ಜರ್ಸಿ' ಸಿನಿಮಾ ಹಿಂದಿ ರಿಮೇಕ್ ನಲ್ಲಿ ರಶ್ಮಿಕಾ ಕಾಣಿಸಿಕೊಳ್ಳುವುದು ಬಹುತೇಕ ಪಕ್ಕ ಆಗಿತ್ತು.
ಬಾಲಿವುಡ್ ನಟ ಶಾಹಿದ್ ಕಪೂರ್ ನಾಯಕನಾಗಿ ಮಿಂಚುತ್ತಿದ್ದಾರೆ. ರಶ್ಮಿಕಾ ಕೊನೆ ಕ್ಷಣದಲ್ಲಿ ಹಿಂದಿ ಜರ್ಸಿಯಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದ್ದರು. ರಶ್ಮಿಕಾ ಸಿನಿಮಾ ರಿಜೆಕ್ಟ್ ಮಾಡುತ್ತಿದ್ದಂತೆ ಸಾಕಷ್ಟು ಸುದ್ದಿಗಳು ಹರಿದಾಡಲು ಪ್ರಾರಂಭಿಸಿತ್ತು. ಅತೀ ಹೆಚ್ಚು ಸಂಭಾವನೆ ಬೇಡಿಕೆ ಇಟ್ಟ ಕಾರಣ ರಿಜೆಕ್ಟ್ ಮಾಡಲಾಯಿತು, ಚಿತ್ರತಂಡದ ಜೊತೆ ಕೊಬ್ಬು ತೋರಿಸಿದರು ಎನ್ನುವ ಮಾತುಗಳು ಹರಿದಾಡಲು ಪ್ರಾರಂಭಿಸಿದವು.

ಆದರೆ ಈಗ ರಶ್ಮಿಕಾ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಹಿಂದಿ ಜರ್ಸಿ ಸಿನಿಮಾ ಕೈ ಬಿಟ್ಟು ಬಗ್ಗೆ ಮಾತನಾಡಿದ್ದಾರೆ. ನಾನು ಒಂದು ಸಿನಿಮಾದ ಭಾಗವಾದರೆ ಸಂಪೂರ್ಣ ಆ ಸಿನಿಮಾದಲ್ಲಿ ತೊಡಗಿಸಬೇಕು. ನಾನು ಸಿನಿಮಾ ಒಪ್ಪಿಕೊಂಡರೆ ಆ ಸಿನಿಮಾಗೆ ಸಮಯ ಕೊಡಬೇಕು. ನನಗೆ ಸಾಧ್ಯವಿಲ್ಲ ಎಂದು ಭಾವಿಸುವ ಯಾವುದೆ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ. ಜರ್ಸಿ ಸಿನಿಮಾ ದೊಡ್ಡದು. ಯಾರಾದರು ಮಾಡುತ್ತಾರೆ" ಎಂದು ಹೇಳಿದ್ದಾರೆ.
ಇನ್ನು ಸಂಭಾವನೆ ಕಾರಣಕ್ಕೆ ರಿಜೆಕ್ಟ್ ಮಾಡಿದ್ದಾರೆ ಎನ್ನುವ ಬಗ್ಗೆಯು ಮಾತನಾಡಿದ್ದಾರೆ. ಇದು ಹಣದ ವಿಚಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಶ್ಮಿಕಾ ಸದ್ಯ ಮಹೇಶ್ ಬಾಬು ಅಭಿನಯದ ಸರಿಲೇರು ನೀಕವ್ವರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಭೀಷ್ಮಾ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











