ಸಮಂತಾ ಮಾಡಬೇಕಿದ್ದ 'ರೈನ್‌ಬೋ' ಸಿನಿಮಾ ರಶ್ಮಿಕಾ ಪಾಲಾಗಿದ್ದೇಕೆ? ಬದುಕಿನ ಬಗೆ ಬಗೆ ಬಣ್ಣ ಎಂದ ಕಿರಿಕ್ ಬೆಡಗಿ

ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಚಿತ್ರಕ್ಕೆ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. ಸದ್ದಿಲ್ಲದೇ ಸಿನಿಮಾ ಮೂಹೂರ್ತ ಸಮಾರಂಭ ಕೂಡ ನೆರವೇರಿದೆ. ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗುತ್ತಿದೆ. ವಿಶೇಷ ಅಂದ್ರೆ ಇದು ನಾಯಕಿ ಪ್ರಧಾನ ಸಿನಿಮಾ. ಕೆಲ ದಿನಗಳ ಹಿಂದೆ ಅಭಿಮಾನಿಗಳು ನೆಚ್ಚಿನ ನಟಿಯನ್ನು ಮಹಿಳಾ ಪ್ರಧಾನ ಚಿತ್ರದಲ್ಲಿ ನೋಡಲು ಇಷ್ಟಪಟ್ಟಿದ್ದರು. ಅದು ಈಗ ಈಡೇರುತ್ತಿದೆ.

'ವಾರಿಸು' ನಂತರ ರಶ್ಮಿಕಾ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಬಹಳ ಹಿಂದೆ ಶುರುವಾಗಿದ್ದ 'ಅನಿಮಲ್' ಸಿನಿಮಾ ಚಿತ್ರೀಕರಣ ನಡೀತಿತ್ತು. 'ಪುಷ್ಪ- 2' ಚಿತ್ರಕ್ಕೆ ಆಕೆಯೇ ನಾಯಕಿ ಅನ್ನೋದು ಫಿಕ್ಸ್ ಆಗಿತ್ತು. ಇತ್ತೀಚೆಗೆ 'ಭೀಷ್ಮ' ಸಿನಿಮಾ ಕಾಂಬಿನೇಷನ್‌ನಲ್ಲಿ ರಶ್ಮಿಕಾ ಮತ್ತೆ ನಟಿಸೋದು ಕನ್ಫರ್ಮ್‌ ಆಗಿತ್ತು. ಸ್ಪೆಷಲ್ ವಿಡಿಯೋ ಸಮೇತ ಅದನ್ನು ಖಚಿತಪಡಿಸಿದ್ದರು. ಇದೀಗ 'ರೈನ್‌ಬೋ' ಸಿನಿಮಾ ಸುದ್ದಿ ಬಂದಿದೆ. ಶಾಂತರುಬಾನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

Rashmika Starrer Rainbow movie Launched, the movie was initially planned with Samantha

ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ 'ರೈನ್‌ಬೋ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ಪ್ರೊಡಕ್ಷನ್ ನಂ. 30 ಹೆಸರಿನಲ್ಲಿ ಇದೇ ಸಂಸ್ಥೆ ಸಿನಿಮಾವೊಂದನ್ನು ಘೋಷಿಸಿತ್ತು. ಶಾಂತರುಬಾನ್ ನಿರ್ದೇಶನದಲ್ಲಿ ಸಮಂತಾ ನಟಿಸಬೇಕಿತ್ತು. ಆದರೆ ಅದೇ ಚಿತ್ರದಲ್ಲಿ ಈಗ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸಮಂತಾ ಮಯೋಸೈಟಿಸ್ ಸಮಸ್ಯೆ ಬಳಲುತ್ತಿದ್ದು ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ಹಾಗಾಗಿ ಈ ಸಿನಿಮಾ ಕೊಡಗಿನ ಕುವರಿ ಪಾಲಾಗಿದೆ.

ಹೈದರಾಬಾದ್‌ನಲ್ಲಿ 'ರೈನ್‌ಬೋ' ಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ. ಏಪ್ರಿಲ್ 7ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. 'ಖಾಕಿ', 'ಖೈದಿ', 'ಸುಲ್ತಾನ್', 'ಒಕೆ ಒಕ ಜೀವಿತಂ' ರೀತಿಯ ಹಿಟ್ ಸಿನಿಮಾಗಳನ್ನು ಈ ಸಂಸ್ಥೆ ನೀಡಿದೆ. 'ರೈನ್‌ಬೋ' ರಶ್ಮಿಕಾ ನಟನೆಯ ಮೊದಲ ಮಹಿಳಾ ಪ್ರಧಾನ ಸಿನಿಮಾ. ದೇವ್ ಮೋಹನ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಇದೊಂದು ರೊಮ್ಯಾಂಟಿಕ್ ಫ್ಯಾಂಟಸಿ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಹಿಂದೆ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ 'ಸುಲ್ತಾನ್' ಚಿತ್ರದಲ್ಲೂ ರಶ್ಮಿಕಾ ನಟಿಸಿದ್ದರು.

Rashmika Starrer Rainbow movie Launched, the movie was initially planned with Samantha

ಇನ್ನು 'ರೈನ್‌ಬೋ' ಸಿನಿಮಾ ಬಗ್ಗೆ ಟ್ವೀಟ್ ಮಾಡಿರುವ ರಶ್ಮಿಕಾ "ರೈನ್‌ಬೋ.. ಬದುಕಿನ ವಿಭಿನ್ನ ಬಣ್ಣಗಳು. ಈ ಸಿನಿಮಾ ನನಗೆ ಬಹಳ ವಿಶೇಷ. ನನಗೆ ನಿಮ್ಮೆಲ್ಲರ ಪ್ರೀತಿ, ಆಶಿರ್ವಾದ ಇದೆ ಎಂದುಕೊಳ್ಳುತ್ತೇನೆ. ಅದೇ ರೀತಿ ಇದು ನಿಮ್ಮ ಮುಂದಿನ ನೆಚ್ಚಿನ ಪಾತ್ರ ಆಗಬೇಕು ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಇನ್ನು ಸಮಂತಾ ಮಾಡಬೇಕಿದ್ದ ಪಾತ್ರ ರಶ್ಮಿಕಾ ಪಾಲಾಗಿರೋದು ಸ್ಯಾಮ್ ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದೆ.

More from Filmibeat

English summary
Rashmika Starrer Rainbow movie Launched, the movie was initially planned with Samantha. This is Rashmika's first woman centric film. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X