ಮಹೇಶ್ ಬಾಬು ಮಗನಿಗೆ ರವೀನಾ ಟಂಡನ್ ಪುತ್ರಿ ಹೀರೋಯಿನ್; ಅಮ್ಮನಂತೆ ಮಿಂಚುತ್ತಾಳಾ ರಾಶಾ?
ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಅಷ್ಟೇ ಅಲ್ಲದೆ ವೆಬ್ ಸೀರಿಸ್‌ನಲ್ಲಿಯೂ ನಟಿಸುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳು ತಮ್ಮನ್ನು ಮರೆಯುವುದಕ್ಕೆ ಬಿಟ್ಟಿಲ್ಲ. ಈಕೆ ಕೇವಲ ಬಾಲಿವುಡ್ ಸಿನಿಮಾ ಪ್ರಿಯರಿಗಷ್ಟೇ ಅಲ್ಲ. ಕನ್ನಡಿಗರಿಗೂ ತುಂಬಾನೇ ಚಿರಪರಿಚಿತ. 'ಉಪೇಂದ್ರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಮಸ್ತ್ ಮಸ್ತ್ ಹುಡುಗಿ ಎಂದು ಫೇಮಸ್ ಆಗಿದ್ದರು.
ಕೆಲವು ವರ್ಷಗಳ ಹಿಂದಷ್ಟೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಂಚಲನ ಮೂಡಿಸಿದ್ದ 'ಕೆಜಿಎಫ್ 2' ಸಿನಿಮಾ ರೆಮಿಕಾ ಸೇನ್ ಪಾತ್ರದಲ್ಲಿ ಗಮನ ಸೆಳೆದಿದ್ದರು. ಈ ಸಿನಿಮಾದಿಂದ ರವೀನಾ ಟಂಡನ್ ಅವರ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದೆ. ಇದೊಂದು ಕಡೆಯಾದರೆ, ನಟಿ ರವೀನಾ ಟಂಡನ್ ಅವರ ಪುತ್ರಿ ರಾಶಾ ತಡಾನಿ ದಕ್ಷಿಣ ಭಾರತದ ಸಿನಿಮಾ ಕಡೆಗೆ ಒಲವು ತೋರಿದ್ದಾರೆ.

ಹೌದು, ರವೀನಾ ಟಂಡನ್ ಪುತ್ರಿ ರಾಶಾ ಟಂಡನ್ ಟಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಈ ಸುದ್ದಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿದೆ. ರಾಶಾ ಈಗಾಗಲೇ ಬಾಲಿವುಡ್‌ನಲ್ಲಿ ಗಮನ ಸೆಳೆದಿದ್ದಾರೆ. ರಾಶಾ ತಮ್ಮ ಚೊಚ್ಚಲ ಹಿಂದಿ ಸಿನಿಮಾ 'ಆಜಾದ್' ಮೂಲಕ ಭರವಸೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ. ಈಗ ಟಾಲಿವುಡ್‌ನಲ್ಲಿ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.
ಅಂದ್ಹಾಗೆ ರವೀನಾ ಟಂಡನ್ ಪುತ್ರಿ ರಾಶಾ ತಡಾನಿ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಅಣ್ಣನ ಮಗ ಜಯ ಕೃಷ್ಣ ಘಟ್ಟಮನೇನಿ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇನ್ನೂ ಈ ಸಿನಿಮಾ ಟೈಟಲ್ ಇಟ್ಟಿಲ್ಲ. ತಾತ್ಕಾಲಿಕವಾಗಿ 'ಎಬಿ4'ಎಂದು ಕರೆಯಲಾಗುತ್ತಿದೆ. ಇನ್ನು ಮಹೇಶ್ ಬಾಬು ಅಣ್ಣನ ಮಗ ಜಯ ಕೃಷ್ಣ ಅವರಿಗೂ ಇದು ಚೊಚ್ಚಲ ಸಿನಿಮಾ. ಹೀಗಾಗಿ ಇಬ್ಬರು ಯುವ ಪ್ರತಿಭೆಗಳು ಚಿತ್ರರಂಗದಲ್ಲಿ ಯಾವ ರೀತಿ ಮೋಡಿ ಮಾಡಬಹುದೆಂಬುವುದನ್ನು ಕುತೂಹಲದಿಂದ ನೋಡುತ್ತಿದ್ದಾರೆ.

ರವೀನಾ ಟಂಡನ್ ಪುತ್ರಿ ರಾಶಾ ಹಾಗೂ ಮಹೇಶ್ ಬಾಬು ಅಣ್ಣನ ಮಗ ಜಯ ಕೃಷ್ಣ ಇಬ್ಬರೂ ಸಿನಿಮಾ ಹಿನ್ನೆಲೆಯಿಂದ ಬಂದವರೇ. ಹೀಗಾಗಿ ಈ ಸ್ಟಾರ್ ಕಿಡ್‌ಗಳು ಚಿತ್ರರಂಗದಲ್ಲಿ ಹೊಸ ನಿರೀಕ್ಷೆಯನ್ನಂತೂ ಹುಟ್ಟಾಕಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ಅಜಯ್ ಭೂಪತಿ ನಿರ್ದೇಶನ ಮಾಡಿದ್ದಾರೆ. ಸದ್ಯ ಇವರಿಬ್ಬರ ಸಿನಿಮಾ ಟಾಲಿವುಡ್‌ನಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದು, ಅಧಿಕೃತ ಘೋಷಣೆಯೊಂದು ಬಾಕಿ ಉಳಿದಿದೆ.
ರವೀನಾ ಟಂಡನ್ ಮಗಳು ರಾಶಾ ತಡಾನಿ ಈಗಾಗಲೇ ಸಿನಿಮಾಗೆ ಬೇಕಿರುವ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ತಮ್ಮ ಫಿಟ್ನೆಸ್ ಹಾಗೂ ಬ್ಯೂಟಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ರವೀನಾ ಟಂಡನ್ ಮಗಳಾಗಿರುವುದಕ್ಕೆ ಹಿಂದಿ ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಅಲ್ಲಿಯವರಿಗೆ ಪರಿಚಯವಿತ್ತು. ಈಗ ತೆಲುಗಿನಲ್ಲಿ ಅಭಿನಯಿಸುತ್ತಿರುವುದು ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡುತ್ತೆಂದು ಅಂದಾಜಿಸಲಾಗಿದೆ.
ಇನ್ನು ಜಯ ಕೃಷ್ಣ ಘಟ್ಟಮನೇನಿ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಅಣ್ಣ ರಮೇಶ್ ಬಾಬು ಅವರ ಪುತ್ರ. ಹೀಗಾಗಿ ಘಟ್ಟಮನೇನಿ ಕುಟುಂಬದಿಂದ ಮತ್ತೊಬ್ಬ ಹೀರೋ ಚಿತ್ರರಂಗಕ್ಕೆ ಪರಿಚಯವಾಗುತ್ತಿದೆ. ಇನ್ನು ಇವರಿಬ್ಬರ ಕಾಂಬಿನೇಷನ್ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿಸುವ ನಿರೀಕ್ಷೆಯಿದೆ. ಯುವ ಪ್ರೇಕ್ಷಕರಿಗೆ ಈ ಜೋಡಿ ತುಂಬಾ ಇಷ್ಟವಾಗುತ್ತೆಂದು ಸಿನಿಮಾ ಮಂದಿ ಭವಿಷ್ಯ ನುಡಿದಿದ್ದಾರೆ.
ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಅಜಯ್ ಭೂಪತಿಗೆ ಇದು ನಾಲ್ಕನೇ ಸಿನಿಮಾ. ಅವರು ಈ ಹಿಂದೆ 'ಆರ್‌ಎಕ್ಸ್ 100' ಮತ್ತು 'ಮಂಗಳವಾರಂ' ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈ ಯುವ ನಿರ್ದೇಶಕನ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಇದೊಂದು ಉತ್ತಮ ಪ್ರೇಮಕಥೆಯಾಗಿದ್ದು, ತೆಲುಗು ಪ್ರೇಕ್ಷಕರಿಗೆ ಇಷ್ಟ ಆಗುತ್ತೆಂದು ಹೇಳಲಾಗುತ್ತಿದೆ.
ರಾಶಾ ತಡಾನಿ ವೃತ್ತಿ ಜೀವನಕ್ಕೆ ಈ ಟಾಲಿವುಡ್ ಸಿನಿಮಾ ದೊಡ್ಡ ಮಟ್ಟಕ್ಕೆ ಯಶಸ್ಸು ತಂದುಕೊಂಡುವ ಸಾಧ್ಯತೆಯಿದೆ. ಇನ್ನೂ ರವೀನಾ ಟಂಡನ್ ಕೂಡ ಈ ಹಿಂದೆ ತೆಲುಗಿನ ದಿಗ್ಗಜರಾದ ನಾಗಾರ್ಜುನ ಮತ್ತು ಬಾಲಕೃಷ್ಣ ಅವರಂತಹ ಸ್ಟಾರ್‌ಗಳ ಜೊತೆ ನಟಿಸಿ ಜನಪ್ರಿಯತೆ ಗಳಿಸಿದ್ದರು. ಈಗ ಅವರ ಮಗಳು ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ರಾಶಾಗೆ ಈ ಸಿನಿಮಾದಲ್ಲಿ ಸವಾಲಿನ ಪಾತ್ರವಿದ್ದು, ಕೇವಲ ಗ್ಲಾಮರ್ ಪಾತ್ರವಾಗಿರದೆ ಉತ್ತಮ ಅಭಿನಯಕ್ಕೂ ಅವಕಾಶವಿದೆ ಎನ್ನಲಾಗಿದೆ.


Click it and Unblock the Notifications











