ಮೆಗಾಸ್ಟಾರ್ ಚಿರಂಜೀವಿ ಜೊತೆ ಅಭಿನಯಿಸಲು ರವಿತೇಜ ದುಬಾರಿ ಸಂಭಾವನೆ!

ಮೆಗಾಸ್ಟಾರ್ ಚಿರಂಜೀವಿ ಅವರ 154 ನೇ ಚಿತ್ರ ತೆರೆಮರೆಯಲ್ಲಿ ಭರ್ಜರಿಯಾಗಿ ತಯಾರಿ ನಡೆಸಿದೆ. ಈ ಚಿತ್ರದಲ್ಲಿ ನಟ ಚಿರಂಜೀವಿಗೆ ಶೃತಿ ಹಾಸನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಈ ಬಗ್ಗೆ ಸುದ್ದಿ ರಿವೀಲ್ ಆಗಿದೆ. ಈಗ ಚಿರಂಜೀವಿ ಜೊತೆಗೆ ಮತ್ತೊಬ್ಬ ಸ್ಟಾರ್ ನಟ ಅಭಿನಯಿಸಲು ಸಜ್ಜಾಗಿದ್ದಾನೆ.

ಟಾಲಿವುಡ್‌ನಲ್ಲಿ ಮಾಸ್ ಮಹಾರಾಜ ಅಂತಲೇ ಕರೆಸಿಕೊಳ್ಳುವ ರವಿತೇಜ ಚಿರಂಜೀವಿ ಜೊತೆಗೆ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಾಗಂತ ಇದು ಮಲ್ಟಿ ಸ್ಟಾರ್ ಸಿನಿಮಾ ಅಲ್ಲ. ಯಾಕೆಂದರೆ ಈ ಚಿತ್ರದಲ್ಲಿ ರವಿತೇಜ ಒಂದು ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅದು ತುಂಬಾನೇ ವಿಶೇಷವಾದ ಪಾತ್ರ ಆಗಿರಲಿದೆಯಂತೆ.

ಆದರೆ ಸಿನಿಮಾದಲ್ಲಿ ರವಿತೇಜ ಪಾತ್ರಕ್ಕಿಂತಲೂ ಹೆಚ್ಚಾಗಿ ಸದ್ದು ಮಾಡುತ್ತಿದೆ ಅವರ ಸಂಭಾವನೆ ಸಮಾಚಾರ. ಹೌದು ಚಿರಂಜೀವಿ ಸಿನಿಮಾದಲ್ಲಿ ಅಭಿನಯಿಸಲು ನಟ ರವಿತೇಜ ಹೆಚ್ಚಿನ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರಂತೆ. ಅದು ಅವರ ಸಿನಿಮಾಗಳ ಸಂಭಾವನೆಯ ಅರ್ಧದಷ್ಟು ಇದೆ. ಹಾಗಾಗಿ ಅತಿಥಿ ಪಾತ್ರಕ್ಕೆ ರವಿತೇಜ ಇಷ್ಟೊಂದು ಸಂಭಾವನೆ ಪಡೆಯುತ್ತಿರುವ ಬಗ್ಗೆ ಬಿಸಿ, ಬಿಸಿ ಚರ್ಚೆ ನಡೆಯುತ್ತಿದೆ.

ಚಿರು ಜೊತೆಗೆ ಅಭಿನಯಿಸಲು 10 ಕೋಟಿ ಸಂಭಾವನೆ!

ಚಿರು ಜೊತೆಗೆ ಅಭಿನಯಿಸಲು 10 ಕೋಟಿ ಸಂಭಾವನೆ!

ಅತಿಥಿ ಪಾತ್ರ ಆದರೂ ಕೂಡ ಚಿರಂಜೀವಿ ಜೊತೆಗೆ ಅಭಿನಯಿಸಲು, ರವಿತೇಜ 10 ಕೋಟಿ ರೂ ಸಂಭಾವನೆ ಪಡೆದುಕೊಂಡಿದ್ದಾರಂತೆ. ಈ ಚಿತ್ರದ ಶೂಟಿಂಗ್‌ಗಾಗಿ 20 ದಿನಗಳ ಕಾಲ್‌ಶೀಟ್‌ಗಳನ್ನು ನಿಗದಿಪಡಿಸಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಅವರು ಈ ಹಿಂದೆ ನಟಿಸಿದ್ದ, 'ಕಿಲಾಡಿ' ಚಿತ್ರಕ್ಕೆ 16 ರಿಂದ 18 ಕೋಟಿ ರೂಪಾಯಿ ಸಂಭಾವನೆ ಪಡೆದಿರುವುದಾಗಿ ವರದಿ ಆಗಿದೆ. ಹಾಗಾಗಿ ಅವರು ಅತಿಥಿ ಪಾತ್ರದಲ್ಲಿ ನಟಿಸಲು, ತಮ್ಮ ಸಿನಿಮಾ ಸಂಭಾವನೆಯ ಸುಮಾರು ಅರ್ಧದಷ್ಟು ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ.

3 ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಚಿರು- ರವಿತೇಜ!

3 ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಚಿರು- ರವಿತೇಜ!

ರವಿತೇಜ ಮತ್ತು ಚಿರಂಜೀವಿ ಈ ಹಿಂದೆ ಮೂರು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. 'ಅಣ್ಣಯ್ಯ' ಚಿತ್ರದಲ್ಲಿ ಚಿರಂಜೀವಿ ಸಹೋದರನ ಪಾತ್ರದಲ್ಲಿ ರವಿತೇಜ ಕಾಣಿಸಿಕೊಂಡಿದ್ದರು. ಮತ್ತು 'ಶಂಕರ್‌ದಾದಾ ಜಿಂದಾಬಾದ್' ಹಾಗೂ 'ಜಗದೇಕವೀರುಡು' ಚಿತ್ರದಲ್ಲಿ ಇಬ್ಬರು ಕೆಲವು ದೃಶ್ಯಗಳಲ್ಲಿ ಮಾತ್ರ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ಹಲವು ವರ್ಷಗಳ ಬಳಿಕ ಒಂದೇ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಹಾಗಾಗಿ ಇವರ ಪಾತ್ರದ ಮೇಲೆ ಹೆಚ್ಚಿನ ಕುತೂಹಲ ಮೂಡಿದೆ.

ಚಿರಂಜೀವಿಗೆ ಶೃತಿ ಹಾಸನ್ ನಾಯಕಿ!

ಚಿರಂಜೀವಿಗೆ ಶೃತಿ ಹಾಸನ್ ನಾಯಕಿ!

ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳುತ್ತಾ ಇದ್ದಾರೆ. ಶೃತಿ ಹಾಸನ್ ಚಿತ್ರರಂಗಕ್ಕೆ ಮರಳದ್ದೇ, ಮರಳಿದ್ದು ಆಕೆಯ ಲಕ್ ಬದಲಾಗಿದೆ. ಸಾಲು ಸಾಲು ಸಿನಿಮಾಗಳು ಶೃತಿ ಹಾಸನ್‌ಗೆ ಸಿಗುತ್ತಿವೆ. ಸದ್ಯ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಅಭಿನಯಿಸುವ ಅದೃಷ್ಟ ಪಡೆದುಕೊಂಡಿದ್ದಾರೆ. ಈ ಚಿತ್ರಕ್ಕೆ ಶೃತಿ ಕೂಡ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. 1.5 ಕೋಟಿ ಸಂಭಾವನೆ ಪಡೆಯುತ್ತಿದ್ದ ಶೃತಿ ಈ ಚಿತ್ರಕ್ಕೆ 2 ಕೋಟಿ ಸಂಭಾವನೆ ಪಡೆದಿರುವುದಾಗಿ ವರದಿ ಆಗಿದೆ.

ಚಿರಂಜೀವಿ, ರವಿತೇಜ ಫುಲ್ ಬ್ಯುಸಿ!

ಚಿರಂಜೀವಿ, ರವಿತೇಜ ಫುಲ್ ಬ್ಯುಸಿ!

ಚಿರಂಜೀವಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಅವರ ಬಹುನಿರೀಕ್ಷಿತ ಚಿತ್ರ 'ಆಚಾರ್ಯ' ಮತ್ತು 'ಗಾಡ್ ಫಾದರ್' ತೆರೆಗೆ ಬರಬೇಕಿದೆ. ಇದರೊಂದಿಗೆ 'ಭೋಲಾ ಶಂಕರ್' ಮತ್ತು 154ನೇ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಅತ್ತ ರವಿತೇಜ 'ರಾಮಾ ರಾವ್ ಆನ್ ಡ್ಯೂಟಿ', 'ರಾವಣಾಸುರ', 'ಧಮಾಕ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಚಿರಂಜೀವಿ ಜೊತೆಗೆ ಅಭಿನಯಿಸಲು ಸಜ್ಜಾಗಿದ್ದಾರೆ.

More from Filmibeat

English summary
Ravi Teja Demand Big Remuneration To Act In Chiranjeevi New Movie, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X