ಸ್ಟಾರ್ ನಟನ ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ರವಿತೇಜ?
ಟಾಲಿವುಡ್ ಸ್ಟಾರ್ ನಟ ರವಿತೇಜ ಇನ್ನೊಬ್ಬ ನಟನ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ತೆಲುಗು ಮಾಯಾನಗರಿಯಲ್ಲಿ ಸದ್ದು ಮಾಡ್ತಿದೆ.
ನಂದಮೂರಿ ಕಲ್ಯಾಣ್ ರಾಮ್ ನಟಿಸುತ್ತಿರುವ 'ಬಿಂಬಿಸಾರ' ಚಿತ್ರದಲ್ಲಿ ರವಿತೇಜ ನೆಗೆಟಿವ್ ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಈ ಕುರಿತು ರವಿತೇಜ ಜೊತೆ ಮಾತುಕತೆ ಮಾಡಲಾಗಿದ್ದು, ಮಾಸ್ ಮಹಾರಾಜ ಸಹ ಸಮ್ಮತಿ ಸೂಚಿರುವುದಾಗಿ ತಿಳಿದು ಬಂದಿದೆ.
ಬಿಂಬಿಸಾರ ಚಿತ್ರದ ಶೇಕಡಾ 70ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಕೇವಲ ವಿಲನ್ ಪಾತ್ರದ ಪ್ರಮುಖ ದೃಶ್ಯಗಳು ಮಾತ್ರ ಬಾಕಿ ಉಳಿದಿವೆ. ಈಗ ಆ ಪಾತ್ರಕ್ಕೆ ರವಿತೇಜ ಅಂತಹ ಸ್ಟಾರ್ ಹೀರೋ ಎಂಟ್ರಿಯಾಗುತ್ತಿರುವುದು ಕುತೂಹಲ ಹೆಚ್ಚಿಸಿದೆ.

ಅಂದ್ಹಾಗೆ, ಈ ಹಿಂದೆ ರವಿತೇಜ ನಟಿಸಿದ್ದ ಕಿಕ್ 2 ಚಿತ್ರವನ್ನು ಕಲ್ಯಾಣ್ ರಾಮ್ ನಿರ್ಮಿಸಿದ್ದರು. ಅದೇ ಸ್ನೇಹದಿಂದ ಕಲ್ಯಾಣ್ ರಾಮ್ ನಾಯಕನಾಗಿ ನಟಿಸುತ್ತಿರುವ ಚಿತ್ರದಲ್ಲಿ ರವಿತೇಜ ನೆಗೆಟಿವ್ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.
ಬಿಂಬಿಸಾರ ಚಿತ್ರದ ಬಗ್ಗೆ...
ಇದೊಂದು ಐತಿಹಾಸಿಕ ಚಿತ್ರ. ಇತ್ತೀಚಿಗಷ್ಟೆ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಮಲ್ಲಡಿ ವಸಿಷ್ಠ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.
2020ರಲ್ಲಿ ತೆರೆಕಂಡ 'ಕ್ರ್ಯಾಕ್' ಸಿನಿಮಾದಲ್ಲಿ ಕೊನೆಯದಾಗಿ ರವಿತೇಜ ಕಾಣಿಸಿಕೊಂಡಿದ್ದರು. ಸದ್ಯ ಕಿಲಾಡಿ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.


Click it and Unblock the Notifications











