For Quick Alerts
  ALLOW NOTIFICATIONS  
  For Daily Alerts

  ರವಿತೇಜ ನಟನೆಯ 'ಕ್ರ್ಯಾಕ್' ಸಿನಿಮಾದ ನಾಲ್ಕು ದಿನದ ಗಳಿಕೆ ಎಷ್ಟು ಗೊತ್ತೆ?

  |

  ಮಾಸ್ ಮಹಾರಾಜ ರವಿತೇಜ ಗೆ ಕಮ್ ಬ್ಯಾಕ್ ಸಿನಿಮಾ ಎಂದೇ ಹೇಳಲಾಗುತ್ತಿದ್ದ 'ಕ್ರ್ಯಾಕ್' ಸಿನಿಮಾ ತೆರೆ ಕಂಡು ನಾಲ್ಕು ದಿನವಾಗಿದ್ದು ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ.

  'ಕ್ರ್ಯಾಕ್' ಸಿನಿಮಾವನ್ನು ಮೊದಲಿಗೆ ಒಟಿಟಿಯಲ್ಲಿ ಬಿಡುಗಡೆ ಮಾಡಲು ಮಾತುಕತೆ ಆಗಿತ್ತು. ಆದರೆ ರವಿತೇಜ ಒತ್ತಾಯದ ಮೇರೆಗೆ ಹಣದ ಕೊರತೆ ಇದ್ದರೂ ದೊಡ್ಡ ರಿಸ್ಕ್ ಅನ್ನೇ ತೆಗೆದುಕೊಂಡರು ನಿರ್ಮಾಪಕ ಠಾಗೋರ್ ಮಧು. ಆದರೆ ಈಗ ಸಿನಿಮಾದ ಕಲೆಕ್ಷನ್ ಚೆನ್ನಾಗಿಯೇ ಆಗುತ್ತಿದ್ದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

  'ಕ್ರ್ಯಾಕ್' ಸಿನಿಮಾ ಬಿಡುಗಡೆ ಮಾಡುವುದೇ ಕಷ್ಟವಾಗಿದ್ದ ಪರಿಸ್ಥಿತಿ ಉದ್ಭವವಾಗಿತ್ತು. ನಿರ್ಮಾಪಕರು ಹಾಗೂ ಫೈನಾನ್ಶಿಯರ್‌ಗಳ ಮಧ್ಯೆ ಹಣಕಾಸಿನ ವಿಷಯಕ್ಕೆ ಮನಸ್ಥಾಪ ಉಂಟಾಗಿದ್ದ ಕಾರಣ, ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿತ್ತು. ಕೊನೆಗೆ ರವಿತೇಜ ಮಾತುಕತೆ ನಡೆಸಿ ಎಲ್ಲವನ್ನೂ ಸರಿ ಮಾಡಿ ಸಿನಿಮಾ ಬಿಡುಗಡೆ ಮಾಡಲಾಯಿತು.

  ಜನವರಿ 9 ರಂದು ಕ್ರ್ಯಾಕ್ ಸಿನಿಮಾ ಬಿಡುಗಡೆ

  ಜನವರಿ 9 ರಂದು ಕ್ರ್ಯಾಕ್ ಸಿನಿಮಾ ಬಿಡುಗಡೆ

  ಜನವರಿ 9 ರಂದು ಕ್ರ್ಯಾಕ್ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನ ಗಳಿಸಿದ್ದು ಬರೋಬ್ಬರಿ 6.54 ಕೋಟಿ ರೂಪಾಯಿ. ಚಿತ್ರಮಂದಿರಗಳ ಮೇಲೆ ಕೊರೊನಾ ನಿಯಮಗಳಿದ್ದರೂ 6.54 ಕೋಟಿ ಮೊದಲ ದಿನ ಗಳಿಸಿದ್ದು ಒಳ್ಳೆಯ ಸಾಧನೆಯೇ.

  ಒಟ್ಟು ಗಳಿಸಿದ್ದು ಎಷ್ಟು?

  ಒಟ್ಟು ಗಳಿಸಿದ್ದು ಎಷ್ಟು?

  ಎರಡನೇ ದಿನ ಅಂದರೆ ಭಾನುವಾರದಂದು 3.15 ಕೋಟಿ ರೂಪಾಯಿ. ಮೂರನೇ ದಿನ 2.86 ಕೋಟಿ. ನಾಲ್ಕನೇ ದಿನ ಮತ್ತೆ 3 ಕೋಟಿ ರೂಪಾಯಿ ಹಣವನ್ನು ಕ್ರ್ಯಾಕ್ ಸಿನಿಮಾ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಗಳಿಸಿದೆ.

  ಮಾಸ್ಟರ್ ಸಿನಿಮಾದಿಂದ ಪ್ರತಿಸ್ಪರ್ಧೆ

  ಮಾಸ್ಟರ್ ಸಿನಿಮಾದಿಂದ ಪ್ರತಿಸ್ಪರ್ಧೆ

  ಮೂರನೇ ದಿನಕ್ಕೆ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾದಿಂದ ಭಾರಿ ಪ್ರತಿಸ್ಪರ್ಧೆ ಎದುರಾದರೂ ಸಹ 'ಕ್ರ್ಯಾಕ್' ಸಿನಿಮಾ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಗೆ ಮುನ್ನಾ ಹಣಕಾಸಿನ ಮುಗ್ಗಟ್ಟಲ್ಲಿ ಸಿಲುಕಿದ್ದ ನಿರ್ಮಾಪಕ ಈಗ ತುಸು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

  ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada
  ಗೋಪಿಚಂದ್ ಮಾಲಿನೇನಿ ನಿರ್ದೇಶನ

  ಗೋಪಿಚಂದ್ ಮಾಲಿನೇನಿ ನಿರ್ದೇಶನ

  ಕ್ರ್ಯಾಕ್ ಸಿನಿಮಾದಲ್ಲಿ ರವಿತೇಜ ಜೊತೆ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸಮುದ್ರಕಿಣಿ, ರವಿ ಶಂಕರ್, ಅಲಿ, ಚಿರಾಗ್ ಗಣಿ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ನಿರ್ದೇಶನ ಮಾಡಿರುವುದು ಗೋಪಿಚಂದ್ ಮಾಲಿನೇನಿ.

  Read more about: telugu
  English summary
  Ravi Teja's Telugu movie Krack box office collection is good. Opening day Krack collected 6.54 crore rs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X