"ಜಿಂಕೆಗಳನ್ನ ಬೇಟೆಯಾಡುವ ಹುಲಿ ನೋಡಿರ್ತಿಯಾ.. ಹುಲಿಗಳನ್ನ ಬೇಟೆಯಾಡುವ ಹುಲಿ ನೋಡಿದ್ದೀಯಾ"
ಮಾಸ್ ಮಹಾರಾಜ ರವಿತೇಜಾ ನಟನೆಯ 'ಟೈಗರ್ ನಾಗೇಶ್ವರ್ ರಾವ್' ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಮೊದಲ ನೋಟದಲ್ಲೇ ಕಿಕ್ ಕೊಡ್ತಿರೋ ಸ್ಯಾಂಪಲ್ ಝಲಕ್ ಸಿನಿರಸಿಕರ ಗಮನ ಸೆಳೆದಿದೆ. ವಂಶಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. 70ರ ದಶಕದ ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಕಟ್ಟಿಕೊಡಲಾಗ್ತಿದೆ.
ಗೋದಾವರಿ ನದಿಗೆ ಅಡ್ಡಲಾಗಿ ರಾಜಮಂಡ್ರಿಯಲ್ಲಿ ಹ್ಯಾವ್ಲಾಕ್ ಸೇತುವೆ ನಿರ್ಮಿಸಲಾಗಿದೆ. ಇದು ಭಾರತದ 3ನೇ ಅತಿ ಉದ್ದದ ರಸ್ತೆ ಹಾಗೂ ರೈಲ್ವೆ ಸೇತುವೆ ಎನಿಸಿಕೊಂಡಿದೆ. ಈ ಸೇತುವೆ ಮೇಲೆ 'ಟೈಗರ್ ನಾಗೇಶ್ವರ್ ರಾವ್' ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿದೆ. ಚಿತ್ರದಲ್ಲಿ ರಗಡ್ ಲುಕ್‌ನಲ್ಲಿ ರವಿತೇಜಾ ದರ್ಶನ ಕೊಟ್ಟಿದ್ದಾರೆ. ಗಡ್ಡ ಬಿಟ್ಟು, ಗಾಯಗೊಂಡ ಮುಖವನ್ನು ತೋರಿಸುತ್ತಾ ಮಾಸ್ ಲುಕ್‌ನಲ್ಲಿ ರವಿತೇಜಾ ಕಾಣಿಸಿಕೊಂಡಿದ್ದಾರೆ. ಸದ್ಯ 5 ಭಾಷೆಗಳಲ್ಲಿ ಟೀಸರ್ ರಿಲೀಸ್ ಆಗಿದ್ದು ಕನ್ನಡದಲ್ಲಿ ಫಸ್ಟ್ ಲುಕ್ ಟೀಸರ್‌ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಧ್ವನಿಯಾಗಿದ್ದಾರೆ.

ಭಾರತದ ಕುಖ್ಯಾತ ಕಳ್ಳ ಎನಿಸಿಕೊಂಡಿದ್ದ 'ಟೈಗರ್ ನಾಗೇಶ್ವರ್ ರಾವ್' ಪ್ರಪಂಚವನ್ನು ಸೆಂಚುರಿ ಸ್ಟಾರ್ ಪರಿಚಯಿಸಿದ್ದಾರೆ. ಇನ್ನು ತೆಲುಗಿನಲ್ಲಿ ವೆಂಕಟೇಶ್ ದಗ್ಗುಬಾಟಿ, ಬಾಲಿವುಡ್‌ನಲ್ಲಿ ಜಾನ್ ಅಬ್ರಾಂ, ತಮಿಳಿನಲ್ಲಿ ಕಾರ್ತಿ ಹಾಗೂ ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಫಸ್ಟ್ ಲುಕ್‌ಗೆ ವಾಯ್ಸ್ ಓವರ್ ನೀಡಿದ್ದಾರೆ. "ಜಿಂಕೆಗಳನ್ನು ಬೇಟೆಯಾಡುವ ಹುಲಿ ನೋಡಿರ್ತಿಯಾ..ಹುಲಿಗಳನ್ನು ಬೇಟೆಯಾಡುವ ಹುಲಿ ನೋಡಿದ್ದೀಯಾ" ಎನ್ನುವ ಶಿವಣ್ಣ ಡೈಲಾಗ್ ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಾಕ್ಕಿದೆ.
ಕುಖ್ಯಾತ ಕಳ್ಳನ ಕತೆ
70ರ ದಶಕದಲ್ಲಿ ಹೈದ್ರಾಬಾದ್‌ನ ಸ್ಟುವರ್ಟ್ ಪುರಂ ಹಳ್ಳಿಯೊಂದರಲ್ಲಿದ ಕುಖ್ಯಾತ ಕಳ್ಳ ಟೈಗರ್ ನಾಗೇಶ್ವರ್ ರಾವ್ ಜೀವನವನ್ನಾಧರಿಸಿ ಸಿನಿಮಾ ಮಾಡಲಾಗ್ತಿದೆ. ಚಿತ್ರದಲ್ಲಿ ಮಾಸ್ ಮಹಾರಾಜಾನ ಲುಕ್, ಗೆಟಪ್, ಬಾಡಿ ಲಾಗ್ವೇಜ್ ಎಲ್ಲಾ ಬದಲಾಗಿದೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ರವಿತೇಜಾಗೆ ಜೊತೆಯಾಗಿದ್ಧಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ. ಪ್ರಕಾಶ್ ಕುಮಾರ್ ಸಂಗೀತ ಈ ಚಿತ್ರಕ್ಕಿದೆ. ಅಭಿಷೇಕ್ ಅಗರ್‌ವಾಲ್ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

ದಸರಾಗೆ 'ಟೈಗರ್' ಬೇಟೆ
ದಸರಾ ಹಬ್ಬದ ಸಂಭ್ರಮದಲ್ಲಿ ಅಕ್ಟೋಬರ್ 22ರಂದು 'ಟೈಗರ್ ನಾಗೇಶ್ವರ್ ರಾವ್' ಸಿನಿಮಾ ಬಿಡುಗಡೆಯಾಗಲಿದೆ. ಅಂದರೆ ದಸರಾ ಸಂಭ್ರಮದಲ್ಲಿ ಬಾಕ್ಸಾಫೀಸ್‌ನಲ್ಲಿ ಟೈಗರ್ ಬೇಟೆ ಶುರುವಾಗಲಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ದಸರಾ ರಜೆಯಲ್ಲಿ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಥಿಯೇಟರ್‌ಗೆ ಬರುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಆ ಸಮಯದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.
ರವಿತೇಜಾಗೆ ಬೇಕಿದೆ ದೊಡ್ಡ ಬ್ರೇಕ್
ಇತ್ತೀಚೆಗೆ ರವಿತೇಜಾ ನಟನೆಯ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಎಲ್ಲವೂ ಆವರೇಜ್ ಸಿನಿಮಾ ಎನಿಸಿಕೊಳ್ತಿದೆ. ಕೊನೆಯದಾಗಿ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಚಿತ್ರದಲ್ಲಿ ಮಾಸ್ ಮಹಾರಾಜ ಅಭಿಮಾನಿಗಳ ಮನಗೆದ್ದಿದ್ದರು. ಚಿರು ಜೊತೆ ಒಂದೊಳ್ಳೆ ಪಾತ್ರದಲ್ಲಿ ಅಬ್ಬರಿಸಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಇನ್ನು ಕಳೆದ ತಿಂಗಳು ಬಂದ 'ರಾವಣಾಸುರ' ಸಿನಿಮಾ ಕೂಡ ಒಂದು ರೇಂಜಿಗೆ ಹಿಟ್ ಆಗಿದೆ.
ಮೊದಲ ಪ್ಯಾನ್ ಇಂಡಿಯಾ ಚಿತ್ರ
ಸದ್ಯ ಎಲ್ಲಾ ಇಂಡಸ್ಟ್ರಿಗಳಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ಸ್ಟಾರ್ ನಟರು ದೊಡ್ಡ ಬಜೆಟ್‌ನ ದೊಡ್ಡ ಸಿನಿಮಾಗಳಲ್ಲಿ ನಟಿಸುವಂತಾಗಿದೆ. 'ಟೈಗರ್ ನಾಗೇಶ್ವರ್ ರಾವ್' ರವಿತೇಜಾ ನಟನೆಯ ಮೊದಲ ಪ್ಯಾನ್ ಇಂಡಿಯಾ ಪ್ರಾಜೆಕ್ಟ್. ಇಂತಾದೊಂದು ಚಿತ್ರಕ್ಕಾಗಿ ಮಾಸ್ ಮಹಾರಾಜಾ ಒಳ್ಳೆ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ದೊಡ್ಡ ಕಳ್ಳನಾಗಿ ಈ ಚಿತ್ರದಲ್ಲಿ ನಟಿಸ್ತಿದ್ದಾರೆ.


Click it and Unblock the Notifications











