ಹಿಂದಿಯಲ್ಲಿ ರವಿತೇಜ 'ಕಿಲಾಡಿ' ಸೋಲು: ಎಲ್ಲಾ ಚಿತ್ರವೂ 'ಪುಷ್ಪ' ಆಗಲು ಸಾಧ್ಯವಿಲ್ಲ!

ತೆಲುಗು ನಟ ಮಾಸ್ ಮಹಾರಾಜ ರವಿತೇಜ ಅವರ 'ಕಿಲಾಡಿ' ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಅಷ್ಟು ದೊಡ್ಡ ಮಟ್ಟಿಗೆ ಸದ್ದು ಮಾಡದೇ ಇದ್ದರೂ ತೆಲುಗು ಬಾಕ್ಸಾಫೀಸ್‌ನಲ್ಲಿ ಸಮಾಧಾನಕರ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರಲ್ಲಿ ರವಿತೇಜ ಜೊತೆಗೆ ಡಿಂಪಲ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹಲವು ಹೆಸರಾಂತ ಕಲಾವಿದರೂ ಇದ್ದಾರೆ.

ರವಿತೇಜ ಅವರನ್ನು ಮಾಸ್ ಮಹಾರಾಜ ಅಂತಲೇ ಕರೆಯಲಾಗುತ್ತದೆ. ಹಾಗಾಗಿ ಅವರ ಮಾಸ್ ಸಿನಿಮಾಗಳಿಗೆ ಪ್ರತ್ಯೇಕವಾದ ಅಭಿಮಾನಿ ಬಳಗ ಇದೆ. ಆದರೆ ಈ ಬಾರಿ ಯಾಕೋ ರವಿತೇಜ ಎಡವಿದ್ದಾರೆ ಎಂದು ಹೇಳಲಾಗುತ್ತಿದೆ. 'ಕಿಲಾಡಿ' ಸಿನಿಮಾ ಹಿಂದಿಯಲ್ಲೂ ಕೂಡ ರಿಲೀಸ್ ಆಗಿದೆ. ಆದರೆ ಹಿಂದಿ ಬಾಕ್ಸಾಫೀಸ್‌ನಲ್ಲಿ ಕಿಲಾಡಿ ಸೋತು ಸುಣ್ಣವಾಗಿದೆ.

'ಪುಷ್ಪ' ಸಿನಿಮಾ ಮಾದರಿಯಲ್ಲಿ ಕಿಲಾಡಿ ಚಿತ್ರ ಕೂಡ ತೆಲುಗಿನ ಜೊತೆಗೆ ಹಿಂದಿಯಲ್ಲೂ ಕೂಡ ತೆರೆಕಂಡಿದೆ. ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಯಾಕೆಂದರೆ ಪುಷ್ಪ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಉತ್ತರ ಭಾರತದಲ್ಲಿ ರೆಸ್ಪಾನ್ಸ್ ಸಿಕ್ಕಿದೆ. ಅದೆ ರೀತಿ ಚಿತ್ರಕ್ಕೂ ಒಂದು ಮಟ್ಟಿಗಿನ ಬೇಡಿಕೆ ಸಿಗುತ್ತೆ ಎಂದು ಊಹಿಸಲಾಗಿತ್ತು. ಅದರೆ ಅದು ಸುಳ್ಳಾಗಿ ಹೋಗಿದೆ.

ಬಾಲಿವುಡ್‌ ಬೆಲ್ಟ್‌ನಲ್ಲಿ ರವಿತೇಜ ಚಿತ್ರಗಳಿಗೆ ಬೇಡಿಕೆ!

ಬಾಲಿವುಡ್‌ ಬೆಲ್ಟ್‌ನಲ್ಲಿ ರವಿತೇಜ ಚಿತ್ರಗಳಿಗೆ ಬೇಡಿಕೆ!

ವಾಸ್ತವವಾಗಿ, ರವಿತೇಜಾ ಅವರ ಚಲನಚಿತ್ರಗಳು ಬಾಲಿವುಡ್ ಅಂಗಳದಲ್ಲಿ ಬೇಡಿಕೆ ಇದೆ. ಸ್ಯಾಟಲೈಟ್ ಚಾನೆಲ್‌ಗಳು ಮತ್ತು ಯೂಟ್ಯೂಬ್‌ನಲ್ಲಿ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿವೆ. ಅವರು ದಕ್ಷಿಣದಲ್ಲಿ ಮಾತ್ರ ಅಲ್ಲದೆ ಹಿಂದಿ ಬೆಲ್ಟ್‌ನಲ್ಲೂ ಕೂಡ ಸ್ಟಾರ್ ನಟ. ರವಿತೇಜ ಸಿನಿಮಾಗಳನ್ನು ಹಿಂದಿ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ. ಆದರೆ ಈ ಬಾರಿ ಅವರ ಆ ಸ್ಟಾರ್‌ಗಿರಿ ಪ್ರಯೋಜನ ಆಗಿಲ್ಲ. ಸ್ಮಾಲ್ ಸ್ಕ್ರೀನ್‌ನಲ್ಲಿ ಅವರ ಡಬ್ಬಿಂಗ್ ಸಿನಿಮಾಗಳನ್ನು ನೋಡಿ ಮೆಚ್ಚಿ, ಗೆಲ್ಲಿಸಿದ ಜನ ಥಿಯೇಟರ್‌ಗೆ ಬಂದಿಲ್ಲ.

ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 'ಕಿಲಾಡಿ'ಗೆ ಸೋಲು!

ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 'ಕಿಲಾಡಿ'ಗೆ ಸೋಲು!

ಮಾಸ್ ಮಹಾರಾಜ್ ರವಿತೇಜ ಅಭಿನಯದ 'ಕಿಲಾಡಿ' ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರ ತೆಲುಗು ಜೊತೆಗೆ ಹಿಂದಿಯಲ್ಲೂ ಕೂಡ ರಿಲೀಸ್ ಆಗಿದೆ. ಪುಷ್ಪ ಚಿತ್ರಕ್ಕೆ ಸಿಕ್ಕ ಯಶಸ್ಸು ಎಲ್ಲಾ ಸಿನಿಮಾಗಳನ್ನು ಹಿಂದಿಯಲ್ಲಿ ರಿಲೀಸ್ ಮಾಡುವಂತೆ ಪ್ರೇರೇಪಣೆ ಮಾಡುತ್ತಿದೆ. ಅಂತೆಯೇ 'ಕಿಲಾಡಿ' ಸಿನಿಮಾ ಹಿಂದಿಗೆ ಡಬ್ ಆಗಿ ರಿಲೀಸ್ ಆಗಿದೆ. ಆದರೆ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸಂಪೂರ್ಣ ಸೋಲು ಕಂಡಿದೆ. ಹಿಂದಿ ಅವತರಣಿಕೆಯಿಂದ ಗಳಿಕೆ ಆಗಿಲ್ಲವಂತೆ. ಕೆಲವು ಕಡೆ ಸೊನ್ನೆ ಗಳಿಕೆ ಎಂದು ಕೂಡ ವರದಿ ಆಗಿದೆ.

ರವಿತೇಜನ 'ಕಿಲಾಡಿ' ಗಳಿಸಿದ್ದು ಎಷ್ಟು!

ರವಿತೇಜನ 'ಕಿಲಾಡಿ' ಗಳಿಸಿದ್ದು ಎಷ್ಟು!

ರವಿತೇಜ ಅಭಿನಯದ ಈ ಚಿತ್ರ ಅಷ್ಟೇನೂ ದೊಡ್ಡ ಮಟ್ಟದ ಸದ್ದು ಮಾಡಿಲ್ಲ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ಸಿನಿಮಾ ಸೀಮಿತ ವರ್ಗಕ್ಕೆ ಮಾತ್ರ ಮೆಚ್ಚುಗೆ ಆಗಿದೆ. ಹಾಗಾಗಿ ಇದು ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ. ಬಾಕ್ಸಾಫೀಸ್‌ನಲ್ಲಿ 'ಕಿಲಾಡಿ' ಅಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಸಿನಿಮಾದ ಒಟ್ಟಾರೆ 7 ದಿನದ ಕಲೆಕ್ಷನ್ 21.80 ಕೋಟಿ ಎಂದು ತಿಳಿದು ಬಂದಿದೆ. ನಾರ್ತ್‌ನಲ್ಲಿ ಸಿನಿಮಾ ಕೊಂಚ ಮಟ್ಟಿಗೆ ಕಲೆಕ್ಷನ್ ಮಾಡಿದ್ದರೆ. ಒಟ್ಟಾರೆ ಕಲೆಕ್ಷನ್ ಲೆಕ್ಕಾಚಾರ ಹೆಚ್ಚಾಗುತ್ತಿತ್ತು.

'ಧಮಾಕ' ಚಿತ್ರಕ್ಕೆ ರವಿತೇಜ ಸಜ್ಜು!

'ಧಮಾಕ' ಚಿತ್ರಕ್ಕೆ ರವಿತೇಜ ಸಜ್ಜು!

ಕಿಲಾಡಿ ಚಿತ್ರದ ಬಳಿಕ ನಟ ರವಿತೇಜ ತಮ್ಮ ಮುಂದಿನ ಚಿತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ರವಿತೇಜ ಮುಂದಿನ ಸಿನಿಮಾ 'ಧಮಾಕ' ಈ ಚಿತ್ರದಲ್ಲಿ ರವಿತೇಜ ಜೊತೆಗೆ ಕನ್ನಡತಿ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಶ್ರೀಲೀಲಾ ಅವರ ಮತ್ತು ರವಿತೇಜ ಅವರ ಲುಕ್‌ ಕೂಡ ಇತ್ತೀಚೆಗೆ ರಿವೀಲ್ ಆಗಿತ್ತು. ಈ ಮೂಲಕ ಶ್ರೀಲೀಲಾ ತೆಲುಗಿನಲ್ಲಿ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಇನ್ನು ರವಿತೇಜ ಅವರ ಮುಂದಿನ ಸಿನಿಮಾಗೆ ಅಭಿಮಾನಿಗಳು ಅಲ್ ದಿ ಬೆಸ್ಟ್ ಹೇಳುತ್ತಿದ್ದಾರೆ.

More from Filmibeat

English summary
Ravi Teja's Khiladi Zero Collection In Hindi, Big Flop For Star Hero
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X