RC 15: ರಾಮ್ ಚರಣ್- ಶಂಕರ್ ಚಿತ್ರದಲ್ಲಿ ನಟಿಸಲು ಮೋಹನ್ ಲಾಲ್ ನಿರಾಕರಿಸಿದ್ದು ಯಾಕೆ?

ಟಾಲಿವುಡ್ ನಿಂದ ಬಿಗ್ ಪ್ರಾಜೆಕ್ಟ್ ಸಿನಿಮಾಗಳು ದಿನೇದಿನೇ ದೊಡ್ಡಮಟ್ಟದಲ್ಲಿ ಸೆಟ್ಟೇರುತ್ತಿದೆ. ಇತ್ತೀಚಿನ ದಿನಗಳಲ್ಲಿ ತೆಲುಗಿನ ಸ್ಟಾರ್ ಹೀರೋಗಳಿರುವ ಪ್ಯಾನ್ ಇಂಡಿಯಾ ಸಿನಿಮಾಗಳು ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದ್ದಂತೆ ಇಡೀ ಭಾರತ ತೆಲುಗು ಚಿತ್ರರಂಗದತ್ತ ಗಮನ ಹರಿಸುತ್ತಿದೆ. ಈ ಅನುಕ್ರಮದಲ್ಲಿ ರಾಮ್ ಚರಣ್ ತೇಜ ನಾಯಕನಾಗಿ ಬಿಗ್ ಸಿನಿಮಾ ತಯಾರಾಗುತ್ತಿದೆ. ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕರಾದ ಶಂಕರ್ ರವರು ನಿರ್ದೇಶಿಸಿದ್ದಾರೆ. ಸಿನಿಮಾ ಘೋಷಣೆಯಾದ ತಕ್ಷಣ ಮೆಗಾ ಅಭಿಮಾನಿಗಳಲ್ಲಿ ಸಂಭ್ರಮ ಶುರುವಾಗಿದೆ. ಇದರ ಜೊತೆಗೆ ಚಿತ್ರಕ್ಕೆ ಸಂಬಂಧಿಸಿದಂತೆ ಆಗಾಗ ಹೊರಬರುತ್ತಿರುವ ಅಪ್‌ಡೇಟ್‌ಗಳು ಹೆಚ್ಚು ಕುತೂಹಲಕಾರಿಯಾಗಿವೆ. ಇತ್ತೀಚೆಗಷ್ಟೇ ರಾಮ್ ಚರಣ್ ಪಾತ್ರದ ಬಗ್ಗೆ ಕ್ರೇಜಿ ಸುದ್ದಿಯೊಂದು ವೈರಲ್ ಆಗುತ್ತಿದೆ.

ಈ ಅದ್ಧೂರಿ ಚಿತ್ರದಲ್ಲಿ ರಾಮ್ ಚರಣ್ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಫಿಲಂ ನಗರದಿಂದ ಕೇಳಿಬರುತ್ತಿರುವ ಮಾತು. ಅದರಲ್ಲಿ ಒಂದು ಸಾಮಾನ್ಯ ವ್ಯಕ್ತಿಯ ಪಾತ್ರವಾದರೆ ಇನ್ನೊಂದು ಸೀರಿಯಸ್ ಗೆಟಪ್. ಚಿತ್ರದಲ್ಲಿ ಚೆರ್ರಿ ಬಲಾಢ್ಯನಾಗಿ, ಗಂಭೀರ ಪಾತ್ರದಲ್ಲಿ ಹೈಲೈಟ್ ಆಗಲಿರುವುದರಿಂದ ರಾಮ್ ಚರಣ್ ಪಾತ್ರಕ್ಕೆ ಶಂಕರ್ ಸಾಕಷ್ಟು ಶ್ರಮವಹಿಸುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ದಿಲ್ ರಾಜು ನಿರ್ಮಾಣದ ಈ ಚಿತ್ರವು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುಮಾರು 200 ಕೋಟಿ ರುಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಚಿತ್ರದಲ್ಲಿ ರಾಮ್ ಚರಣ್ ತೇಜ ಎದುರು ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ಇದು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ನ 50 ನೇ ಚಿತ್ರವಾಗಿರುವುದರಿಂದ ದಿಲ್ ರಾಜು ಕೂಡ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಪೊಲಿಟಿಕಲ್ ಆ್ಯಕ್ಷನ್ ಡ್ರಾಮಾವಾಗಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಅದ್ಧೂರಿ ಸಾಹಸ ದೃಶ್ಯಗಳೊಂದಿಗೆ ವಿಶುವಲ್ ವಂಡರ್ ಮಾಡಲು ಶಂಕರ್ ಮತ್ತು ದಿಲ್ ರಾಜು ಪ್ಲಾನ್ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಚಿತ್ರೀಕರಣ ಸಹ ನಡೆಯುತ್ತಿದೆ.

ಶಂಕರ್ ನಿರ್ದೇಶನದ ಮೊದಲ ತೆಲುಗು ಚಿತ್ರ

ಶಂಕರ್ ನಿರ್ದೇಶನದ ಮೊದಲ ತೆಲುಗು ಚಿತ್ರ

ತಮಿಳು ನಿರ್ದೇಶಕ ಶಂಕರ್ ಅವರಿಗೆ ತೆಲುಗಿನಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಅವರ ಎಲ್ಲಾ ಚಿತ್ರಗಳು ಕೂಡ ತೆಲುಗಿಗೆ ಡಬ್ ಕೂಡ ಆಗಿದೆ ಬಹಳಷ್ಟು ಚಿತ್ರಗಳು ದೊಡ್ಡಮಟ್ಟದ ಗೆಲುವನ್ನು ಕೂಡ ಕಂಡಿವೆ. ಇದೇ ಮೊದಲ ಬಾರಿಗೆ ಶಂಕರ್ ನೇರ ತೆಲುಗು ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಕಾರಣದಿಂದಲೇ ರಾಮ್ ಚರಣ್- ಶಂಕರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರದ ಮೇಲೆದೊಡ್ಡ ಮಟ್ಟದ ನಿರೀಕ್ಷೆಗಳು ಗರಿಗೆದರಿವೆ. ಶಂಕರ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನೇರ ತೆಲುಗು ಚಿತ್ರ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸರಿಯಾದ ಹಿಟ್‌ಗಾಗಿ ಎದುರು ನೋಡುತ್ತಿರುವ ಶಂಕರ್ ಈ ಚಿತ್ರಕ್ಕಾಗಿ ದೊಡ್ಡಮಟ್ಟದಲ್ಲಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಲೀಕ್ ಆಗಿರುವ ವಿಷಯವನ್ನು ನೋಡಿದರೆ ಸಿನಿಮಾದಲ್ಲಿ ಬೇರೆ ಬೇರೆ ಕೋನಗಳಿವೆಯಂತೆ. ರಾಮ್ ಚರಣ್ ಸರಕಾರಿ ಅಧಿಕಾರಿಯಾಗಿ ಇನ್ನೊಂದಡೆ ರಾಜಕಾರಣಿಯಂತೆ ಕಾಣುತ್ತಾರೆ.

ಚಿತ್ರದಲ್ಲಿ ನಟಿಸಲು ನಿರಾಕರಿಸಿದ ಮೋಹನ್ ಲಾಲ್

ಚಿತ್ರದಲ್ಲಿ ನಟಿಸಲು ನಿರಾಕರಿಸಿದ ಮೋಹನ್ ಲಾಲ್

ಶಂಕರ್ ಈಗಾಗಲೇ ಎರಡು ಸುದೀರ್ಘ ಶೆಡ್ಯೂಲ್ ಮುಗಿಸಿದ್ದಾರೆ. ಶಂಕರ್ ಚಿತ್ರೀಕರಿಸಿರುವ ಸಾಹಸಮಯ ದೃಶ್ಯಗಳು ಚಿತ್ರದ ಹೈಲೈಟ್ ಆಗಿವೆಯಂತೆ. ಶಂಕರ್ ನಿರ್ದೇಶನದಲ್ಲಿ ನಟಿಸಲು ಎಲ್ಲರೂ ಎದುರು ನೋಡುತ್ತಿರುತ್ತಾರೆ. ಆದರೆ ಮೋಹನ್ ಲಾಲ್ ಶಂಕರ್ ಚಿತ್ರವನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ನೇರವಾಗಿ ಮುಖಕ್ಕೆ ಹೊಡೆದಂತೆ ನಾನು ಈ ಪಾತ್ರ ಮಾಡುವುದಿಲ್ಲ ಅಂತ ಮೋಹನ್ ಲಾಲ್ ಹೇಳಿದ್ದಾರೆ ಅಂತ ಹೇಳಲಾಗುತ್ತಿದೆ. ಮೋಹನ್ ಲಾಲ್ ಅವರ ಕೈಯಲ್ಲಿ ಆ ಪ್ರಮುಖ ಪಾತ್ರ ಮಾಡಿಸುವ ಆಲೋಚನೆ ಶಂಕರ್ ಅವರದು. ಮೋಹನ್ ಲಾಲ್ ಓಕೆ ಹೇಳ್ತಾರೆ ಅಂತ ಶಂಕರ್ ಭಾವಿಸಿದ್ದರು.

ಇಷ್ಟಕ್ಕೂ ಮೋಹನ್ ಲಾಲ್ ನೋ ಅಂದಿದ್ದು ಯಾಕೆ?

ಇಷ್ಟಕ್ಕೂ ಮೋಹನ್ ಲಾಲ್ ನೋ ಅಂದಿದ್ದು ಯಾಕೆ?

ಮೋಹನ್ ಲಾಲ್ ದೇಶ ಕಂಡ ಅಪ್ರತಿಮ ಕಲಾವಿದರ ಪೈಕಿ ಅಗ್ರಗಣ್ಯರು. ಮೂಲತಃ ಮಲಯಾಳಿ ಚಿತ್ರರಂಗಕ್ಕೆ ಸೇರಿದ ಕಲಾವಿದರಾದರೂ ಕೂಡ ಭಾರತದ ಬಹುತೇಕ ಎಲ್ಲಾ ಭಾಷಾ ಚಲನಚಿತ್ರ ರಂಗಗಳಲ್ಲಿ ಕೂಡ ಮೋಹನ್ ಲಾಲ್ ಅಭಿನಯಿಸಿದ್ದಾರೆ. ಮೋಹನ್ ಲಾಲ್ ತಮ್ಮ ಪಾತ್ರದ ಬಗ್ಗೆ ಸದಾ ಜಾಗೃತಿ ವಹಿಸುತ್ತಾರೆ. ಪಾತ್ರ ದೊಡ್ಡದು ಅಥವಾ ಚಿಕ್ಕದು ಎಂಬುದಕ್ಕಿಂತ ಆ ಪಾತ್ರಕ್ಕೆ ತಾನು ಸರಿ ಹೊಂದಬಹುದೇ ಇಲ್ಲವೇ ಎಂಬುದನ್ನು ಮೋಹನ್ ಲಾಲ್ ಯೋಚನೆ ಮಾಡುತ್ತಾರೆ. ಈಗ ಇದೇ ಕ್ರಮದಲ್ಲಿ ಶಂಕರ್ ಹೇಳಿದ ಕಥೆ ಕೇಳಿದ ಮೋಹನ್ ಲಾಲ್ ಅವರು ಶಂಕರ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಇದರಲ್ಲಿ ನೆಗೆಟಿವ್ ಶೇಡ್ ಗಳಿದ್ದು, ವಿಲನ್ ತರಹದ ಪಾತ್ರ ಎಂದು ಸೂಕ್ಷ್ಮವಾಗಿ ಆ ಪಾತ್ರವನ್ನು ತಿರಸ್ಕರಿಸಿದ್ದಾರೆ. ಚಿತ್ರಕ್ಕೆ ನಾಯಕ ನಟ ನಷ್ಟೇ ಅತ್ಯಂತ ಪ್ರಮುಖವಾದ ಪಾತ್ರ ಇದಾಗಿದ್ದು ಈಗ ಶಂಕರ್ ಈ ಪಾತ್ರಕ್ಕೆ ಯಾರನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸಿನಿಮಾದ ನಾಯಕಿ ಯಾರು?

ಸಿನಿಮಾದ ನಾಯಕಿ ಯಾರು?

ಒಟ್ಟಿನಲ್ಲಿ ದಿಲ್ ರಾಜು ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರವನ್ನು ನಿರ್ಮಿಸುತ್ತಿದ್ದು, ತಮನ್ ಸಂಗೀತ ನೀಡುತ್ತಿದ್ದಾರೆ. ದಿಲ್ ರಾಜು ಬ್ಯಾನರ್ ನಲ್ಲಿ 50ನೇ ಸಿನಿಮಾವಾಗಿ 15 ತಯಾರಾಗುತ್ತಿದೆ. ಚಿತ್ರದಲ್ಲಿ ರಾಮ್ ಚರಣ್ ಜೊತೆ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಶ್ರೀಕಾಂತ್ ಮತ್ತು ಅಂಜಲಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
RC 15: Why did Mohanlal refuse to star in Ram Charan- Shankar? movie.Shankar offered Mohanlal to play a special role but Mohanlal has refused to do so. RC 15:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X