For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಸಿನಿಮಾದಿಂದ ಹೊರಬಂದಿದ್ದೇಕೆ ನಟಿ ಸಾಯಿ ಪಲ್ಲವಿ?

  |

  ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಸಾಯಿ ಸದ್ಯ ತೆಲುಗಿನ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾಗೂ ಸಯಿ ಪಲ್ಲವಿ ಆಯ್ಕೆಯಾಗಿದ್ದರು.

  ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ನಟನೆಯ ಮಲಯಾಳಂನ ಸೂಪರ್ ಹಿಟ್ ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ರಿಮೇಕ್ ನಲ್ಲಿ ಸಾಯಿ ಪಲ್ಲವಿ ನಟಿಸಬೇಕಿತ್ತು. ಆದರೆ ಸಾಯಿ ಚಿತ್ರದಿಂದ ದಿಢೀರ್ ಹೊರಬಂದಿದ್ದಾರೆ. ಸಾಯಿ ಪಲ್ಲವಿಯನ್ನು ಚಿತ್ರತಂಡ ಕೈ ಬಿಟ್ಟಿರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು. ಸಾಯಿ ಪಲ್ಲವಿ ಹೊರಬಂದಿರುವ ಬಗ್ಗೆ ಸಾಕಷ್ಟು ಚರ್ಚೆ ಕೂಡ ಪ್ರಾರಂಭವಾಗಿತ್ತು. ಅಷ್ಟಕ್ಕೂ ಸಾಯಿ ಪಲ್ಲವಿ ಚಿತ್ರದಿಂದ ಔಟ್ ಆಗಿದ್ದೇಕೆ? ಮುಂದೆ...

  ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅಭಿಮಾನಿಗಳಿಗೆ ಬೇಸರದ ಸುದ್ದಿಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅಭಿಮಾನಿಗಳಿಗೆ ಬೇಸರದ ಸುದ್ದಿ

  ಪವನ್ ಕಲ್ಯಾಣ್ ಪತ್ನಿ ಪಾತ್ರದಲ್ಲಿ ನಟಿಸಬೇಕಿತ್ತು ಸಾಯಿ

  ಪವನ್ ಕಲ್ಯಾಣ್ ಪತ್ನಿ ಪಾತ್ರದಲ್ಲಿ ನಟಿಸಬೇಕಿತ್ತು ಸಾಯಿ

  ಚಿತ್ರದಲ್ಲಿ ಸಾಯಿ ಪಲ್ಲವಿ ಪವರ್ ಸ್ಟಾರ್ ಪತ್ನಿಯ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಸಾಯಿ ಪಲ್ಲವಿ, ಪವನ್ ಕಲ್ಯಾಣ್ ಜೊತೆ ನಟಿಸಲು ಹಿಂದೇಟು ಹಾಕಿರುವ ಬಗ್ಗೆ ಸಾಕಷ್ಟು ಸುದ್ದಿಗಳು ಹಾರಿದಾಡುತ್ತಿವೆ. ಚಿತ್ರದಿಂದ ಸಾಯಿ ಪಲ್ಲವಿ ಹೊರಬಂದಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಆದರೆ ಚಿತ್ರದಿಂದ ಹೊರಬಂದ ಕಾರಣವೇನು ಎನ್ನುವುದು ಸಹ ಪವನ್ ಕಲ್ಯಾಣ್ ಅಭಿಮಾನಿಗಳ ದೊಡ್ಡ ಪ್ರಶ್ನೆಯಾಗಿತ್ತು.

  ದೊಡ್ಡ ಮೊತ್ತದ ಸಂಭಾವನೆ ಬೇಡಿಕೆ ಇಟ್ಟ ನಟಿ

  ದೊಡ್ಡ ಮೊತ್ತದ ಸಂಭಾವನೆ ಬೇಡಿಕೆ ಇಟ್ಟ ನಟಿ

  ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಾಯಿ ಪಲ್ಲವಿ ಚಿತ್ರದಲ್ಲಿ ನಟಿಸಲು ಭಾರಿ ಮೊತ್ತದ ಸಂಭಾವನೆ ಬೇಡಿಕೆ ಇಟ್ಟಿದ್ದರಂತೆ. ಮೂಲಗಳ ಪ್ರಕಾರ ಪ್ರೇಮಂ ಸುಂದರಿ ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ರಿಮೇಕ್ ನಲ್ಲಿ ನಟಿಸಲು ಬರೋಬ್ಬರಿ 3 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದರಂತೆ. ಹಾಗಾಗಿ ಚಿತ್ರತಂಡ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲು ಹಿಂದೇಟು ಹಾಕಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  ದುಬಾರಿ ಸೀರೆ ಧರಿಸಿ 'ಲವ್ ಸ್ಟೋರಿ' ಪ್ರಚಾರಕ್ಕೆ ಹೊರಟ ಸಾಯಿ ಪಲ್ಲವಿ ನಾಚಿ ನೀರಾಗಿದ್ದೇಕೆ?ದುಬಾರಿ ಸೀರೆ ಧರಿಸಿ 'ಲವ್ ಸ್ಟೋರಿ' ಪ್ರಚಾರಕ್ಕೆ ಹೊರಟ ಸಾಯಿ ಪಲ್ಲವಿ ನಾಚಿ ನೀರಾಗಿದ್ದೇಕೆ?

  ಸಾಯಿ ಪಲ್ಲವಿ ಜಾಗಕ್ಕೆ ನಿತ್ಯಾ ಮೆನನ್ ಎಂಟ್ರಿ

  ಸಾಯಿ ಪಲ್ಲವಿ ಜಾಗಕ್ಕೆ ನಿತ್ಯಾ ಮೆನನ್ ಎಂಟ್ರಿ

  ಅಂದಹಾಗೆ ಸಾಯಿ ಪಲ್ಲವಿ ಜಾಗಕ್ಕೆ ಈಗ ಮತ್ತೋರ್ವ ಖ್ಯಾತ ನಟಿ ನಿತ್ಯಾ ಮೆನನ್ ಎಂಟ್ರಿಯಾಗಿದ್ದಾರೆ. ನಿತ್ಯಾ, ಪವನ್ ಕಲ್ಯಾಣ್ ಪತ್ನಿಯಾಗಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಅಂದಹಾಗೆ ಮಲಯಾಳಂನಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಂಡರೆ ಬಿಜು ಪಾತ್ರದಲ್ಲಿ ಪವನ್ ಕಲ್ಯಾಣ್ ಬಣ್ಣಹಚ್ಚುತ್ತಿದ್ದಾರೆ.

  Indira Gandhi ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ರಾಜಕುಮಾರ್ ನಿರಾಕರಿಸಿದ್ದು ಹೇಗೆ? | Filmibeat kannada
  ವಿರಾಟ ಪರ್ವಂ, ಲವ್ ಸ್ಟೋರಿ ಬಿಡುಗಡೆಗೆ ಕಾಯುತ್ತಿರುವ ನಟಿ

  ವಿರಾಟ ಪರ್ವಂ, ಲವ್ ಸ್ಟೋರಿ ಬಿಡುಗಡೆಗೆ ಕಾಯುತ್ತಿರುವ ನಟಿ

  ನಟಿ ಸಾಯಿ ಪಲ್ಲವಿ ಸದ್ಯ ರಾಣ ದಗ್ಗುಬಾಟಿ ನಟನೆಯ ವಿರಾಟ ಪರ್ವಂ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಚಿತ್ರದಲ್ಲಿ ಸಾಯಿ ನಕ್ಸಲೇಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಬಹುನಿರೀಕ್ಷೆಯ ಲವ್ ಸ್ಟೋರಿ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ನಾಗ ಚೈತನ್ಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

  English summary
  Real reason behind Sai Pallavi walks out from Pawan Kalyan's ayyappanum koshiyum remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X