ಉಪೇಂದ್ರಗೆ ಆಂಧ್ರ ಕಿಂಗ್ ಆಗುವ ಅರ್ಹತೆ ಇಲ್ವಾ? ತೆಲುಗು ಬಾಬುಗಳ ಹೊಸ ಕ್ಯಾತೆ!

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಪಕ್ಕಕ್ಕಿಟ್ಟು ನಟನೆಯತ್ತ ಹೆಚ್ಚು ಫೋಕಸ್ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಟಾಲಿವುಡ್, ಕಾಲಿವುಡ್ ಉಪ್ಪಿಗೆ ಹೊಸದೇನು ಅಲ್ಲ. ಇದೀಗ 'ಆಂಧ್ರ ಕಿಂಗ್' ಆಗಿ ಉಪೇಂದ್ರ ದರ್ಬಾರ್ ನಡೆಸೋಕೆ ಹೊರಟಿದ್ದಾರೆ.

ರಾಮ್‌ ಪೋತಿನೇನಿ ನಟನೆಯ ಸಿನಿಮಾ 'ಆಂಧ್ರ ಕಿಂಗ್ ತಾಲೂಕ'. ಇತ್ತೀಚೆಗೆ ರಾಮ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಸಣ್ಣ ಗ್ಲಿಂಪ್ಸ್ ರಿಲೀಸ್ ಆಗಿದೆ. ವಿಶೇಷ ಅಂದ್ರೆ ಚಿತ್ರದ ನಿಜವಾದ ಹೀರೊ ನಮ್ಮ ರಿಯಲ್ ಸ್ಟಾರ್ ಉಪೇಂದ್ರ. ಯಾಕಂದರೆ ಚಿತ್ರದಲ್ಲಿ ಸ್ಟಾರ್ ನಟ(ಉಪೇಂದ್ರ)ನ ದೊಡ್ಡ ಅಭಿಮಾನಿಯಾಗಿ ನಾಯಕ(ರಾಮ್) ನಟಿಸಿದ್ದಾರೆ.

Real Star Upendra trolled for acting in Andhra King film title role

ಸದ್ಯ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ರಾಮ್ ಪೋತಿನೇನಿ ಅಪ್ಪಟ ಸಿನಿಮಾ ಪ್ರೇಮಿಯಾಗಿ ಅದರಲ್ಲೂ ಆಂಧ್ರಕಿಂಗ್ ಅಭಿಮಾನಿಯಾಗಿ ಮಿಂಚಿದ್ದಾರೆ. ಚಿತ್ರಮಂದಿರದ ಮುಂದೆ ಆಂಧ್ರ ಕಿಂಗ್ ಉಪೇಂದ್ರ ದೊಡ್ಡ ಕಟೌಟ್ ಎದ್ದು ನಿಂತಿದೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ನಾಯಕ ಕೂಡ ಬಂದು ಟಿಕೆಟ್ ಕೌಂಟರ್‌ನಲ್ಲಿ ನಾನು ಆಂಧ್ರಕಿಂಗ್ ಫ್ಯಾನ್ ಎಂದು ಹೇಳಿ ಟಿಕೆಟ್ ತಗೊಂಡು ಕಟೌಟ್ ಮುಂದೆ ಜೈಕಾರ ಹಾಕಿ ಸಂಭ್ರಮಿಸುವುದನ್ನು ನೋಡಬಹುದು.

ಟೀಸರ್ ನೋಡಿ ಕನ್ನಡ ಸಿನಿರಸಿಕರು ಮೆಚ್ಚಿಕೊಂಡಿದ್ದಾರೆ. ಉಪೇಂದ್ರಗೆ ಬಹಳ ಒಳ್ಳೆಯ ಪಾತ್ರ ಸಿಕ್ಕಂತೆ ಕಾಣುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟದ ನಡುವೆ ಪಕ್ಕಾ ನಮ್ಮ ನೆಟಿವಿಟಿ ಸಿನಿಮಾ ಬರ್ತಿದೆ, ರಾಮ್ ಪೋತಿನೇನಿಗೆ ಒಳ್ಳೆ ಬ್ರೇಕ್ ಸಿಗುತ್ತದೆ ಎಂದು ತೆಲುಗು ಸಿನಿರಸಿಕರು ಹೇಳುತ್ತಿದ್ದಾರೆ. ಆದರೆ ಕೆಲವರು ಮಾತ್ರ ಆಂಧ್ರ ಕಿಂಗ್ ಆಗಿ ಉಪೇಂದ್ರ ನಟಿಸುತ್ತಿರುವ ಬಗ್ಗೆ ಕ್ಯಾತೆ ತೆಗೆದಿದ್ದಾರೆ.

ಆಂಧ್ರ ಕಿಂಗ್ ಎಂಬ ಟೈಟಲ್‌ಗೆ ತಕ್ಕ ನಟ ಉಪೇಂದ್ರ ಅಲ್ಲ. ಆತ ಕನ್ನಡ ನಟ. ಆತನ ಬದಲು ತೆಲುಗಿನ ಸ್ಟಾರ್ ನಟ ನಟಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಟ್ರೋಲ್ ಮಾಡುತ್ತಿದ್ದಾರೆ. ಟಾಲಿವುಡ್‌ನಲ್ಲಿ ನಾಗಾರ್ಜುನಾಗಿ 'ಕಿಂಗ್' ಎಂಬ ಬಿರುದು ಇದೆ. ಹಾಗಾಗಿ ಅವರೇ ಈ ಪಾತ್ರ ಮಾಡಿದ್ದರೂ ಚೆನ್ನಾಗಿತ್ತು. ಅಥವಾ ಬೇರೆ ಯಾರಾದರೂ ನಮ್ಮ ನಟರಿಗೆ ಈ ಗೌರವ ಸಿಗಬೇಕಿತ್ತು. ಉಪೇಂದ್ರ ಒಳ್ಳೆ ಫಿಲ್ಮ್ ಮೇಕರ್. ತೆಲುಗು ರಾಜ್ಯಗಳಲ್ಲಿ ಕ್ರೇಜ್ ಇದೆ ನಿಜ. ಆದರೂ ಈ ಪಾತ್ರಕ್ಕೆ ಅವರು ಸೂಕ್ತವಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

27 ವರ್ಷಗಳ ಹಿಂದೆಯೇ ಕನ್ನಡದ 'ಓಂ' ಚಿತ್ರವನ್ನು ತೆಲುಗಿಗೆ ರೀಮೆಕ್ ಮಾಡುವ ಮೂಲಕ ಉಪ್ಪಿ ಟಾಲಿವುಡ್ ಪ್ರವೇಶಿಸಿದ್ದರು. ರಿಯಲ್ ಸ್ಟಾರ್ ಮೇಕಿಂಗ್ ಸ್ಟೈಲ್ ನೋಡಿ ಚಿರಂಜೀವಿ ಕೂಡ ಸಿನಿಮಾ ಮಾಡುವ ಅವಕಾಶ ಕೊಟ್ಟಿದ್ದರು. ಕಥೆ ಕೇಳಿದ್ದರು. ಆದರೆ ಸಿನಿಮಾ ಕೈಗೂಡಲಿಲ್ಲ. ಅದನ್ನು ಪಕ್ಕಕ್ಕಿಟ್ಟರೆ ನಾಲ್ಕೈದು ತೆಲುಗು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದರು. ಮುಖ್ಯವಾಗಿ ಕನ್ನಡ 'ಎ' ಹಾಗೂ 'ಉಪೇಂದ್ರ' ಚಿತ್ರಗಳು ತೆಲುಗಿಗೆ ಡಬ್ ಆಗಿ ಸದ್ದು ಮಾಡಿತ್ತು.

ಉಪೇಂದ್ರ ಸಿನಿಮಾಗಳಿಗೆ ತೆಲುಗು ಪ್ರೇಕ್ಷಕರು ಮಾತ್ರವಲ್ಲ ಅಲ್ಲಿನ ಫಿಲ್ಮ್ ಮೇಕರ್ಸ್ ಕೂಡ ಫಿದಾ ಆಗಿದ್ದರು. ಆರ್‌ಜಿವಿ, ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ಕೆಲವರು ನಮ್ಮ ರಿಯಲ್ ಸ್ಟಾರ್ ಸಿನಿಮಾಗಳನ್ನು ಫಾಲೋ ಮಾಡುತ್ತಾರೆ. ಹಾಗಾಗಿ ಉಪೇಂದ್ರಗೆ ಆಂಧ್ರಕಿಂಗ್ ರೀತಿಯ ಪಾತ್ರ ಸಿಗುವುದು ಅಚ್ಚರಿ ಏನಲ್ಲ. ಅಷ್ಟರಮಟ್ಟಿಗೆ ಅಲ್ಲಿ ರಿಯಲ್ ಸ್ಟಾರ್ ಕ್ರೇಜ್ ಇದೆ.

ಇದು ಬರೀ ಸಣ್ಣ ಟೀಸರ್ ಅಷ್ಟೆ. ಕಂಪ್ಲೀಟ್ ಸಿನಿಮಾ ನೋಡಿ ಮಾತನಾಡಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತೆಲುಗು ನಟನಿಗೆ ಆ ಪಾತ್ರ ಕೊಟ್ಟಿದ್ದರೆ ಸುಖಾಸುಮ್ಮನೆ ಫ್ಯಾನ್ಸ್ ವಾರ್ ನಡೆಯುತ್ತದೆ. ಆ ರಿಸ್ಕ್ ಬೇಡ ಎಂದೇ ಬೇರೆ ಭಾಷೆಯ ಕ್ರೇಜಿ ನಟನಿಗೆ ಈ ಪಾತ್ರ ಡಿಸೈನ್ ಮಾಡಿದಂತಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Real Star Upendra stuns fans as 'Andhra King' in Ram Pothineni's upcoming film. The teaser sparking both excitement and debate among Telugu and Kannada audiences;
Read more about: upendra tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X