ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ

By ಸೃಷ್ಠಿ ಎಸ್‌. ಜಿ

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಸಿನಿಮಾದ ಹೈಪ್ ಇದೀಗ ಜೋರಾಗಿದೆ. ಅವರ ಸ್ಟೈಲ್, ವಿಭಿನ್ನ ಪಾತ್ರಗಳು ಯಾವಾಗಲೂ ಜನರ ಗಮನ ಸೆಳೆಯುತ್ತವೆ. ಉಪೇಂದ್ರ ಅವರು ನಟಿಸಿದ ಹೊಸ ಸಿನಿಮಾ ಅಂದರೆ ಎಲ್ಲರಿಗೂ ಎಲ್ಲಿಲ್ಲದ ಕುತೂಹಲ ಇರುತ್ತದೆ. ಸಿನಿಮಾ ಪ್ರೇಕ್ಷಕರು ಅವರ ಪ್ರತಿಯೊಂದು ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ.

ಅಭಿಮಾನಿಗಳು ಕಾಯುತ್ತಿದ್ದ ಶುಭ ಸುದ್ದಿ ಇದೀಗ ಹೊರಬಿದ್ದಿದೆ. ಉಪೇಂದ್ರ ನಟನೆಯ ಬಹುನಿರೀಕ್ಷಿತ 'ಆಂಧ್ರ ಕಿಂಗ್ ತಾಲೂಕ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ. ನವೆಂಬರ್ 27ರಂದು ವಿಶ್ವದಾದ್ಯಂತ ಈ ಚಿತ್ರವು ಏಕಕಾಲಕ್ಕೆ ತೆರೆಗೆ ಬರಲಿದೆ. ಚಿತ್ರತಂಡ ಈ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಮೈತ್ರಿ ಮೂವಿ ಮೇಕರ್ಸ್‌ನಂತಹ ದೊಡ್ಡ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹಾಕಿದೆ. ನಿರ್ದೇಶಕ ಮಹೇಶ್ ಬಾಬು ಪಿ ಆಕ್ಷನ್ ಕಟ್ ಹೇಳಿದ್ದಾರೆ. ವಿವೇಕ್-ಮಾರ್ವಿನ್ ಚಿತ್ರಕ್ಕಿದೆ.

ಉಪೇಂದ್ರ ಅವರಂತಹ ದೊಡ್ಡ ಸ್ಟಾರ್ ಸಿನಿಮಾಗೆ ಯುವ ಪ್ರತಿಭೆಗಳಿಂದ ಹೊಸ ಎನರ್ಜಿ ಸಿಕ್ಕಿದೆ. ವಿವೇಕ್-ಮಾರ್ವಿನ್ ಅವರ ಸಂಗೀತವು ಸಿನಿಮಾ ಗೆಲ್ಲಲು ಪ್ರಮುಖ ಕಾರಣವಾಗಲಿದೆ. ಹಾಡುಗಳ ಚಿತ್ರೀಕರಣವನ್ನು ತುಂಬಾ ಅದ್ದೂರಿಯಾಗಿ ಮಾಡಿದ್ದಾರೆ. ಹಾಡುಗಳ ನೃತ್ಯ ಸಂಯೋಜನೆ ಹೊಸ ಸ್ಟೈಲ್ ನೀಡಿದೆ. ಯುವಕರು ಈ ಹಾಡುಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.

ಉಪೇಂದ್ರ ಅವರು ಈ ಚಿತ್ರದಲ್ಲಿ ಮತ್ತೊಮ್ಮೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲ್ ಮತ್ತು ಮ್ಯಾನರಿಸಂ ಅಭಿಮಾನಿಗಳಿಗೆ ಹಬ್ಬದಂತೆ ಇದೆ. ಸಿನಿಮಾದ ಪೋಸ್ಟರ್‌ನಲ್ಲಿ ಅವರ ರಗಡ್ ಮತ್ತು ಪವರ್ಫುಲ್ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಅವರ ಪಂಚ್ ಡೈಲಾಗ್ ಡೆಲಿವರಿ ಚಿತ್ರದ ಹೈಲೈಟ್ ಆಗಲಿದೆ.

ನಿರ್ದೇಶಕ ಮಹೇಶ್ ಬಾಬು ಪಿ ಅವರು ಈ ಚಿತ್ರದಲ್ಲಿ ಉಪೇಂದ್ರ ಅವರನ್ನು ಹಿಂದೆಂದೂ ಕಾಣದಂತೆ ತೋರಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಕಾರಣದಿಂದ ಈ ಸಿನಿಮಾವು ಅತ್ಯುತ್ತಮ ತಾಂತ್ರಿಕ ಗುಣಮಟ್ಟ ಹೊಂದಿದೆ. ಉಪೇಂದ್ರ ಅವರ ಹಿಂದಿನ ದೊಡ್ಡ ಚಿತ್ರಗಳು ಮಾಡಿದಂತಹ ಸಾಧನೆಯನ್ನು ಈ ಸಿನಿಮಾ ಕೂಡ ಮಾಡುವ ನಿರೀಕ್ಷೆ ಇದೆ.

ಸಿನಿಮಾದ ಕಥೆ ಏನಿದೆ ಎಂಬುದನ್ನು ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ. ಚಿತ್ರದಲ್ಲಿ ಉಪ್ಪಿ ಸಿನಿಮಾ ನಟನಾಗಿಯೇ ನಟಿಸಿದ್ದಾರೆ. ಅವರ ಅಭಿಮಾನಿಯಾಗಿ ರಾಮ್ ಪೋತಿನೇನಿ ಮಿಂಚಿದ್ದಾರೆ. ಸ್ಟಾರ್ ನಟ ಹಾಗೂ ಆತನನ್ನು ಆರಾಧಿಸುವ ಅಭಿಮಾನಿಗಳ ಕಥೆ ಚಿತ್ರದಲ್ಲಿದೆ. ಸಿನಿಮಾ ಪ್ರೇಕ್ಷಕರಿಗೆ ಕಂಪ್ಲೀಟ್ ಮನರಂಜನೆ ನೀಡುತ್ತದೆ ಎಂದು ಉಪ್ಪಿ ಭರವಸೆ ನೀಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಟಿ-ಸೀರೀಸ್ ಬೆಂಬಲದಿಂದ ಚಿತ್ರದ ರಿಲೀಸ್ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ನವೆಂಬರ್ 27ರಂದು ಸಿನಿಮಾ ಬಿಡುಗಡೆ ಆಗಲಿದೆ. ಹೊರದೇಶದ ಅಭಿಮಾನಿಗಳಿಗೂ ಇದು ದೊಡ್ಡ ಟ್ರೀಟ್ ಆಗಲಿದೆ.

ತೆಲುಗಿನಲ್ಲಿ ಸಾಕಷ್ಟು ಜನ ಸ್ಟಾರ್ ನಟರಿದ್ದಾರೆ. ಅವರೆಲ್ಲರನ್ನು ಬಿಟ್ಟು ಇಂತಾದೊಂದು ಪಾತ್ರಕ್ಕೆ ಕನ್ನಡ ನಟನನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಆಂಧ್ರ, ತೆಲಂಗಾಣದಲ್ಲಿ ಉಪ್ಪಿ ಕ್ರೇಜ್ ಹೇಗಿದೆ ಎನ್ನುವುದು ಇದರಲ್ಲೇ ಗೊತ್ತಾಗುತ್ತಿದೆ. ಇನ್ನು ಉಪೇಂದ್ರ ನಟನೆಯ '45' ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ.

ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರದಲ್ಲಿ ಶಿವರಾಜ್‌ಕುಮಾರ್ ಹಾಗೂ ರಾಜ್‌ ಬಿ ಶೆಟ್ಟಿ ಕೂಡ ನಟಿಸಿದ್ದಾರೆ. ರಮೇಶ್ ಬಾಬು ಬಂಡವಾಳ ಹೂಡಿದ್ದಾರೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗ್ತಿದೆ. ಹಾಗಾಗಿ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುತ್ತಾ ಕಾದು ನೋಡಬೇಕಿದೆ.

More from Filmibeat

Read more about: upendra tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X