KGF ಸಿನಿಮಾನ ಬೈದು ತಮ್ಮ ಬೇಳೆ ಬೇಯಿಸಿಕೊಂಡ್ರಾ ವೆಂಕಟೇಶ್ ಮಹಾ? ರಾದ್ದಾಂತಕ್ಕೆ ಕಾರಣ ಅದೇನಾ?
ಸೋಶಿಯಲ್ ಮೀಡಿಯಾ ಜಮಾನದಲ್ಲಿ ರಾತ್ರೋರಾತ್ರಿ ಫೇಮಸ್ ಆಗೋದು ಸುಲಭ ಆಗೋಗಿದೆ. ಏನಾದ್ರೂ ಸಾಧನೆ ಮಾಡ್ಬೇಕು. ಇಲ್ಲದಿದ್ದರೆ ಯಾರನ್ನಾದರೂ ಬೈದು, ಕಾಲೆಳೆದು ಫೇಮಸ್ ಆಗಿಬಿಡಬಹುದು. 4 ದಿನಗಳ ಹಿಂದೆ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಎಂಬಾತ ಕನ್ನಡದ ಹೆಮ್ಮೆ KGF ಸಿನಿಮಾ ಕಥೆ ಹಾಗೂ ರಾಕಿ ಪಾತ್ರದ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿ ಸುದ್ದಿಯಾಗಿದ್ದು ಗೊತ್ತೇಯಿದೆ.
ರಾಕಿ ಪಾತ್ರವನ್ನು ವೆಂಕಟೇಶ್ ಮಹಾ ನೀಚ್ ಕಮೀನ್ ಕುತ್ತೆ ಅಂತೆಲ್ಲಾ ಕೆಟ್ಟ ಪದಗಳಿಂದ ಕಾಮೆಂಟ್ ಮಾಡಿದ್ದು ವೈರಲ್ ಆಗಿತ್ತು. KGF ಅಭಿಮಾನಿಗಳು ಗರಂ ಆಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಕ್ಷಮೆ ಕೇಳುವ ನಾಟಕ ಮಾಡಿದ್ದ ನಿರ್ದೇಶಕನ ಅಸಲಿ ಬಣ್ಣ ಈಗ ಬಯಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ವೆಂಕಟೇಶ್ ಮಹಾ ಈ ರೀತಿ ಕಾಮೆಂಟ್ ಮಾಡಿದ್ದರು ಎನ್ನುವುದು ಕೆಲವರ ವಾದ. ಇದಕ್ಕೆಲ್ಲಾ ಕಾರಣ ಏನು ಎನ್ನುವುದು ಈಗ ಬಯಲಾಗಿದೆ ಎಂದು ಹೇಳುತ್ತಿದ್ದಾರೆ.

ಒಂದೆರಡು ತೆಲುಗು ಸಿನಿಮಾಗಳನ್ನು ನಿರ್ದೇಶಿಸಿರುವ ವೆಂಕಟೇಶ್ ಮಹಾ KGF ಚಿತ್ರದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ. KGF ಸಿನಿಮಾ ಅಭಿಮಾನಿಗಳು ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಇನ್ನು ವೆಂಕಟೇಶ್ ಮಹಾ ಕೀಳಾದ ಕಾಮೆಂಟ್‌ಗಳನ್ನು ಎಂಜಾಯ್ ಮಾಡುತ್ತಾ ನಕ್ಕ ನಂದಿನಿ ರೆಡ್ಡಿ, ವಿವೇಕ್ ಆತ್ರೇಯ, ಮೋಹನ ಕೃಷ್ಣ ಇಂದ್ರಗಂಟಿ, ಶಿವನಿರ್ವಾಣ ನಡೆಯನ್ನು ಟೀಕಿಸಿದ್ದರು. ನಂದಿನಿ ರೆಡ್ಡಿ ಇದಕ್ಕೆ ಕ್ಷಮೆ ಕೇಳಿದ್ದರು. ಆದರೆ ವೆಂಕಟೇಶ್ ಮಹಾ ಮಾತ್ರ ಕ್ಷಮೆ ಕೇಳುತ್ತಲೇ ತನ್ನ ಮಾತುಗಳನ್ನು ಸಮರ್ಥಿಸಿಕೊಂಡಿದ್ದರು.
ನಾನು ಬಳಸಿದ ಭಾಷೆಗೆ ಕ್ಷಮೆ ಕೇಳುತ್ತೇನೆ ಭಾವಕ್ಕಲ್ಲ. KGF ಸಿನಿಮಾ ಬಗೆಗಿನ ನನ್ನ ಅಭಿಪ್ರಾಯಕ್ಕೆ ನಾನು ಈಗಲೂ ಬದ್ಧ ಎಂದು ವೆಂಕಟೇಶ್ ಪೋಸ್ಟ್ ಮಾಡಿದ್ದರು. ಒಂದು ಸೂಪರ್ ಹಿಟ್ ಸಿನಿಮಾ ಬಗ್ಗೆ ಈ ರೀತಿ ಕಾಮೆಂಟ್ ಮಾಡಿದರೆ ವಿವಾದ ಆಗುತ್ತದೆ ಎನ್ನುವುದು ವೆಂಕಟೇಶ್ ಮಹಾಗೆ ಚೆನ್ನಾಗಿ ಗೊತ್ತು. ಆದರೂ ಕೂಡ ಈ ರೀತಿ ಕಾಮೆಂಟ್ ಮಾಡಲು ಅಸಲಿ ಕಾರಣ ಬೇರೇನೆ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ರೀತಿ KGF ಸಿನಿಮಾ ಬಗ್ಗೆ ಆತ ಸುಖಾ ಸುಮ್ಮನೆ ಕಾಮೆಂಟ್ ಮಾಡಿಲ್ಲ. ಇದರ ಹಿಂದೆ ಬೇರೆಯದ್ದೇ ಕಾರಣ ಇದೆ ಎನ್ನುತ್ತಿದ್ದಾರೆ.
#AngerTalesOnHotstar
— Venkatesh Maha (@mahaisnotanoun) March 8, 2023
March 9th onwards@tilakprabhala @ActorSuhas @RavindraVijay1 @thebindumadhavi @phanindracharya @TharunBhasckerD @SridharBobbala @MadonnaSebast14 @amardeepguttula @VinodBangari2 @Kalyankodati @smaransai pic.twitter.com/lS5E9QFgOU
'ಆಂಗರ್ ಟೇಲ್ಸ್' ಎನ್ನುವ ಆಂಥಾಲಜಿ ವೆಬ್ ಸೀರಿಸ್ ಒಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಇಂದಿನಿಂದ ಸ್ಟ್ರೀಮಿಂಗ್ ಆಗಲಿದೆ. 4 ಎಪಿಸೋಡ್‌ಗಳ ಈ ಸೀರಿಸ್‌ಗೆ ಪ್ರಭಲ ತಿಲಕ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸರಣಿಯ ಮೊದಲ ಎಪಿಸೋಡ್‌ನಲ್ಲಿ ನಿರ್ದೇಶಕ ವೆಂಕಟೇಶ್ ಮಹಾ ನಟಿಸಿದ್ದಾರೆ. ಈ ಸೀರಿಸ್ ಪಬ್ಲಿಸಿಟಿಗಾಗಿ ಈ ರೀತಿ KGF ಸಿನಿಮಾ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. 'ಆಂಗರ್ ಟೇಲ್ಸ್' ಸೀರಿಸ್‌ನಲ್ಲಿ ಅವಾಚ್ಯ ಶಬ್ಧಗಳಿವೆ. 18 ವರ್ಷಕ್ಕಿಂತ ಚಿಕ್ಕ ವಯಸ್ಸಿನವರು ಪೋಷಕರ ಜೊತೆ ಸೀರಿಸ್ ನೋಡಿ ಎಂದು ವೆಂಕಟೇಸ್ ಮಹಾ ಪೋಸ್ಟ್ ಮಾಡಿದ್ದಾರೆ.

'ಆಂಗರ್ ಟೇಲ್ಸ್'ನಲ್ಲಿ ನನ್ನ ಪಾತ್ರಕ್ಕೆ ಸಾಕಷ್ಟು ಅವಾಚ್ಯ, ಅಶ್ಲೀಲ ಡೈಲಾಗ್‌ಗಳಿವೆ ಎಂದು ಪೋಸ್ಟ್‌ನಲ್ಲಿ ವೆಂಕಟೇಶ್ ಮಹಾ ತಿಳಿಸಿದ್ದಾರೆ. ನಿರ್ದೇಶಕ ಮಾಡಿರುವ ಪೋಸ್ಟ್‌ಗೆ ಕಾಮೆಂಟ್ ಬಾಕ್ಸ್‌ನಲ್ಲಿ KGF ಅಭಿಮಾನಿಗಳು ಕೆಂಡಕಾರುತ್ತಿದ್ದಾರೆ. ತೆಲುಗು ಪ್ರೇಕ್ಷಕರು ಕೂಡ ನಿನ್ನ ವೆಬ್ ಸೀರಿಸ್ ಪ್ರಮೋಷನ್‌ಗಾಗಿ KGF ಸಿನಿಮಾ ಬಗ್ಗೆ ಹಿಂಗೆಲ್ಲಾ ಮಾತನಾಡ್ನಾ? ಎಂದು ಕೇಳುತ್ತಿದ್ದಾರೆ. KGF ಸಿನಿಮಾ ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸೀಕ್ವೆಲ್ ಬರೋಬ್ಬರಿ 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.


Click it and Unblock the Notifications











