ತಾತನ ಶತ ಜಯಂತೋತ್ಸವಕ್ಕೆ ಮೊಮ್ಮಗ ಗೈರು.. ರಾಮ್‌ಚರಣ್ ಹಾಜರ್: ಕಾರಣ ಬಾಲಯ್ಯ, ಚಂದ್ರಬಾಬು?

ಹೈದರಾಬಾದ್‌ನ ಕೂಕಟ್‌ಪಲ್ಲಿ ಹೌಸಿಂಗ್‌ ಬೋರ್ಡು ಸಮೀಪದ ಕೈತಲಾಪುರ್‌ ಮೈದಾನದಲ್ಲಿ ಶನಿವಾರ(ಮೇ 20) ಎನ್‌ಟಿಆರ್ ಶತ ಜಯಂತೋತ್ಸವ ಸಮಾರಂಭ ನಡೀತು. ಶಿವರಾಜ್‌ಕುಮಾರ್ ಸೇರಿದಂತೆ ಸಾಕಷ್ಟು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಎನ್‌ಟಿಆರ್‌ ಮೊಮ್ಮಗ ನಟ ಜ್ಯೂ. ಎನ್‌ಟಿಆರ್ ಮಾಡಿ ಗೈರಾಗಿದ್ದರು. ಇದಕ್ಕೂ ಮುನ್ನ ನಡೆದ ಮತ್ತೊಂದು ಎನ್‌ಟಿಆರ್ ಜಯಂತೋತ್ಸದಲ್ಲೂ ತಾರಕ್ ಹಾಜರಾಗಿರಲಿಲ್ಲ.

ನಂದಮೂರಿ ಫ್ಯಾಮಿಲಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಬಾಲಕೃಷ್ಣ- ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಒಂದು ಬಣ ಆದರೆ ಉಳಿದವರು ಮತ್ತೊಂದು ಬಣ ಎನ್ನುವಂತಾಗಿದೆ. ಸ್ವತಃ ಜ್ಯೂ. ಎನ್‌ಟಿಆರ್‌ ಕೂಡ ಈ ಕ್ಯಾಂಪ್ ಸೇರುತ್ತಿಲ್ಲ. ಇತ್ತೀಚೆಗೆ ನಡೆದ ಎನ್‌ಟಿಆರ್ ಶತ ಜಯಂತೋತ್ಸವ ಅದ್ಧೂರಿ ಸಮಾರಂಭದಲ್ಲಿ ಇದು ಮತ್ತೊಮ್ಮೆ ಸಾಬೀತಾಗಿದೆ. ಯಂಗ್‌ ಟೈಗರ್‌ನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ ವೈಯಕ್ತಿಕ ಕಾರಣಕ್ಕೆ ಅವರು ಬರಲಿಲ್ಲ ಎನ್ನಲಾಗ್ತಿದೆ. ಆದರೆ ಬೇಕಂತಲೇ ಬಾಲಕೃಷ್ಣ ಚಂದ್ರಬಾಬು ನಾಯ್ಡು ತಾರಕ್‌ನ ದೂರ ಇಟ್ಟಿದ್ದಾರೆ ಎನ್ನುವ ವಾದವೂ ಇದೆ.

Reason behind Jr NTR Skiped his grandfather Sr NTRs 100th birth anniversary celebration again

ಎನ್‌ಟಿಆರ್‌ ಶತ ಜಯಂತಿ ಸಭೆಗೆ ಟಾಲವುಡ್ ಸ್ಟಾರ್ ನಟರನ್ನು ಆಹ್ವಾನಿಸಲಾಗಿತ್ತು. ವೆಂಕಟೇಶ್, ಪ್ರಭಾಸ್, ಅಲ್ಲು ಅರ್ಜುನ್, ಪವನ್ ಕಲ್ಯಾಣ್, ರಾಮ್ ಸೇರದಂತೆ ಹಲವರನ್ನು ಆಹ್ವಾನಿಸಿದ್ದರು. ಆದರೆ ಇವರು ಯಾರು ಬರಲಿಲ್ಲ. ರಾಮ್‌ಚರಣ್, ವೆಂಕಟೇಶ್, ನಾಗ ಚೈತನ್ಯಾ ಮಾತ್ರ ಭಾಗವಹಿಸಿದ್ದರು. ಇನ್ನು ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಭಾಗಿ ಆಗಿ ನಂದಮೂರಿ ಫ್ಯಾಮಿಲಿ ಜೊತೆಗಿನ ಒಡನಾಟ ಹಂಚಿಕೊಂಡಿದ್ದರು. ಆದರೆ ಸ್ವತಃ ಮೊಮ್ಮಗ ಬರದೇ ಇದ್ದಿದ್ದು ಕೆಲವರಿಗೆ ಅಚ್ಚರಿ ಮೂಡಿಸಿತ್ತು. ತಾತನ ಕಾರ್ಯಕ್ರಮಕ್ಕಿಂತ ಬೇರೆ ಕಾರ್ಯಕ್ರಮ ಹೆಚ್ಚಾಯಿತಾ? ಎಂದು ಕೆಲವರು ಕೇಳುತ್ತಿದ್ದಾರೆ.

ಮೇ 20ರಂದು ಜ್ಯೂ. ಎನ್‌ಟಿಆರ್ ಹುಟ್ಟುಹಬ್ಬ. ಹಾಗಾಗಿ ಆ ದಿನ ಕುಟುಂಬದ ಜೊತೆ ತಾರ್ ಹೊರಗೆ ಹೋಗುವ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಇದೇ ಕಾರಣಕ್ಕೆ ಎನ್‌ಟಿಆರ್‌ ಶತ ಜಯಂತಿ ಸಭೆಗೆ ಬರಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾಗಿ ವರದಿ ಆಗಿತ್ತು. ಮಾಜಿ ಸಿಎಂ, ನಟ ದಿವಂಗತ ಎನ್‌ಟಿಆರ್‌ ಬೆನ್ನಿಗೆ ಚಂದ್ರಬಾಬು ನಾಯ್ಡು ಚೂರಿ ಹಾಕಿದ್ದರು ಎನ್ನಲಾಗುತ್ತದೆ. ಆದರೆ ಆ ನಂತರ ಸಾಕಷ್ಟು ಬೆಳವಣಿಗೆಗಳಾಯಿತು. ಚಂದ್ರ ಬಾಬು ನಾಯ್ಡು ಆಂಧ್ರದ ಸಿಎಂ ಕೂಡ ಆಗಿದ್ದರು. ಇನ್ನು ಬಾಬು- ಬಾಲಯ್ಯ ಬೀಗರಾಗಬೇಕು. ಕೆಲ ವರ್ಷಗಳ ಹಿಂದೆ ತಾರಕ್ ಕೂಡ ಇವರಿಬ್ಬರಿಗೆ ಬೆಂಬಲ ಸೂಚಿಸಿದ್ದರು.

Reason behind Jr NTR Skiped his grandfather Sr NTRs 100th birth anniversary celebration again

ಇತ್ತೀಚಿನ ವರ್ಷಗಳಲ್ಲಿ ಬಾಲಕೃಷ್ಣ ಹಾಗೂ ಚಂದ್ರಬಾಬು ನಾಯ್ಡು ಅವರಿಂದ ಜ್ಯೂ. ಎನ್‌ಟಿಆರ್ ಅಂತರ ಕಾಯ್ದುಕೊಳ್ಳುತ್ತಾ ಬರ್ತಿದ್ದಾರೆ. ಇವರಿಬ್ಬರು ಸೇರಿ ತಾರಕ್‌ನ ದೂರ ಇಡುವ ಪ್ರಯತ್ನ ಮಾಡ್ತಿದ್ದಾರೆ ಎನ್ನುವ ವಾದವೂ ಇದೆ. ಅದೇ ಕಾರಣಕ್ಕೆ ತಾರಕ್ ಎರಡು ಬಾರಿ ಎನ್‌ಟಿಆರ್‌ ಶತ ಜಯಂತಿ ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನಲಾಗ್ತಿದೆ. ಅಭಿಮಾನಿಗಳು ತಾರಕ್ ಟಿಡಿಪಿ ಪಕ್ಷದ ಮುಂದಿನ ನಾಯಕ. ಮುಖ್ಯಮಂತ್ರಿ ಅಭ್ಯರ್ಥಿ. ತಾರಕ್ ರಾಜಕೀಯರಂಗಕ್ಕೆ ಎಂಟ್ರಿ ಕೊಟ್ಟರೆ ಆಂಧ್ರ ರಾಜಕೀಯ ಚಿತ್ರಣ ಬದಲಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಇದು ಬಾಲಯ್ಯ- ಚಂದ್ರಬಾಬು ನಾಯ್ಡುಗೆ ಬೇಕಿಲ್ಲ ಎನ್ನಲಾಗ್ತಿದೆ.

ಚಂದ್ರಬಾಬು ನಾಯ್ಡು ತಮ್ಮ ಪುತ್ರ ನಾ ರಾ ಲೋಕೇಶ್‌ನ ತೆಲುಗು ದೇಶಂ ಪಕ್ಷದ ಭವಿಷ್ಯದ ನಾಯಕನನ್ನಾಗಿ ಮಾಡಲು ಮನಸ್ಸು ಮಾಡಿದ್ದಾರಂತೆ, ಬಾಲಯ್ಯ ಕೂಡ ಅಳಿಯನ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾರಂತೆ. ಹಾಗಾಗಿ ಇಬ್ಬರು ಸೇರಿ ತಾರಕ್‌ನ ಪಕ್ಷದಿಂದ ದೂರ ಇಡಲು ಮುಂದಾಗಿದ್ದಾರೆ ಎನ್ನುವ ಗುಸುಗಸು ಶುರುವಾಗಿದೆ. ಜ್ಯೂ. ಎನ್‌ಟಿಆರ್ ಕೂಡ ಇವರ ಸಹವಾಸವೇ ಬೇಡ ಎಂದು ದೂರ ಇರುವ ಲೆಕ್ಕಾಚಾರದಲ್ಲಿ ಇದ್ದಾರೆ ಎನ್ನುವ ವಾದವೂ ಇದೆ. ಅದೇ ಕಾರಣಕ್ಕೆ ಬಾಲಯ್ಯ, ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಟಿಆರ್‌ ಶತ ಜಯಂತಿ ಸಭೆಗೆ ಬರಲಿಲ್ಲ ಎನ್ನಲಾಗ್ತಿದೆ.

More from Filmibeat

English summary
Reason behind Jr NTR Skiped his grandfather Sr NTR's 100th birth anniversary celebration again. Ramcharan, Shivarajkumar Attended this Event. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X