ಪ್ರಭಾಸ್- ಅನುಷ್ಕಾ ಲವ್ ಮಾಡಿದ್ಯಾವಾಗ? ಸ್ವೀಟಿ ಹಿರಿಯ ನಟನೊಟ್ಟಿಗೆ ಓಡಾಡಿದ್ಯಾವಾಗ? ಬ್ರೇಕಪ್ ಆಗಿದ್ಯಾವಾಗ?

By ಫಿಲ್ಮಿಬೀಟ್ ಡೆಸ್ಕ್

ಯಂಗ್‌ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಲವ್ ಮಾಡ್ತಿದ್ದಾರೆ ಎನ್ನುವ ಗಾಸಿಪ್ ಕಳೆದೊಂದು ದಶಕದಿಂದ ಕೇಳಿಬರ್ತಾನೇ ಇದೆ. ಇಬ್ಬರು ಮದುವೆ ಆಗ್ತಾರೆ? ಮದುವೆ ಡೇಟ್ ಫಿಕ್ಸ್ ಆಗಿದೆ ಅಂತೆಲ್ಲಾ ಪದೇ ಪದೇ ಅಂತೆ ಕಂತೆ ಸುದ್ದಿಗಳು ಹರಿದಾಡುತ್ತಲೇ ಇತ್ತು. ಇತ್ತೀಚೆಗೆ ಪ್ರಭಾಸ್ ಹೆಸರು ಕೃತಿ ಸನೂನ್ ಜೊತೆ ತಳುಕು ಹಾಕಿಕೊಂಡ ಮೇಲೆ ಈ ಆ ಗಾಸಿಪ್ ತಣ್ಣಗಾಗಿತ್ತು.

'ಬಿಲ್ಲಾ', 'ಮಿರ್ಚಿ' ಹಾಗೂ 'ಬಾಹುಬಲಿ' ಸರಣಿ ಸಿನಿಮಾಗಳಲ್ಲಿ ಪ್ರಭಾಸ್ ಹಾಗೂ ಸ್ವೀಟಿ ಒಟ್ಟಿಗೆ ನಟಿಸಿದ್ದರು. 'ಬಿಲ್ಲಾ', 'ಮಿರ್ಚಿ' ಚಿತ್ರಗಳಲ್ಲಿ ಇಬ್ಬರ ಕೆಮೆಸ್ಟ್ರಿ ನೋಡಿದ ಅಭಿಮಾನಿಗಳು ಇಬ್ಬರು ಮದುವೆ ಆದರೆ ಚೆನ್ನಾಗಿರುತ್ತೆ ಎಂದುಕೊಂಡರು. ನಂತರ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀಯಿದೆ ಎನ್ನುವ ಗುಸು ಗುಸು ಶುರುವಾಯಿತು. ಅಭಿಮಾನಿಗಳು ಜೋಡಿಗೆ ಪ್ರನುಷ್ಕಾ ಎನ್ನುವ ಮುದ್ದಾದ ಹೆಸರನ್ನು ಇಟ್ಟರು. ಸಾಕಷ್ಟು ಬಾರಿ ಇವರಿಬ್ಬರ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಲೇ ಬರ್ತಿದೆ.

Reason Behind Prabhas and Anushka Shettys Love break up

ಪ್ರಭಾಸ್ ಮತ್ತು ಅನುಷ್ಕಾ ಇಬ್ಬರು ಪ್ರೀತಿಸುತ್ತಿರುವುದಾಗಿ ಎಂದು ಹೇಳಲೇ ಇಲ್ಲ. ಈ ಬಗ್ಗೆ ಎದುರಾದ ಪ್ರಶ್ನೆಗೆ ಇಬ್ಬರು ಬೆಸ್ಟ್ ಫ್ರೆಂಡ್ಸ್ ಅಂತ ಅಷ್ಟೇ ಹೇಳುತ್ತಾ ಬಂದಿದ್ದರು. ಪ್ರಭಾಸ್‌ ಮದುವೆಗೆ ಮನೆಯಲ್ಲಿ ಹುಡುಗಿ ಹುಡುಕಾಟ ಶುರುವಾಗಿದೆ ಎಂದು ಕೂಡ ಸುದ್ದಿ ಆಗುತ್ತಿತ್ತು. ಆದರೆ ಯಾವುದು ಕೂಡ ನಿಜವಾಗಲಿಲ್ಲ. ಆದರೆ ಈಗ ಇದ್ದಕ್ಕಿದಂತೆ ಪ್ರಭಾಸ್ - ಅನುಷ್ಕಾ ಲವ್ ಬ್ರೇಕಪ್ ಆಗಿದೆ. ಅದಕ್ಕೆ ಅನುಷ್ಕಾ ಶೆಟ್ಟಿ ಹಿರಿಯ ನಟನೊಬ್ಬನ ಜೊತೆ ಸುತ್ತಾಡಿದ್ದೇ ಕಾರಣ ಎಂದು ಹೇಳಲಾಗುತ್ತಿದೆ.

Siasat ಹೆಸರಿನ ವೆಬ್‌ಸೈಟ್ ವರದಿಯ ಪ್ರಕಾರ ಅನುಷ್ಕಾ ಶೆಟ್ಟಿ ಹಿರಿಯ ನಟನೊಟ್ಟಿಗೆ ಸುತ್ತಾಡಿದ ಕಾರಣಕ್ಕೆ ಪ್ರಭಾಸ್ ಅಂತರ ಕಾಯ್ದುಕೊಂಡರು. ನಂತರ ಇಬ್ಬರ ಲವ್ ಬ್ರೇಕಪ್ ಆಯಿತು. ಆದರೂ ಈಗ ಸ್ನೇಹಿತರಾಗಿ ಇದ್ದಾರೆ ಎನ್ನಲಾಗಿದೆ. ಆದರೆ ನಾವಿಬ್ಬರು ಪ್ರೀತಿಸುತ್ತಿದ್ದೇವೆ ಎಂದು ಯಾವತ್ತು ಜೋಡಿ ಹೇಳಲಿಲ್ಲ. ಆಗಿದ್ದ ಮೇಲೆ ಆಕೆ ಹಿರಿಯ ನಟನೊಟ್ಟಿಗೆ ಓಡಾಡಿದ್ದು ಯಾವಾಗ? ಪ್ರಭಾಸ್ - ಅನುಷ್ಕಾ ಲವ್ ಬ್ರೇಕಪ್‌ ಆಗಿದ್ದು ಯಾವಾಗ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

Reason Behind Prabhas and Anushka Shettys Love break up

ಇನ್ನು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರ ವಯಸ್ಸು 40 ದಾಟಿದೆ. ಆದರೆ ಇಬ್ಬರೂ ಕೂಡ ಇನ್ನು ಮದುವೆ ಬಗ್ಗೆ ಯೋಚಿಸಿಲ್ಲ. ಪ್ರಭಾಸ್ 'ಬಾಹುಬಲಿ'- 2 ಸಿನಿಮಾ ಮುಗಿದ ಮೇಲೆ ಮದುವೆ ಅಂದಿದ್ದರು. ಆದರೆ ಸಿನಿಮಾ ಬಂದೋಗಿ ನಾಲ್ಕೈದು ವರ್ಷ ಆದರೂ ಮದುವೆಯ ಮಾತೇ ಇಲ್ಲ. ಮತ್ತೊಂದ್ಕಡೆ ಅನುಷ್ಕಾ ಶೆಟ್ಟಿ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಸೈಜ್ ಜೀರೊ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಸ್ವೀಟಿ ಮತ್ತೆ ತೂಕ ಇಳಿಸಿಕೊಳ್ಳಲು ಹರಸಾಹಸ ಪಡುವಂತಾಯಿತು. ಆದರೂ ಮೊದಲಿನ ಪಿಜಿಕ್ ವಾಪಸ್ ಪಡೆಯಲು ಸಾಧ್ಯವಾಗಲಿಲ್ಲ.

Reason Behind Prabhas and Anushka Shettys Love break up

ಸಿನಿಮಾಗಳ ವಿಚಾರಕ್ಕೆ ಬಂದರೆ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಆದಿಪುರುಷ್', 'ಸಲಾರ್', 'ಪ್ರಾಜೆಕ್ಟ್- K', 'ರಾಜಾ ಡೀಲಕ್ಸ್' ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ವೀಟಿ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಎನ್ನುವ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಚಿತ್ರದಲ್ಲಿ ಶೆಫ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

More from Filmibeat

English summary
Reason Behind Prabhas and Anushka Shetty's love break up. Anushka shetty's alleged affair with a senior actor that led to their breakup. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X