ಪೂಜಾ ಹೆಗ್ಡೆಗಾಗಿ ತ್ರಿವಿಕ್ರಮ್ ₹2 ಕೋಟಿ ಕಾರ್ ಖರೀದಿಸಿದ್ದರ ಹಿಂದೆ ಇಷ್ಟೆಲ್ಲಾ ಕಥೆ ಇದ್ಯಾ?

ಕಳೆದೆರಡು ದಿನಗಳಿಂದ ಟಾಲಿವುಡ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಆದರೆ ಕಾರಣ ಮಾತ್ರ ವಿಚಿತ್ರವಾಗಿದೆ. ನಟಿ ಪೂಜಾ ಹೆಗ್ಡೆಗೆ ತ್ರಿವಿಕ್ರಮ್ ಹೊಸ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರಂತೆ, ಅದರ ಹಿಂದಿನ ಕಾರಣ ಏನು? ಅಂತೆಲ್ಲಾ ಭಾರೀ ಚರ್ಚೆ ಆಗುತ್ತಿದೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಅನ್ನುವ ಅರ್ಥದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗ್ತಿದೆ.

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಅಲಾ ವೈಕುಂಠಪುರಂಲೊ' ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದರು. ಸದ್ಯ ಮಹೇಶ್ ಬಾಬು ಜೊತೆ ತ್ರಿವಿಕ್ರಮ್ ಹೊಸ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೂ ಈಕೆನೇ ನಾಯಕಿ. ಮಾತಿನ ಮಾಂತ್ರಿಕನ ಮುಂದಿನ ಚಿತ್ರಕ್ಕೆ ಕೂಡ ಪೂಜಾ ನಾಯಕಿ ಆಗುವ ಸಾಧ್ಯತೆ ಇದೆಯಂತೆ. ಇದೆಲ್ಲದರ ನಡುವೆ ಆಕೆಗೆ ತ್ರಿವಿಕ್ರಮ್ ಶ್ರೀನಿವಾಸ್ 2 ಕೋಟಿ ಬೆಲೆಯ ಕಾರು ಉಡುಗೊರೆ ನೀಡಿದ್ದಾರೆ ಎನ್ನುವ ಸುದ್ದಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

Reason behind Trivikram Srinivas Buying a New Car for Pooja Hegde

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾಗಳಿಗೆ ಹಾರಿಕಾ ಆಂಡ್ ಹಾಸಿನಿ ಕ್ರಿಯೇಷನ್ಸ್ ಸಂಸ್ಥೆ ಅಥವಾ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಗಳು ಬಂಡವಾಳ ಹೂಡುತ್ತಾ ಬರ್ತಿವೆ. ಈ ಎರಡು ಬ್ಯಾನರ್‌ಗಳಲ್ಲಿ ತ್ರಿವಿಕ್ರಮ್‌ಗೂ ಕೂಡ ಪಾರ್ಟ್ನರ್‌ಶಿಪ್‌ ಎನ್ನುವ ಅನುಮಾನ ಇದೆ. ಇದೇ ಕಾರಣಕ್ಕೆ ಪ್ರೊಡಕ್ಷನ್ಸ್ ಸಂಸ್ಥೆ ಕಡೆಯಿಂದ 2 ಕೋಟಿ ಮೌಲ್ಯದ ಕಾರನ್ನು ಖರೀದಿಸಿದ್ದಾರೆ. ಈ ಕಾರನ್ನು ಚಿತ್ರದ ನಾಯಕಿ ಓಡಾಡಲು ಬಳಸಲಾಗುತ್ತಿದೆ. ಅಂದರೆ ಸದ್ಯ ಪೂಜಾ ಹೆಗ್ಡೆ ಓಡಾಡುತ್ತಿದ್ದಾರೆ.

ಈ ಎರಡು ಪ್ರೊಡಕ್ಷನ್ಸ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿನಿಮಾ ನಾಯಕಿಯರನ್ನು ಸೆಟ್‌ಗೆ ಕರ್ಕೊಂಡು ಬರಲು, ಮತ್ತೆ ವಾಪಸ್ ಹೋಟೆಲ್‌ಗೆ ಡ್ರಾಪ್ ಮಾಡಲು ಈ ಕಾರನ್ನು ಬಳಸುತ್ತಾರಂತೆ. ಬಾಡಿಗೆ ಕಾರ್ ಅಂದರೆ ಬಹಳ ಖರ್ಚಾಗುತ್ತದೆ ಎಂದು ಯೋಚಿಸಿ ಹೋರ ಕಾರನ್ನು ಖರೀದಿಸಿದ್ದಾರೆ ಎನ್ನಲಾಗ್ತಿದೆ. ಇದನ್ನು ಕೆಲವರು ಪೂಜಾ ಹೆಗ್ಡೆಗಾಗಿ ತ್ರಿವಿಕ್ರಮ್ ಶ್ರೀನಿವಾಸ್ 2 ಕೋಟಿ ಕಾರ್ ಉಡುಗೊರೆ ನೀಡಿದ್ದಾರೆ ಎನ್ನುವ ಅರ್ಥದಲ್ಲಿ ಹಬ್ಬಿಸಿದ್ದಾರೆ. ಆದರೆ ಇದು ಪೂಜಾಗಾಗಿ ಖರೀದಿಸಿದ ಕಾರು ಅಲ್ಲ ಅನ್ನಲಾಗ್ತಿದೆ.

Reason behind Trivikram Srinivas Buying a New Car for Pooja Hegde

ಹಾರಿಕಾ ಆಂಡ್ ಹಾಸಿನಿ ಕ್ರಿಯೇಷನ್ಸ್ ಸಂಸ್ಥೆ ಅಥವಾ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ ಸಿನಿಮಾಗಳಲ್ಲಿ ಇನ್ನು ಮುಂದೆ ಯಾರೇ ನಾಯಕಿಯಾಗಿ ನಟಿಸಿದರು ಅವರು ಈ ಕಾರನ್ನು ಬಳಸುತ್ತಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಎರಡೂ ಸಂಸ್ಥೆಗಳ ನಿರ್ಮಾಪಕರು ಅಥವಾ ತ್ರಿವಿಕ್ರಮ್ ಪ್ರತಿಕ್ರಿಯಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯ SSMB28 ಸಿನಿಮಾ ಹೊಸ ಶೆಡ್ಯೂಲ್ ಶುರುವಾಗಿದೆ. ಕಾರಣಾಂತರಗಳಿಂದ ಈ ಸಿನಿಮಾ ಶೂಟಿಂಗ್ ತಡವಾಗುತ್ತಾ ಬರ್ತಿದೆ.

'ಅತಡು', 'ಖಲೇಜಾ' ಚಿತ್ರಗಳಲ್ಲಿ ಈ ಹಿಂದೆ ಮಹೇಶ್ ಬಾಬು- ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಿಗೆ ಕೆಲಸ ಮಾಡಿದ್ದರು. 'ಅತಡು' ಬಾಕ್ಸಾಫೀಸ್ ಶೇಕ್ ಮಾಡಿದ್ರೆ, 'ಖಲೇಜಾ' ಒಳ್ಳೆ ಸಿನಿಮಾ ಎನಿಸಿಕೊಂಡಿತ್ತು. ಇವರಿಬ್ಬರ ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ SSMB28 ಕುತೂಹಲ ಕೆರಳಿಸಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಶೂಟಿಂಗ್ ಇಷ್ಟೊತ್ತಿಗೆ ಮುಗಿಯಬೇಕಿತ್ತು. ಏಪ್ರಿಲ್ ಕೊನೆಯ ವಾರದಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು.

Reason behind Trivikram Srinivas Buying a New Car for Pooja Hegde

#SSMB28 ಚಿತ್ರದಲ್ಲಿ 2ನೇ ನಾಯಕಿಯಾಗಿ ಶ್ರೀಲೀಲಾ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಸಿನಿಮಾ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಶುರುವಾಗಿದ್ದು 'ಕಿಸ್‌' ಬೆಡಗಿ ಕೂಡ ಚಿತ್ರೀಕರಣದಲ್ಲಿ ಭಾಗಿ ಆಗ್ತಾರೆ ಎನ್ನಲಾಗ್ತಿದೆ. ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿಲ್ಲ. ಹಾಗಾಗಿ #SSMB28 ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

More from Filmibeat

English summary
Reason behind Trivikram Srinivas Buying a New Car for Pooja Hegde. After Ala Vaikunthapurramuloo Pooja hegde Working in Trivikram Direction in SSMB28. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X