For Quick Alerts
  ALLOW NOTIFICATIONS  
  For Daily Alerts

  'ಲೈಗರ್' ಸಿನಿಮಾ ಸೋಲಿಗೆ ಕಾರಣಗಳು: ಪುರಿ- ವಿಜಯ್ ಎಡವಿದ್ದೆಲ್ಲಿ?

  |

  ಆಟಂಬಾಂಬ್ ತರ ಸಿಡಿಯುತ್ತೆ ಎಂದುಕೊಂಡಿದ್ದ 'ಲೈಗರ್' ಸಿನಿಮಾ ಠುಸ್ ಪಟಾಕಿ ಆಗಿದೆ. ಡೈನಾಮಿಕ್ ಡೈರೆಕ್ಟರ್ ಪುರಿ ಜನನ್ನಾಥ್ ಹಾಗೂ ವಿಜಯ್ ದೇವರಕೊಂಡ ಕ್ರೇಜಿ ಕಾಂಬಿನೇಷನ್‌ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋಲುಂಡಿದೆ. ಮೊದಲ ಶೋಗೆ ನೆಗೆಟಿವ್ ಟಾಕ್ ಬಂದ ಪರಿಣಾಮ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುವ ಸುಳಿವು ಸಿಕ್ತಿದೆ. ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್‌ಗೂ ಕಲೆಕ್ಷನ್‌ಗೂ ಸಂಬಂಧವೇ ಇಲ್ಲ ಎನ್ನುವಂತೆ ಮೊದಲ ದಿನ ಸಿನಿಮಾ 30 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ಆದರೆ ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕು.

  'ಲೈಗರ್' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಪಕ್ಕಕ್ಕಿಟ್ಟರೆ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದೆ. ಅದೇ ಹಳೇ ಸ್ಟೋರಿಯನ್ನು ಹೊಸದಾಗಿ ಹೇಳುವ ನಿರ್ದೇಶಕರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿಲ್ಲ. ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್‌ನ ಕರ್ಕೊಂಡು ಬಂದಿದ್ದು ಕೂಡ ಪ್ರಯೋಜನವಾಗಲಿಲ್ಲ. ನೂರಾರು ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಿ ಊರೂರು ಸುತ್ತಿ ಪ್ರಮೋಷನ್ ಮಾಡಿದ್ದು, ಹೊಳೆಯಲ್ಲಿ ಹುಣಸೆಹಣ್ಣು ಹಿಂಡಿದಂತಾಗಿದೆ. ಕೆಲವರಿಗಂತೂ ಸಿನಿಮಾ ಸುತಾರಾಂ ಇಷ್ಟವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಇದೆಂಥ ಸಿನಿಮಾ ? ಇದಕ್ಕಾಗಿ 3 ವರ್ಷ ಸರ್ಕಸ್ ಮಾಡಿದ್ರಾ? ಅಂತೆಲ್ಲಾ ಅಣಕವಾಡುತ್ತಿದ್ದಾರೆ.

  Liger Movie Review : ವರ್ಕೌಟ್ ಆಯ್ತಾ ವಿಜಯ್-ಪುರಿ ಜಗನ್ನಾಥ್ ಮ್ಯಾಜಿಕ್?Liger Movie Review : ವರ್ಕೌಟ್ ಆಯ್ತಾ ವಿಜಯ್-ಪುರಿ ಜಗನ್ನಾಥ್ ಮ್ಯಾಜಿಕ್?

  ಪ್ಯಾನ್ ಇಂಡಿಯಾ ಸ್ಟಾರ್ ಆಗುವ ವಿಜಯ್ ದೇವರಕೊಂಡ ಉತ್ಸಾಹದ ಬಲೂನಿಗೆ ಸೂಜಿ ಚುಚ್ಚಿದಂತಾಗಿದೆ. ರಾಜಮೌಳಿ, ಪ್ರಶಾಂತ್‌ ನೀಲ್, ಸುಕುಮಾರ್ ರೀತಿಯಲ್ಲೇ ದೊಡ್ಡಮಟ್ಟದಲ್ಲಿ ಸಕ್ಸಸ್ ಕಾಣುವ ಕನಸು ಕಂಡಿದ್ದ ಪುರಿ ಜಗನ್ನಾಥ್‌ಗೂ ಹಿನ್ನಡೆಯಾಗಿದೆ. ವಿಜಯ್ ನಟನೆ ಬಿಟ್ಟರೆ ಉಳಿದ ವಿಭಾಗಗಳಲ್ಲೂ ಸ್ಕೋರ್ ಮಾಡುವಲ್ಲಿ 'ಲೈಗರ್' ಸಿನಿಮಾ ಸೋತಿದೆ. ಪರಿಣಾಮ ಪ್ರೇಕ್ಷಕರು ಸಿನಿಮಾ ನೋಡಿ ಬೇಸರಗೊಂಡಿದ್ದಾರೆ. ಅಷ್ಟಕ್ಕೂ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಸೋಲಿಗೆ ಕಾರಣವಾದ ಅಂಶಗಳೇನು? ಮುಂದೆ ಓದಿ.

  ಪುರಿ- ವಿಜಯ್ ಓವರ್ ಕಾನ್ಫಿಡೆನ್ಸ್!

  ಪುರಿ- ವಿಜಯ್ ಓವರ್ ಕಾನ್ಫಿಡೆನ್ಸ್!

  ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಟ ವಿಜಯ್ ದೇವರಕೊಂಡ ಟ್ಯಾಲೆಂಟ್ ಬಗ್ಗೆ ದೂಸ್ರಾ ಮಾತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇಬ್ಬರು ಕೆಲಸಕ್ಕಿಂತ ಜಾಸ್ತಿ ಮಾತನಾಡುತ್ತಿದ್ದಾರೆ. 'ಲೈಗರ್' ಸಿನಿಮಾ ಸೆಟ್ಟೇರಿದ ದಿನದಿಂದಲೂ ಆಗಿದ್ದು ಅದೇ. ಸ್ಟೋರಿ, ಸ್ಕ್ರೀನ್‌ಪ್ಲೇ ಅಲ್ಲಿ ಧಮ್ ಇಲ್ಲದೇ ಬರೀ ಮಾತಿನಲ್ಲೇ ಮಂಟಪ ಕಟ್ಟಿದ್ದರು. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬಂದು ಹೋಗಿರುವ ಕಥೆಯನ್ನು ಪುರಿ ಜಗನ್ನಾಥ್ ಮತ್ತೆ ಹೇಳಿದ್ದಾರೆ. ಬರೀ ಬಿಲ್ಡಪ್‌ಗಳಲ್ಲೇ ಚಿತ್ರವನ್ನು ಗೆಲ್ಲಿಸುವ ಸಾಹಸ ಮಾಡಿದ್ದಾರೆ. ಆದರೆ ಅದು ವರ್ಕ್ ಆಗಿಲ್ಲ.

  'ಲೈಗರ್' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?'ಲೈಗರ್' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?

  ವಿಜಯ್ ಆಟಿಟ್ಯೂಡ್ ಬದಲಾಗಬೇಕು

  ವಿಜಯ್ ಆಟಿಟ್ಯೂಡ್ ಬದಲಾಗಬೇಕು

  ನಟ ವಿಜಯ್ ದೇವರಕೊಂಡಗೆ ಆಟಿಟ್ಯೂಡ್ ಜಾಸ್ತಿಯಾಗಿದೆ. ಆತ ಇನ್ನು 'ಅರ್ಜುನ್ ರೆಡ್ಡಿ' ಗುಂಗಿನಿಂದ ಹೊರ ಬಂದಂತೆ ಕಾಣುತ್ತಿಲ್ಲ. ವೇದಿಕೆಗಳಲ್ಲಿ ನಿಂತು ಅಹಂಕಾರದಿಂದ ಮಾತನಾಡುತ್ತಿದ್ದಾನೆ. ಇದು ಕಮ್ಮಿ ಆಗಬೇಕು ಅನ್ನುವುದು ಕೆಲವರ ವಾದ. ಇತ್ತೀಚೆಗೆ ಬಾಯ್‌ಕಾಟ್ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೂ "ಬಾಯ್‌ಕಾಟ್ ಮಾಡೋರಿಗೆ ಮಾಡೋಕೆ ಬಿಡಿ. ನಾವು ಸಿನಿಮಾ ಮಾಡುತ್ತೇವೆ. ಯಾರಿಗೆ ನೋಡಬೇಕು ಅನಿಸುತ್ತೆ ಅವರು ನೋಡುತ್ತಾರೆ. ಯಾರಿಗೆ ನೋಡುವುದಕ್ಕೆ ಇಷ್ಟವಿಲ್ಲವೋ ಅವರು ಟಿವಿ ಇಲ್ಲವೇ ಫೋನ್‌ನಲ್ಲಿ ನೋಡುತ್ತಾರೆ. ಇದಕ್ಕೆ ನಾವೇನು ಮಾಡುವುದಕ್ಕೆ ಆಗೋದಿಲ್ಲ. ತುಂಬಾ ಗಮನ ಕೊಡುವುದಿಲ್ಲ" ಎಂದು ವಿಜಯ್ ದೇವರಕೊಂಡ ಹೇಳಿದ್ದರು.

  ತಾಯಿ ಪಾತ್ರವೇ ಮೈನಸ್!

  ತಾಯಿ ಪಾತ್ರವೇ ಮೈನಸ್!

  ಸಿನಿಮಾ ವಿಚಾರದಲ್ಲಿ ಏನೆಲ್ಲಾ ತಪ್ಪಾಯ್ತು ಎಂದು ನೋಡುವುದಾದರೆ, ಮೊದಲಿಗೆ ಕಾಣಿಸುವುದು ರಮ್ಯಾಕೃಷ್ಣ ಮಾಡಿರುವ ಬಾಲಮಣಿ ಪಾತ್ರ. ನಟಿ ರಮ್ಯಾಕೃಷ್ಣ ಪವರ್‌ಫುಲ್ ರೋಲ್‌ಗಳಲ್ಲಿ ಅಬ್ಬರಿಸುತ್ತಾರೆ. ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಅದನ್ನು ನೋಡಿದ್ದೇವೆ. ವಿಜಯ್ ದೇವರಕೊಂಡ ಹಾಗೂ ರಮ್ಯಾಕೃಷ್ಣ ನಡುವಿನ ಮದರ್ ಸೆಂಟಿಮೆಂಟ್ ದೃಶ್ಯಗಳು ವರ್ಕ್ ಆಗಿಲ್ಲ. ಬಾಲಮಣಿ ಪಾತ್ರದಲ್ಲಿ ಎಮೋಷನ್‌ಗೆ ಪ್ರೇಕ್ಷಕರು ಅಷ್ಟಾಗಿ ಕನೆಕ್ಟ್ ಆಗದೇ ಇರುವುದು ದೊಡ್ಡ ಮೈನಸ್ ಆಗಿದೆ ಎನ್ನುವುದು ಕೆಲವರ ವಾದ.

  ಉಗ್ಗು ಸಮಸ್ಯೆಯ ನಾಯಕ ಪಾತ್ರ

  ಉಗ್ಗು ಸಮಸ್ಯೆಯ ನಾಯಕ ಪಾತ್ರ

  'ಲೈಗರ್' ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಉಗ್ಗು ಸಮಸ್ಯೆ ಇದೆ. ಹೀರೋ ಪಾತ್ರಗಳಿಗೆ ಇಂತಹ ಸಮಸ್ಯೆ ಇದ್ದರೆ ಅದು ಸ್ಪೆಷಲ್ ಅಟ್ರಾಕ್ಷನ್ ಆಗುತ್ತದೆ ಅನ್ನುವ ಲೆಕ್ಕಾಚಾರ ಕೆಲವರದ್ದು. ಆದರೆ ಈ ಚಿತ್ರದ ನಾಯಕನ ಪಾತ್ರಕ್ಕೆ ಅದು ಸರಿ ಅನ್ನಿಸುವುದಿಲ್ಲ. ಟ್ರೈಲರ್‌ನಲ್ಲಿ ವಿಜಯ್ ಒಂದೆರಡು ಕಡೆ ಉಗ್ಗುತ್ತಾ ಡೈಲಾಗ್ ಹೊಡೆದಿದ್ದು ಮಜಾ ಅನ್ನಿಸಿತ್ತು. ಆದರೆ ಇಡೀ ಸಿನಿಮಾ ಅದನ್ನು ನೋಡಲು ಪ್ರೇಕ್ಷಕರಿಗೆ ಕಷ್ಟ ಎನ್ನಿಸುತ್ತದೆ.

  ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ ಲವ್ ಟ್ರ್ಯಾಕ್

  ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ ಲವ್ ಟ್ರ್ಯಾಕ್

  ಪುರಿ ಜಗನ್ನಾಥ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ನಾಯಕಿಯರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವುದಿಲ್ಲ. ಬರೀ ಗ್ಲಾಮರ್‌ ಡಾಲ್ ರೀತಿ ತೋರಿಸುತ್ತಾರೆ. 'ಲೈಗರ್' ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ ನಾಯಕಿಯಾಗಿ ಮಿಂಚಿದ್ದಾರೆ. ಆದರೆ ಇವರಿಬ್ಬರ ಲವ್‌ ಟ್ರ್ಯಾಕ್ ಮಾತ್ರ ತುಂಬಾ ಪೇಲವ ಎನ್ನಿಸುತ್ತಿದೆ. ಇದರ ಬಗ್ಗೆ ಪ್ರೇಕ್ಷಕರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

  'ಲೈಗರ್' ಸಾಂಗ್ಸ್ ಹಿಟ್ ಆಗಲಿಲ್ಲ

  'ಲೈಗರ್' ಸಾಂಗ್ಸ್ ಹಿಟ್ ಆಗಲಿಲ್ಲ

  ಕಮರ್ಷಿಯಲ್ ಸಿನಿಮಾ ಅಂದರೆ ಮ್ಯೂಸಿಕ್ ಬಹಳ ಮುಖ್ಯ. ಸಿನಿಮಾ ರಿಲೀಸ್‌ಗೂ ಮೊದ್ಲೇ ಸಾಂಗ್ಸ್ ಹಿಟ್ ಆಗಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಬೇಕು. ಅದರಲ್ಲೂ ತೆಲುಗು ಪ್ರೇಕ್ಷಕರಿಗೆ ಮೈಕುಣಿಸುವಂತ ಸಾಂಗ್ಸ್ ಇರಲೇಬೇಕು. ಆದರೆ ನಾಲ್ಕೈದು ಜನ ಸಂಗೀತ ನಿರ್ದೇಶಕರು ಟ್ಯೂನ್ ಹಾಕಿದ್ರು, ಯಾವುದು ಕೂಡ ಕ್ಲಿಕ್ ಆಗಲಿಲ್ಲ. ಕೊನೆ ಪಕ್ಷ ತೆಲುಗು ಮ್ಯೂಸಿಕ್ ಡೈರೆಕ್ಟರ್‌ಗೆ ಅವಕಾಶ ಕೊಟ್ಟಿದ್ದರೂ ಒಂದೆರಡು ಸಾಂಗ್ ಹಿಟ್ ಆಗುತ್ತಿತ್ತು ಎನಿಸುತ್ತದೆ.

  ಸಿನಿಮಾ ಹುಟ್ಟಾಕಿದ ಹೈಪ್

  ಸಿನಿಮಾ ಹುಟ್ಟಾಕಿದ ಹೈಪ್

  ದೇಶಾದ್ಯಂತ 'ಲೈಗರ್' ಸಿನಿಮಾ ಬಗ್ಗೆ ಭಾರೀ ಹೈಪ್ ಕ್ರಿಯೇಟ್ ಆಗಿತ್ತು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಪ್ರಮೋಷನ್ ಮಾಡಿದ್ದರು. ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ ಚಿತ್ರದಲ್ಲಿ ನಟಿಸಿದ್ದು ಕೂಡ ಕುತೂಹಲ ಕೆರಳಿಸಿತ್ತು. ಇನ್ನು ಪೋಸ್ಟರ್‌ಗಳಲ್ಲಿ ವಿಜಯ್ ದೇವರಕೊಂಡನನ್ನು ಬಹುತೇಕ ಬೆತ್ತಲಾಗಿ ತೋರಿಸಿ, ಗಿಮಿಕ್ ಮಾಡಿದ್ದರು. 'ಅರ್ಜುನ್ ರೆಡ್ಡಿ' ಸಿನಿಮಾದಿಂದ ವಿಜಯ ದೇವರಕೊಂಡಗೆ ಹೊರ ರಾಜ್ಯಗಳಲ್ಲೂ ಭಾರೀ ಕ್ರೇಜ್ ಕ್ರಿಯೇಟ್ ಆಗಿತ್ತು. ಹಾಗಾಗಿ ಪ್ರಮೋಷನ್‌ಗೆ ಹೋದ ಕಡೆಯೆಲ್ಲಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಪ್ರೇಕ್ಷಕರು ಭಾರೀ ನಿರೀಕ್ಷೆಯಿಂದ ಥಿಯೇಟರ್‌ಗೆ ಹೋಗಿದ್ದರು. ಆದರೆ 'ಲೈಗರ್' ಸಿನಿಮಾ ಆ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದೆ.

  English summary
  Reasons For Vijay Devarakonda Starerr Liger Movie Flop Talk.
  Saturday, August 27, 2022, 8:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X