ಹುಡುಗರ ಸಾಮರ್ಥ್ಯ ಕೇವಲ ಎರಡೇ ನಿಮಿಷ ಎಂದಿದ್ದ ನಟಿಯ ಚಿತ್ರ ಟುಸ್; 1 ಕೋಟಿನಾದ್ರೂ ಗಳಿಸೋದು ಬೇಡ್ವಾ?

ಸಿನಿಮಾ ನಟಿಯರು ಸಂದರ್ಶನಗಳಲ್ಲಿ ಓಪನ್ ಆಗಿ ಮಾತನಾಡಿ ವಿವಾದ ಹಾಗೂ ಟ್ರೋಲ್‌ಗಳಿಗೆ ಆಹಾರವಾಗುವುದು ಕಾಮನ್. ಈಗಾಗಾಲೇ ಹಲವು ನಟಿಯರು ಈ ಬೇಡವಾದ ಪರಿಸ್ಥಿತಿಯನ್ನು ಮೈಮೇಲೆ ಎಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ. ಈ ಸಾಲಿಗೆ ಇತ್ತೀಚೆಗೆ ಸೇರಿಕೊಂಡ ನಟಿ ಎಂದರೆ ಅದು ಮ್ಯಾಗಿ ಗರ್ಲ್ ರೆಜಿನಾ ಕೆಸಂಡ್ರಾ. ಹೌದು, ಈ ಹಿಂದೆ ಎವರು ನಟಿ, ಕನ್ನಡದ ಸೂರ್ಯಕಾಂತಿ ನಟಿ ಎಂದು ಗುರತಿಸಿಕೊಳ್ಳುತ್ತಿದ್ದ ನಟಿ ರೆಜಿನಾ ಕೆಸಂಡ್ರ ಇದೀಗ ಮ್ಯಾಗಿ ನಟಿ ಎಂದೆನಿಸಿಕೊಳ್ಳತೊಡಗಿದ್ದಾರೆ.

ಇದಕ್ಕೆ ಕಾರಣ ಆಕೆಯೇ ಸಂದರ್ಶನವೊಂದರಲ್ಲಿ ಹೇಳಿದ ತುಸು ಪೋಲಿ ಹೇಳಿಕೆ. ಹೌದು, ಇತ್ತೀಚಿಗಷ್ಟೆ ರೆಜಿನಾ ಕೆಸಂಡ್ರ ತನ್ನ ಮುಂದಿನ ಸಿನಿಮಾವಾದ ಶಾಕಿನಿ ಡಾಕಿನಿಯ ಪ್ರಚಾರಕ್ಕಾಗಿ ಖಾಸಗಿ ಯುಟ್ಯೂಬ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಶನದಲ್ಲಿ ಮಾತನಾಡುತ್ತಾ ನನಗೊಂದು ಜೋಕ್ ಗೊತ್ತು ಅದನ್ನು ಇಲ್ಲಿ ಹೇಳಬೇಕೋ, ಹೇಳಬಾರದೋ ಗೊತ್ತಾಗುತ್ತಿಲ್ಲ ಎಂದು ಹೇಳುತ್ತಲೇ ಹುಡುಗರು ಹಾಗೂ ಮ್ಯಾಗಿ ಎರಡೂ ಸಹ ಒಂದೇ, ಯಾಕೆಂದರೆ ಎರಡೂ ಸಹ ಎರಡೇ ನಿಮಿಷ ಎಂದು ಹೇಳಿದ್ದರು.

ನಟಿಯ ಈ ಹೇಳಿಕೆ ಕಂಡು ಚಿತ್ರದಲ್ಲಿ ಅಭಿನಯಿಸಿದ್ದ ಮತ್ತೋರ್ವ ನಟಿ ನಿವೇದಾ ಥಾಮಸ್ ಕೂಡ ಜೋರಾಗಿ ನಕ್ಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು. ದಿನ ಕಳೆಯುವ ಮುನ್ನ ದೇಶದಾದ್ಯಂತ ಈಕೆಯ ಹೇಳಿಕೆ ಹಬ್ಬಿತ್ತು. ಇನ್ನು ಈ ವಿಡಿಯೋ ದೇಶಾದ್ಯಂತ ತಲುಪಿದಂತೆ ಅವರು ಅಭಿನಯಿಸಿದ್ದ ಚಿತ್ರ ತಲುಪುವಲ್ಲಿ ವಿಫಲವಾಗಿದೆ. ದೇಶ ಬಿಡಿ ತೆಲುಗು ರಾಜ್ಯಗಳಲ್ಲಿಯೇ ಚಿತ್ರ ಮಕಾಡೆ ಮಲಗಿದೆ.

ಶಾಕಿನಿ ಡಾಕಿನಿ ಶೋಗಳು ಖಾಲಿ ಖಾಲಿ

ಶಾಕಿನಿ ಡಾಕಿನಿ ಶೋಗಳು ಖಾಲಿ ಖಾಲಿ

ಇಂದು ( ಸೆಪ್ಟೆಂಬರ್ 16 ) ರೆಜಿನಾ ಕೆಸಂಡ್ರಾ ಹಾಗೂ ನಿವೇದಾ ಥಾಮಸ್ ಅಭಿನಯದ ಶಾಕಿನಿ ಡಾಕಿನಿ ತೆಲುಗು ಸಿನಿಮಾ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿಯೂ ಮೊದಲ ದಿನ ಐವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಈ ಚಿತ್ರ ಬಿಡುಗಡೆ ದಿನವೇ 'ಗೋ ಗ್ರೀನ್' ಕ್ಯಾಂಪೇನ್ ನಡೆಸಿದೆ. ಬೆಂಗಳೂರು ಹಾಗೂ ಇತರೆ ತೆಲುಗೇತರ ನಗರಗಳಲ್ಲಿ ಚಿತ್ರದ ಕಡೆ ಯಾರೂ ಮುಖ ಮಾಡಿಲ್ಲ. ಅತ್ತ ತೆಲುಗು ರಾಜ್ಯಗಳಲ್ಲಿಯೂ ಸಹ ಜನರಿಲ್ಲದೇ ಬಹುತೇಕ ಶೋಗಳು ನಡೆದಿವೆ. ಒಂದೆರಡು ಶೋಗಳು ಇನ್ನೇನು ತುಂಬಿದ ಪ್ರದರ್ಶನ ಕಾಣಬಹುದು ಎನ್ನುವ ನಿರೀಕ್ಷೆ ಹುಟ್ಟಿಸಿದ್ದವಷ್ಟೇ. ಹೀಗೆ ಶಾಕಿನಿ ಡಾಕಿನಿ ಚಿತ್ರದ ಶೋಗಳು ಖಾಲಿ ಖಾಲಿಯಾಗಿವೆ.

ಮೊದಲ ದಿನದ ಕಲೆಕ್ಷನ್ ಎಷ್ಟು?

ಮೊದಲ ದಿನದ ಕಲೆಕ್ಷನ್ ಎಷ್ಟು?

ಶಾಕಿನಿ ಡಾಕಿನಿ ಚಿತ್ರ ಮೊದಲ ದಿನ ಎಲ್ಲಾ ಏರಿಯಾಗಳನ್ನೂ ಸೇರಿಸಿ ಒಟ್ಟು 50 ಲಕ್ಷ ರೂಪಾಯಿಗಳನ್ನು ಗಳಿಸಿದೆ. ಈ ಕಲೆಕ್ಷನ್ ರಿಪೋರ್ಟ್‌ಗಳನ್ನು ಕೆಲ ಟ್ರೋಲ್ ಪೇಜ್‌ಗಳು ಪೋಸ್ಟ್ ಮಾಡಿದ್ದು, ಯುಟ್ಯೂಬ್ ಸಂದರ್ಶನದಲ್ಲಿ ಕುಳಿತು ಅನಗತ್ಯ ಹೇಳಿಕೆ ನೀಡುವ ಬದಲು ಜನ ಚಿತ್ರಮಂದಿರಕ್ಕೆ ಬರುವಂತ ಚಿತ್ರ ಮಾಡಿ ಎಂದು ಸಲಹೆ ನೀಡಿ ಕಾಲೆಳೆದಿದ್ದಾರೆ.

ಡಿಸಾಸ್ಟರ್, ಫ್ಲಾಪ್ ಎಂದ ವೀಕ್ಷಕರು

ಡಿಸಾಸ್ಟರ್, ಫ್ಲಾಪ್ ಎಂದ ವೀಕ್ಷಕರು

ಇನ್ನು ವೀಕ್ಷಕರು ಈ ಚಿತ್ರವನ್ನು ಡಿಸಾಸ್ಟರ್ ಹಾಗೂ ಫ್ಲಾಪ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಎಂದು ನೆಟ್ಟಿಗರು ಟ್ವೀಟ್ ಮಾಡಿ ತೆಗಳುತ್ತಿದ್ದಾರೆ. ಥ್ರಿಲ್ಲಿಂಗ್ ಎಲಿಮಿಂಟ್ಸ್ ಚಿತ್ರದಲ್ಲಿದೆ ಅಂತ ಹೇಳಿದ್ರಿ, ಚಿತ್ರದಲ್ಲಿ ಯಾವ ಥ್ಲಿಲ್ ಕೂಡ ಇಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಅಷ್ಟೇ ಇಲ್ಲದೇ ಈ ಚಿತ್ರದ ಜತೆ ಬಿಡುಗಡೆಗೊಂಡ ಇನ್ನುಳಿದ ತೆಲುಗು ಚಿತ್ರಗಳಾದ ನೇನು ಮೀಕು ಬಾಗ ಕಾವಲ್ಸಿನವಾಡಿನಿ ಹಾಗೂ ಈ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನಿಮಾಗಳೂ ಸಹ ಅಷ್ಟಕ್ಕಷ್ಟೇ ಎಂದು ವೀಕ್ಷಕರು ನಿರಾಸೆ ಹೊರಹಾಕಿದ್ದಾರೆ.

More from Filmibeat

English summary
Regina Cassandra starrer Saakini Daakini collects 50 lakhs on day 1 and heading towards huge disaster. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X