For Quick Alerts
  ALLOW NOTIFICATIONS  
  For Daily Alerts

  "ಆಕೆ ಬಂದು ನನ್ನ ತುಟಿಗೆ ತುಟಿ ಒತ್ತಿದ್ಲು: ಹೆಂಗಸಾಗಿದ್ದಕ್ಕೆ ಸುಮ್ಮನೆ ಬಿಟ್ಟೆ"; ರೆಜಿನಾ ಕಸೆಂದ್ರ

  |

  ಇತ್ತೀಚೆಗೆ "ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ತರ ಎರಡೇ ನಿಮಿಷ" ಎಂದು ಜೋಕ್ ಮಾಡಿದ್ದ ರೆಜಿನಾ ಈಗ ಮತ್ತೊಂದು ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ. ರೆಜಿನಾ ಮಾತು ಕೇಳಿ ಕೆಲವರು ಆಕ್ರೋ ವ್ಯಕ್ತಪಡಿಸ್ತಿದ್ದಾರೆ. ಪುರುಷರು ಹಾಗೂ ಮಹಿಳೆಯ ಬಗ್ಗೆ ಆಕೆ ತಾರತಮ್ಯ ಮಾಡಿ ಮಾತನಾಡುತ್ತಿದ್ದಾಳೆ ಎಂದಿದ್ದಾರೆ. ಅಂದಹಾಗೆ ರೆಜಿನಾ ಹಾಗೂ ನಿವೇತಾ ಥಾಮಸ್ ನಟನೆಯ 'ಶಾಕಿನಿ ಡಾಕಿನಿ' ಸಿನಿಮಾ ರಿಲೀಸ್ ಆಗಿದೆ.

  ಒಂದ್ಕಾಲದಲ್ಲಿ ಹೀರೊಯಿನ್ ಆಗಿ ಕಮಾಲ್ ಮಾಡಿ ನಟಿ ರೆಜಿನಾ ಈಗ ಕೊಂಚ ಸೈಲೆಂಟ್ ಆಗಿದ್ದಾರೆ. ಇತ್ತೀಚಿಗೆ 'ಆಚಾರ್ಯ' ಐಟಂ ಡ್ಯಾನ್ಸರ್ ಆಗಿ ಕುಣಿದಿದ್ದರು. ಇನ್ನು ತನ್ನ ಬೋಲ್ಡ್ ಕಾಮೆಂಟ್‌ಗಳ ಕಾರಣಕ್ಕೂ ರೆಜಿನಾ ಪದೇ ಪದೇ ಸುದ್ದಿ ಆಗ್ತಿರ್ತಾರೆ. ಇತ್ತೀಚಿಗೆ ಸಂದರ್ಶನದಲ್ಲಿ ಆಕೆ ಹುಡುಗರ ಲೈಂಗಿಕ ಸಾಮರ್ಥ್ಯ ಬಗ್ಗೆ ಜೋಕ್ ಮಾಡಿದ್ದು, ಅದಕ್ಕೆ ನಟ ಅಡಿವಿ ಶೇಷ್ ತಿರುಗೇಟು ನೀಡಿದ್ದು ಹೇಳೇ ಸುದ್ದಿ. ಇದೀಗ ಮಹಿಳೆಯೊಬ್ಬರು ತಮಗೆ ಲಿಪ್ ಲಾಕ್ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.

  ರೆಜಿನಾ '2 ನಿಮಿಷ' ಮ್ಯಾಗಿ ಜೋಕ್: 'ನನಗೆ ಸ್ಟಾಮಿನಾ' ಜಾಸ್ತಿ ಎಂದ 'ಮೇಜರ್'!ರೆಜಿನಾ '2 ನಿಮಿಷ' ಮ್ಯಾಗಿ ಜೋಕ್: 'ನನಗೆ ಸ್ಟಾಮಿನಾ' ಜಾಸ್ತಿ ಎಂದ 'ಮೇಜರ್'!

  ತಮಗೆ ಜೀವನದಲ್ಲಾದ ಲಿಪ್‌ಲಾಕ್ ಅನುಭವದ ಬಗ್ಗೆ ಮಾತನಾಡುತ್ತಾ ರೆಜಿನಾ "ಒಮ್ಮೆ ನಾನು ಏನೋ ಕೆಲಸ ಮಾಡುತ್ತಿದ್ದೆ. ಒಬ್ಬ ಮಹಿಳೆ ಬಂದು ದಿಢೀರನೆ ನನ್ನ ತುಟಿಗೆ ಕಿಸ್ ಮಾಡಿದ್ದಳು. ಸಡನ್ ಆಗಿ ಆ ರೀತಿ ಆಗಿದ್ದಕ್ಕೆ ಮೊದಲಿಗೆ ಶಾಕ್ ಆಗಿದ್ದೆ. ಆದರೆ ಕಿಸ್ ಮಾಡಿದ್ದು ಮಹಿಳೆ ಆಗಿದ್ದ ಕಾರಣಕ್ಕೆ ಆಕೆಯನ್ನು ಹಿಂದೆ ನೂಕಲಿಲ್ಲ. ಒಂದು ವೇಳೆ ಅದೇ ಕೆಲಸ ಪುರುಷ ಮಾಡಿದ್ದರೆ ಕಥೆ ಬೇರೇನೆ ಆಗಿರುತ್ತಿತ್ತು. ಆತನ ಕೆನ್ನೆಗೆ ಬಾರಿಸುತ್ತಿದ್ದೆ" ಎಂದು ರೆಜಿನಾ ಹೇಳಿದ್ದಾರೆ. ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

  ರೆಜಿನಾ ಮಾತುಗಳಿಗೆ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ರೆಜಿನಾ ಸಲಿಂಗಿ ಇರಬಹುದು". "ಮಹಿಳೆ ಬದಲು ಪುರುಷ ಕಿಸ್ ಮಾಡಿದ್ದರೆ ಇನ್ನು ಜಾಸ್ತಿ ಎಂಜಾಯ್ ಮಾಡುತ್ತಿದ್ದಳು ಅನ್ನಿಸುತ್ತೆ". ಹೀಗೆ ಚಿತ್ರ ವಿಚಿತ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. 'ಶಾಕಿನಿ ಡಾಕಿನಿ' ಸಿನಿಮಾ ಪ್ರಮೋಷನ್‌ಗಾಗಿ ರೆಜಿನಾ ಹೀಗೆ ಬೇಡದ ವಿಚಾರಗಳನ್ನು ಮಾತನಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

  Regina Recalls Her Lip-Lock Experience With A Lady

  'ಸೂರ್ಯಕಾಂತಿ' ಅನ್ನುವ ಕನ್ನಡ ಸಿನಿಮಾದಲ್ಲೂ ರೆಜಿನಾ ನಟಿಸಿದ್ದಾರೆ. ಇನ್ನು ಸುಧೀರ್ ವರ್ಮಾ ನಿರ್ದೇಶನದಲ್ಲಿ ರೆಜಿನಾ ಕಸೆಂದ್ರ ಹಾಗೂ ನಿವೇತಾ ಲೀಡ್ ರೋಲ್‌ಗಳಲ್ಲಿ ನಟಿಸಿರುವ 'ಶಾಕಿನಿ ಡಾಕಿನಿ' ಸಿನಿಮಾ ರಿಲೀಸ್ ಆಗಿದೆ. ಸುರೇಶ್ ಬಾಬು, ಸುನಿತಾ ಮತ್ತು ಥಾಮಸ್ ಕಿನ್ ಚಿತ್ರವನ್ನು ನಿರ್ಮಿಸಿದ್ದಾರೆ. ಮಿಕ್ಕಿ ಜೆ ಮೇಯರ್ ಸಂಗೀತ ಚಿತ್ರಕ್ಕಿದೆ.

  English summary
  Regina Shares Her Lip-Lock Experience With Women. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X