ಪವನ್ ಕಲ್ಯಾಣ್ 'OG' ಚಿತ್ರಕ್ಕೆ ಒಳ್ಳೆ ರಿಲೀಸ್ ಡೇಟ್ ಫಿಕ್ಸ್ ಮಾಡಿದ ಟೀಂ

ತೆಲುಗು ನಟ ಪವನ್ ಕಲ್ಯಾಣ್ ಈಗ ಆಂಧ್ರದ ಡಿಸಿಎಂ ಆಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯರಂಗದಲ್ಲಿ ಬ್ಯುಸಿಯಾಗಿದ್ದ ಕಾರಣ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದರು. ಇದೀಗ ಕೊಂಚ ಬಿಡುವು ಮಾಡಿಕೊಂಡು ಅರ್ಧಕ್ಕೆ ನಿಲ್ಲಿಸಿದ್ದ ಸಿನಿಮಾಗಳನ್ನು ಮುಗಿಸಲು ಕೆಲಸ ಮಾಡುತ್ತಿದ್ದಾರೆ.

ಬಿಡುವಿರದ ರಾಜಕೀಯ ಚಟುವಟಿಕೆಗಳ ನಡುವೆಯೂ ಇತ್ತೀಚೆಗೆ 'ಹರಿಹರ ವೀರಮಲ್ಲು' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಜೂನ್ 12ಕ್ಕೆ ಈ ಸಿನಿಮಾ ತೆರೆಗಪ್ಪಳಿಸಲಿದೆ. 'ಉಸ್ತಾದ್ ಭಗತ್ ಸಿಂಗ್' ಹಾಗೂ 'OG' ಎಂಬ ಮತ್ತೆರಡು ಸಿನಿಮಾಗಳನ್ನು ಪವರ್ ಸ್ಟಾರ್ ಅರ್ಧಕ್ಕೆ ನಿಲ್ಲಿಸಿದ್ದರು. ಆ ಸಿನಿಮಾಗಳ ಚಿತ್ರೀಕರಣ ಪುನರಾರಂಭವಾಗುತ್ತಿದೆ. ಇದೀಗ 'OG' ರಿಲೀಸ್ ಡೇಟ್ ಕೂಡ ಘೋಷಣೆ ಆಗಿದೆ.

Release date for Pawan Kalyan s film OG has been officially confirmed

'ಸಾಹೋ' ಚಿತ್ರ ಕಟ್ಟಿಕೊಟ್ಟಿದ್ದ ಸುಜಿತ್ ನಿರ್ದೇಶನದ ಸಿನಿಮಾ 'OG'. ರಾಜಮೌಳಿ ನಿರ್ದೇಶನದ 'RRR' ಸಿನಿಮಾ ನಿರ್ಮಿಸಿದ್ದ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಪವನ್ ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸಲಿದ್ದಾರೆ. ಈಗಾಗಲೇ ಬಂದಿರುವ ಪೋಸ್ಟರ್, ಗ್ಲಿಂಪ್ಸ್ ಎಲ್ಲವೂ ಅಭಿಮಾನಿಗಳ ಮನಗೆದ್ದಿದೆ. ಮೇ 26ರಿಂದ ಪವನ್ ಕಲ್ಯಾಣ್ 'OG' ಚಿತ್ರೀಕರಣದಲ್ಲಿ ಭಾಗವಹಿಸುವ ಸುಳಿವು ಸಿಕ್ಕಿದೆ.

2024ರ ಆಂಧ್ರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪವನ್ ಪಕ್ಷ ಸಂಘಟನೆಗೆ ಮುಂದಾಗಿದ್ದರು. ಹಾಗಾಗಿ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದರು. 2 ವರ್ಷದ ಹಿಂದೆಯೇ ಶೂಟಿಂಗ್ ನಿಲ್ಲಿಸಿದ್ದರು. ಸಂಪೂರ್ಣವಾಗಿ ಪಾಲಿಟಿಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದರು. ಟಿಡಿಪಿ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಜನಸೇನಾ ಪಕ್ಷ ಗೆದ್ದಿತ್ತು. ಹಾಗಾಗಿ ಡಿಸಿಎಂ ಹುದ್ದೆ ಕೂಡ ಸಿಕ್ಕಿದೆ.

ಚುನಾವಣೆಯಲ್ಲಿ ಯಶಸ್ಸು ಸಿಗುತ್ತಿದ್ದಂತೆ ಪವನ್ ಸಿನಿಮಾಗಳ ಚಿತ್ರೀಕರಣಕ್ಕೆ ವಿಘ್ನ ಎದುರಾಗಿತ್ತು. ಅಂತೂ ಇಂತೂ ಪವರ್ ಸ್ಟಾರ್ ಒಪ್ಪಿಕೊಂಡಿರುವ 3 ಸಿನಿಮಾಗಳನ್ನು ಮುಗಿಸಲು ಮುಂದಾಗಿರುವುದು ನಿರ್ಮಾಪಕರಿಗೆ ಸಂತಸ ತಂದಿದೆ. ಅಭಿಮಾನಿಗಳು ಕೂಡ ಆದಷ್ಟು ಬೇಗ ಸಿನಿಮಾ ನೋಡಬೇಕು ಎಂದು ಕಾಯುವಂತಾಗಿದೆ. 10 ವರ್ಷಗಳ ಕಾಲ ಮುಂಬೈ ಪಾತಕಲೋಕದಿಂದ ದೂರಾಗಿದ್ದ ಓಜಸ್ ಗಂಭೀರ 'OG' ಎಂಬ ಡಾನ್ ಮತ್ತೊಬ್ಬ ಕಿರಾತಕ ಓಮಿ ಭೌನನ್ನು ಕೊಲ್ಲಲು ವಾಪಸ್ ಬರ್ತಾನೆ. ಮುಂದೇನು ಎನ್ನುವುದು ಈ ಸಿನಿಮಾ ಕಥೆ.

ದಸರಾ ಸಂಭ್ರಮದಲ್ಲಿ ಸೆಪ್ಟೆಂಬರ್ 25ಕ್ಕೆ 'OG' ಸಿನಿಮಾ ಬಿಡುಗಡೆ ಆಗುತ್ತಿದೆ. ಲಾಂಗ್ ವೀಕೆಂಟ್ ಪ್ಲ್ಯಾನ್ ಮಾಡಿ ಸಿನಿಮಾ ತೆರೆಗೆ ತರುತ್ತಿದ್ದಾರೆ. ಸೆಪ್ಟೆಂಬರ್ 25ರ ಗುರುವಾರದಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಬಳಿಕ 3 ದಿನ ವೀಕೆಂಡ್. ಬಳಿಕ ಸೆಪ್ಟೆಂಬರ್ 30ರಂದು ಆಂಧ್ರದಲ್ಲಿ ಸಾರ್ವತ್ರಿಕ ರಜೆ ಇದೆ. ಅಕ್ಟೋಬರ್ 1ರಂದು ಆಯುಧ ಪೂಜೆ ರಜೆ, ಅಕ್ಟೋಬರ್ 2ರಂದು ಗಾಂಧಿ ಜಯಂತಿ ಹಾಗೂ ವಿಜಯದಶಮಿ ರಜೆ ಅಕ್ಟೋಬರ್ 3ರಂದು ತೆಲಂಗಾಣದಲ್ಲಿ ರಜೆ ಇರಲಿದೆ. ಹೀಗೆ ಸಾಲು ಸಾಲು ರಜೆಗಳಿರುವ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಲೆಕ್ಕಾಚಾರ ನಡೀತಿದೆ.

ಅಕ್ಟೋಬರ್ 2ರಂದು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ ಚಾಪ್ಟರ್-1' ಹಾಗೂ ಧನುಷ್ ನಿರ್ದೇಶಿಸಿ ನಟಿಸುತ್ತಿರುವ 'ಇಡ್ಲಿ ಕಡೈ' ಚಿತ್ರಗಳು ಬಿಡುಗಡೆ ಆಗುತ್ತಿವೆ. ಅದಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ 'OG' ಪವರ್ ಸ್ಟಾರ್ ದರ್ಬಾರ್ ಶುರುವಾಗುತ್ತದೆ. ಇಮ್ರಾನ್ ಹಶ್ಮಿ, ಪ್ರಿಯಾಂಕ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

More from Filmibeat

English summary
Makers have locked the release date For Pawan Kalyan starrer OG
Read more about: jaggesh sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X