"ಪವನ್ ನನ್ನ ಬಿಟ್ಟು ಬೇರೆ ಮದ್ವೆ ಆಗಿದ್ದು ನಾನಲ್ಲ, ನನಗೆ ಹಿಂಸೆ ಕೊಡಬೇಡಿ": ರೇಣು ದೇಸಾಯಿ ಅಳಲು
ಆಂಧ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಚಂದ್ರಬಾಬು ನಾಯ್ಡು ಮತ್ತೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತೆಲುಗು ನಟ ಪವನ್ ಕಲ್ಯಾಣ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದು ಮೆಗಾ ಫ್ಯಾಮಿಲಿ ಫ್ಯಾನ್ಸ್, ಪವರ್ ಸ್ಟಾರ್ ಫ್ಯಾನ್ಸ್ ಸಂಭ್ರಮ ಡಬಲ್ ಮಾಡಿದೆ.
ಚಿರು ಮನೆಯಲ್ಲಿ ಸೆಲೆಬ್ರೇಷನ್ ಜೋರಾಗಿತ್ತು. ಇನ್ನು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕೂಡ ಸಂಭ್ರಮ ಮುಗಿಲು ಮುಟ್ಟಿತ್ತು. ಇತ್ತೀಚೆಗೆ ಅತ್ತಿಗೆ ಸುರೇಖ ಪೆನ್ ಉಡುಗೊರೆ ನೀಡಿ ಪವನ್ ಹೊಸ ಜವಾಬ್ದಾರಿಗೆ ಶುಭ ಕೋರಿದ್ದಾರೆ. ಇನ್ನು ಪವನ್ - ರೇಣು ದೇಸಾಯಿ ಮಕ್ಕಳು ಕೂಡ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಫೋಟೊಗಳು ವೈರಲ್ ಆಗಿತ್ತು. ಇದನ್ನು ಹಂಚಿಕೊಂಡು ರೇಣು ದೇಸಾಯಿ ಕೂಡ ಸಂಭ್ರಮಿಸಿದ್ದರು.

ಮೊದಲಿನಿಂದಲೂ ಬಿಜೆಪಿ, ಪ್ರಧಾನಿ ಮೋದಿ ಅಭಿಮಾನಿ ಆಗಿರುವವ ರೇಣು ದೇಸಾಯಿ ತಮ್ಮ ಮಕ್ಕಳು ಪ್ರಧಾನಿ ಮೋದಿ ಭೇಟಿ ಮಾಡಿದ್ದಕ್ಕೆ ಖುಷಿಪಟ್ಟಿದ್ದರು. ಇನ್ನು ಪವನ್ ಕಲ್ಯಾಣ್ ಗೆಲುವಿನ ಬಗ್ಗೆಯೂ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಪ್ರಸ್ತಾಪಿಸಿದ್ದರು. 2009ರಲ್ಲಿ ರೇಣು ದೇಸಾಯಿಯನ್ನು ಪ್ರೀತಿಸಿ ಪವನ್ ಕಲ್ಯಾನ್ ಮದುವೆ ಆಗಿದ್ದರು. 2012ರಲ್ಲಿ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು. ಬಳಿಕ ದರ್ಶನ್ ರಷ್ಯಾ ಮೂಲದ ಅನ್ನಾ ಲೆಜ್ನೆವಾ ಕೈ ಹಿಡಿದರು.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ರೇಣು ದೇಸಾಯಿ ಸಖತ್ ಆಕ್ಟೀವ್ ಆಗಿದ್ದಾರೆ. ಆದರೆ ಪದೇ ಪದೆ ಪವನ್ ಫ್ಯಾನ್ಸ್ ಕಾಮೆಂಟ್ ಮಾಡಿ ಆಕೆಯನ್ನು ಮೂದಲಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಅಂತಹವರಿಗೆ ಆಕೆ ಖಡಕ್ ಆಗಿಯೇ ತಿರುಗೇಟು ನೀಡುತ್ತಾ ಬರುತ್ತಿದ್ದಾರೆ. ಚುನಾವಣೆಯಲ್ಲಿ ಪವನ್ ಗೆದ್ದು ಡಿಸಿಎಂ ಆಗಿ ಆಯ್ಕೆ ಆದ ಬಳಿಕ ಕೂಡ ಅದು ಮುಂದುವರೆದಿದೆ. ಮತ್ತೊಮ್ಮೆ ಪವನ್ ಫ್ಯಾನ್ಸ್ ವಿರುದ್ಧ ರೇಣು ಕೆಂಡಾಮಂಡಲವಾಗಿದ್ದಾರೆ.
ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ "ಅತ್ತಿಗೆ, ನೀವು ಸ್ವಲ್ಪ ವರ್ಷ ತಾಳ್ಮೆಯಿಂದ ಇದ್ದಿದ್ದರೆ ಚೆನ್ನಾಗಿತ್ತು.. ನೀನು ದೇವರನ್ನು ಮದುವೆಯಾಗಿ ಆತನ ಅಂತರಂಗವನ್ನು ಅರಿಯದೆ ಹೊರಟು ಹೋದೆ.. ಆದರೆ ಇಂದು ನಿನಗೆ ಅವನ ಬೆಲೆ ಗೊತ್ತಾಗಿದೆ.. ವಿಧಿ ಎಲ್ಲವರನ್ನು ನಿರ್ಣಯಿಸುತ್ತದೆ. ಇಂದು ಮಕ್ಕಳು ಅಣ್ಣನ ಜೊತೆಗಿದ್ದಾರೆ ಅಷ್ಟು ಸಾಕು .. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಲುತ್ತಿದ್ದೇವೆ" ಎಂದು ಬರೆದಿದ್ದಾರೆ.

ಈ ಕಾಮೆಂಟ್ ನೋಡಿ ರೇಣು ದೇಸಾಯಿ ರಿಪ್ಲೇ ಮಾಡಿದ್ದಾರೆ. "ನಿಮಗೆ ಸ್ವಲ್ಪ ಬುದ್ದಿ ಇದ್ದಿದ್ದರೆ ಹೀಗೆ ಹೇಳುತ್ತಿರಲಿಲ್ಲ.. ಆತ ನನ್ನನ್ನು ಬಿಟ್ಟು ಬೇರೆ ಮತ್ತೆ ಮದುವೆಯಾಗಿದ್ದು.. ನಾನಲ್ಲ.. ದಯವಿಟ್ಟು ಇಂತಹ ಕಾಮೆಂಟ್‌ಗಳಿಂದ ನನ್ನನ್ನು ಹಿಂಸಿಸಬೇಡಿ" ಎಂದು ಕೈ ಮುಗಿದಿದ್ದಾರೆ. ಇತ್ತೀಚೆಗೆ ರೇಣು ದೇಸಾಯಿ ಪೂಜೆ ಮಾಡಿದ್ದ ಪೋಸ್ಟ್ ಮಾಡಿದ್ದರು. ಅದಕ್ಕೆ ನೆಟ್ಟಿಗರೊಬ್ರು "ಸೂಪರ್ ಮಾಮ್ ನೀವು ಅಣ್ಣ ಇಲ್ಲದಿದ್ದರೂ? ಚೆನ್ನಾಗಿ ಪೂಜೆ ಪುನಸ್ಕಾರ ಮಾಡುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಕಾಮೆಂಟ್ ನೋಡಿ ಗರಂ ಆಗಿರುವ ರೇಣು ದೇಸಾಯಿ "ಅಣ್ಣ ಇಲ್ಲದಿದ್ದರೂ ಅಂದ್ರೆ ಏನರ್ಥ?.. ನನಗೆ ಸ್ವಂತ ಜೀವನ ಇಲ್ಲವೇ?.. ಈ ರೀತಿ ಕಾಮೆಂಟ್ ಮಾಡುವ ಮೂಲಕ ನನಗೆ ನೋವುಂಟು ಮಾಡುತ್ತಿದ್ದೀರಿ" ಎಂದು ರೇಣು ದೇಸಾಯಿ ಅಳಲು ತೋಡಿಕೊಂಡಿದ್ದಾರೆ. ಪವನ್- ರೇಣು 'ಬದ್ರಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಶುರುವಾಗ ಪರಿಚಯ, ಸ್ನೇಹ ಪ್ರೀತಿಗೆ ತಿರುಗಿ ಸಹಜೀವನದ ನಡೆಸುವ ಮಟ್ಟಿಗೆ ಹೋಗಿತ್ತು.


Click it and Unblock the Notifications











