"ಇದಕ್ಕೆ ನಿನ್ನ ಪವನ್ ಕಲ್ಯಾಣ್ ಒದ್ದು ಓಡಿಸಿದ್ದು": ಈ ಕಾಮೆಂಟ್‌ಗೆ ರೇಣು ಬೇಸರ

ಟಾಲಿವುಡ್ ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್‌ ಇಬ್ಬರಿಗೆ ಡಿವೋರ್ಸ್ ನೀಡಿ 3ನೇ ಮದುವೆ ಆಗಿರುವುದು ಗೊತ್ತೇಯಿದೆ. ಸಹನಟಿ ರೇಣು ದೇಸಾಯಿನ ಪ್ರೀತಿಸಿ ಪವನ್ ಕಲ್ಯಾಣ್ ಮದುವೆ ಆಗಿದ್ದರು. ಇಬ್ಬರು ಮಕ್ಕಳು ಹುಟ್ಟಿದ್ದರು. ಆದರೆ ಮದುವೆಯಾದ 3 ವರ್ಷಕ್ಕೆ ದೂರಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಪತಿಯ ಬಗ್ಗೆ ರೇಣು ಕಾಮೆಂಟ್ ಮಾಡುತ್ತಿರುತ್ತಾರೆ.

ರೇಣು ದೇಸಾಯಿ ಈ ಹಿಂದೆ ಮಾಜಿ ಪತಿ ಪವನ್ ಕಲ್ಯಾಣ್ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಇದೇ ಕಾರಣಕ್ಕೆ ಪವನ್ ಫ್ಯಾನ್ಸ್‌ ಆಕೆಯನ್ನು ಟ್ರೋಲ್ ಮಾಡಿದ್ದರು. ಕೆಟ್ಟ ಕೆಟ್ಟ ಪದಗಳಿಂದ ನಿಂದಿಸುತ್ತಿದ್ದರು. "ಇದಕ್ಕೆ ನಿನ್ನ ಪವನ್ ಕಲ್ಯಾಣ್ ಒದ್ದು ಓಡಿಸಿದ್ದು" ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು ಇದಕ್ಕೆ ಆಕೆ ಬೇಸರಗೊಂಡಿದ್ದಾರೆ. ನಾನು ಪವನ್ ಪರ ಮಾತನಾಡಿದರೂ ಕೆಲವರು ಕೆಟ್ಟದಾಗಿ ನಿಂದಿಸುತ್ತಾರೆ. ಪವನ್ ವಿರುದ್ಧ ಮಾತನಾಡಿದರೂ ಜರಿಯುತ್ತಾರೆ. ಆದರೆ ನಾನು ಎರಡೂ ಬಾರಿ ಸತ್ಯವನ್ನೇ ಮಾತನಾಡಿದ್ದೇನೆ ಎಂದಿದ್ದಾರೆ.

Renu-Desai-about-her-divorce-pawan-kalyan

ರೇಣು ದೇಸಾಯಿ ಮಾಡುವ ಕಾಮೆಂಟ್‌ಗಳ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದೆ "ಪವನ್ ಕಲ್ಯಾಣ್‌ ನನಗೆ ಮೋಸ ಮಾಡಿದ್ದಾರೆ ಎನ್ನುತ್ತಲೇ ಆತನಿಗೆ ಹಣದ ಬಗ್ಗೆ ಆಸಕ್ತಿ ಇಲ್ಲ, ಹಣ ಬೇಕಾಗಿಲ್ಲ, ಸಮಾಜದ ಬಗ್ಗೆ ಬಹಳ ಜವಾಬದ್ದಾರಿ ಇರುವ ವ್ಯಕ್ತಿ. ಆತನಿಗೆ ಒಂದು ಅವಕಾಶ ಕೊಡಿ" ಎಂದು ವಿಡಿಯೋ ಶೇರ್ ಮಾಡಿದ್ದರು. ಆ ವಿಡಿಯೋ ಹಲವರ ಅಚ್ಚರಿಗೆ ಕಾರಣವಾಗಿತ್ತು. ಏಕಾಏಕಿ ಪವನ್ ಕಲ್ಯಾಣ್ ಅಭಿಮಾನಿಗಳು ಮತ್ತು ಜನ ಸೈನಿಕರು ರೇಣು ದೇಸಾಯಿ ಅವರನ್ನು ಕೊಂಡಾಡಿದ್ದರು. ಆದರೆ ಬೇರೆ ನಟರ ಅಭಿಮಾನಿಗಳು ಮತ್ತು ಬೇರೆ ಪಕ್ಷಗಳ ಅನುಯಾಯಿಗಳು ಮಾತ್ರ ರೇಣು ದೇಸಾಯಿ ಅವರನ್ನು ಟ್ರೋಲ್ ಮಾಡಿದ್ದರು.

ಇದೀಗ ಇದ್ದಕ್ಕಿದಂತೆ ನೆಟ್ಟಿಗನೊಬ್ಬ ಮಾಡಿರುವ ಕಾಮೆಂಟ್ ಬಗ್ಗೆ ರೇಣು ದೇಸಾಯಿ ಬೇಸರ ವ್ಯಕ್ತಪಡಿಸಿದ್ದಾರೆ. "ನನಗೆ ಬೈದಿದ್ದಕ್ಕೆ ನಿನಗೆ ಮನಃಶಾಂತಿ ಸಿಕ್ತಾ? ಇಲ್ಲದಿದ್ದರೆ ಮತ್ತಷ್ಟು ಬೈದುಬಿಡು. ನನ್ನ ಮಾಜಿ ಪತಿ ಅಭಿಮಾನಿಗಳು ಮತ್ತು ಆತನ ವಿರೋಧಿಗಳಿಂದ ಬೈಯಿಕೊಳ್ಳುವುದಕ್ಕೆ ನನ್ನ ಬದುಕು ಇರುವುದು. ಮುಂದುವರೆಸಿ ಎಂದು ರೇಣು ರಿಪ್ಲೇ ಮಾಡದ್ದಾರೆ.

"ನನ್ನ ವಿಚ್ಛೇದನದ ವಿಚಾರದಲ್ಲಿ ಏನಾಯ್ತು ಅಂತ ಸತ್ಯ ಹೇಳಿದರೆ, ಆಗ ನನ್ನ ಮಾಜಿ ಗಂಡನ ಅಭಿಮಾನಿಗಳು ಬೈಯ್ದರು.. ಈ ದೇಶದ ಪ್ರಜೆಯಾಗಿ ಪವನ್‌ ಕಲ್ಯಾಣ್‌ನ ಬೆಂಬಲಿಸಿ ಮಾತನಾಡಿದರೆ, ಆತನನ್ನು ವಿರೋಧಿಸುವವರು ಬೈಯ್ಯುತ್ತಿದ್ದಾರೆ. ಮೊದಲು ನಾನು ಬೇರೆ ಪಕ್ಷದವರ ಬಳಿ ಹಣ ಪಡೆದು ಪವನ್‌ನ ಟೀಕೆಸಿದೆ ಎಂದರು. ಈಗ ನನ್ನ ಮಾಜಿ ಪತಿಯ ಬಳಿಯೇ ಹಣ ಪಡೆದು ಮಾತನಾಡುತ್ತಿದ್ದೇನೆ ಎನ್ನುತ್ತಿದ್ದಾರೆ. ಒಂದಂತು ನಿಜ ನಾನು ಆಗ ಈಗ ಯಾವಾಗಳು ಸತ್ಯವನ್ನೇ ಮಾತನಾಡಿದ್ದೇನೆ.ನಿಜ ಹೇಳಿದ್ದಕ್ಕೆ ನಿಜವಾಗಿ ಪ್ರೀತಿಸಿದ್ದಕ್ಕೆ ನನಗೆ ತಕ್ಕ ಶಾಸ್ತಿ ಇದು ಅನ್ನಿಸುತ್ತಿದೆ. ಇದೇ ನನ್ನ ಹಣೆಬರಹ. ಮುಂದುವರೆಸಿ, ಬೈಯ್ಯಲು ಶುರುಮಾಡಿ ಎಂದು ಅಲವತ್ತುಕೊಂಡಿದ್ದಾರೆ.

'ಬದ್ರಿ' ಸಿನಿಮಾ ಚಿತ್ರೀಕರಣದ ವೇಳೆ ಪವನ್ ಕಲ್ಯಾಣ್- ರೇಣು ದೇಸಾಯಿ ಪರಿಚಯವಾಗಿತ್ತು. ಬಳಿಕ ಅದು ಪ್ರೀತಿಗೆ ತಿರುಗಿ ಇಬ್ಬರು ಸಹಜೀವನ ನಡೆಸಿದರು. ಈ ಸಮಯದಲ್ಲೇ ಜೋಡಿಗೆ ಮಗ ಅಕಿರಾ ಹುಟ್ಟಿದ್ದ. ಬಳಿಕ ಪವನ್ ಮೊದಲ ಪತ್ನಿ ನಂದಿನಿ ಕೋರ್ಟ್ ಮೆಟ್ಟಿಲೇರಿದ್ದರು. ನನಗೆ ಡಿವೋರ್ಸ್ ಕೊಡದೇ ಪವನ್ ಮತ್ತೊಂದು ಮದುವೆ ಆಗಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ 5 ಕೋಟಿ ಜೀವನಾಂಶ ನೀಡಿ ಪವನ್ ಮೊದಲ ಪತ್ನಿಗೆ ಡಿವೋರ್ಸ್ ನೀಡಿ ರೇಣು ದೇಸಾಯಿ ಕೈಹಿಡಿದಿದ್ದರು.

More from Filmibeat

English summary
Renu Desai sensational comments on pawan kalyan and divorce.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X