For Quick Alerts
  ALLOW NOTIFICATIONS  
  For Daily Alerts

  ಅಚ್ಚರಿ ಸುದ್ದಿ...ಪವನ್ ಕಲ್ಯಾಣ್ ಚಿತ್ರದಲ್ಲಿ ಮಾಜಿ ಪತ್ನಿ ನಟನೆ!

  |

  ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯಕ್ಕೆ ಹೋದ ಮೇಲೆ ಯಾವುದೇ ಸಿನಿಮಾ ಮಾಡಿಲ್ಲ. ಇದೀಗ, ಪವನ್ ಕಂಬ್ಯಾಕ್ ಗಾಗಿ ದಿನಗಣನೆ ಶುರುವಾಗಿದೆ.

  ಹಿಂದಿಯಲ್ಲಿ ಅಮಿತಾಭ್ ಮತ್ತು ತಾಪ್ಸಿ ಪನ್ನು ಮಾಡಿದ್ದ ಪಿಂಕ್ ಚಿತ್ರವನ್ನು ತೆಲುಗಿನಲ್ಲಿ ರೀಮೇಕ್ ಮಾಡಲಾಗ್ತಿದ್ದು, ಈ ಚಿತ್ರದ ಮೂಲಕ ಪವನ್ ಕಲ್ಯಾಣ್ ಬೆಳ್ಳಿತೆರೆಗೆ ಹಿಂತಿರುಗುತ್ತಿದ್ದಾರೆ. ಇದಕ್ಕಾಗಿ ದೊಡ್ಡ ಸಂಭಾವನೆ ಪಡೆದಿದ್ದು ಭಾರಿ ನಿರೀಕ್ಷೆ ಮೂಡಿಸಿದೆ.

  '2ನೇ ಮದುವೆ ಆದ್ರೆ ಸಾಯಿಸ್ತೀವಿ' ಎಂದು ನಟಿ ರೇಣುಗೆ ಪಿ.ಕೆ ಫ್ಯಾನ್ಸ್ ಬೆದರಿಕೆ'2ನೇ ಮದುವೆ ಆದ್ರೆ ಸಾಯಿಸ್ತೀವಿ' ಎಂದು ನಟಿ ರೇಣುಗೆ ಪಿ.ಕೆ ಫ್ಯಾನ್ಸ್ ಬೆದರಿಕೆ

  ಇದೀಗ, ಪವನ್ ಕಲ್ಯಾಣ್ ನಟಿಸಲಿರುವ ಈ ಚಿತ್ರದಲ್ಲಿ ಅವರ ಮಾಜಿ ಪತ್ನಿ ರೇಣು ದೇಸಾಯಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಅಚ್ಚರಿ ಮೂಡಿಸಿದೆ. ಮುಂದೆ ಓದಿ....

  ಪಿಂಕ್ ಚಿತ್ರದಲ್ಲಿ ರೇಣು ದೇಸಾಯಿ!

  ಪಿಂಕ್ ಚಿತ್ರದಲ್ಲಿ ರೇಣು ದೇಸಾಯಿ!

  ಹಿಂದಿ ರೀಮೇಕ್ ಅನುಕರಣೆ ಮಾಡುವುದಕ್ಕಿಂತ ತಮಿಳಿನಲ್ಲಿ ಅಜಿತ್ ಮಾಡಿದ ಚಿತ್ರವನ್ನು ರೀಮೇಕ್ ಮಾಡಲು ನಿರ್ಧರಿಸಿದ್ದಾರಂತೆ. ವಿದ್ಯಾ ಬಾಲನ್ ಮಾಡಿದ್ದ ಪಾತ್ರವನ್ನು ರೇಣು ದೇಸಾಯಿ ಅವರಿಂದ ಮಾಡಿಸಲು ಚಿತ್ರತಂಡ ನಿರ್ಧರಿಸಿದೆ ಎಂಬ ಮಾತು ಟಾಲಿವುಡ್ನಲ್ಲಿ ಸದ್ದು ಮಾಡ್ತಿದೆ. ಒಂದು ಮಗುವಿನ ತಾಯಿ ಪಾತ್ರ ಇದಾಗಿದೆಯಂತೆ.

  ಜಾಸ್ತಿ ಮಾತಾಡಿದ್ರೆ ಪವನ್ ಕಲ್ಯಾಣ್ ಡಿವೋರ್ಸ್ ವಿಷ್ಯ ಬಿಚ್ಚಿಡಬೇಕಾಗುತ್ತೆ.!ಜಾಸ್ತಿ ಮಾತಾಡಿದ್ರೆ ಪವನ್ ಕಲ್ಯಾಣ್ ಡಿವೋರ್ಸ್ ವಿಷ್ಯ ಬಿಚ್ಚಿಡಬೇಕಾಗುತ್ತೆ.!

  ದಿಲ್ ರಾಜು ಹರಸಾಹಸ

  ದಿಲ್ ರಾಜು ಹರಸಾಹಸ

  ಶ್ರೀದೇವಿ ಪತಿ ಬೋನಿ ಕಪೂರ್ ಮತ್ತು ದಿಲ್ ರಾಜು ಈ ಚಿತ್ರ ನಿರ್ಮಿಸುತ್ತಿದ್ದು, ರೇಣು ದೇಸಾಯಿ ಅವರನ್ನು ಕರೆತರಲು ನಿರ್ಮಾಪಕರು ಹಠಕ್ಕೆ ಬಿದ್ದಿದ್ದಾರಂತೆ. ಈಗಾಗಲೇ ರೇಣುಗೆ ತಮ್ಮ ಪಾತ್ರ ಮತ್ತು ಕಥೆ ವಿವರಿಸಿದ್ದಾರೆ ಎನ್ನಲಾಗಿದೆ.

  ಡಿವೋರ್ಸ್ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಪವನ್ ಕಲ್ಯಾಣ್ ಮಾಜಿ ಪತ್ನಿಡಿವೋರ್ಸ್ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಪವನ್ ಕಲ್ಯಾಣ್ ಮಾಜಿ ಪತ್ನಿ

  ಪವನ್ ಕಲ್ಯಾಣ್ ಒಪ್ಪುತ್ತಾರಾ?

  ಪವನ್ ಕಲ್ಯಾಣ್ ಒಪ್ಪುತ್ತಾರಾ?

  ವಿಚ್ಛೇದನದ ಬಳಿಕ ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ಒಟ್ಟಿಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಪವನ್ ಕೂಡ ಬೇರೆ ಮದುವೆ ಆದರು. ರೇಣು ದೇಸಾಯಿ ಕೂಡ ಇನ್ನೊಂದು ವಿವಾಹವಾಗಿದ್ದಾರೆ. ರೇಣು ದೇಸಾಯಿ ಮರುವಿವಾಹ ಆಗಿದ್ದಕ್ಕೆ ಪವನ್ ಕಲ್ಯಾಣ್ ಅಭಿಮಾನಿಗಳು ಆಕೆಯ ವಿರುದ್ಧ ತಿರುಗಿಬಿದ್ದಿದ್ದರು. ನಿಂದಿಸಿದ್ದರು, ಟ್ರೋಲ್ ಮಾಡಿದರು, ಪ್ರಾಣ ಬೆದರಿಕೆಯೂ ಹಾಕಿದ್ದರು. ರೇಣು ಕೂಡ ಪವನ್ ಕಲ್ಯಾಣ್ ಕುರಿತು ಎಚ್ಚರಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ಈ ಚಿತ್ರದಲ್ಲಿ ರೇಣು ನಟಿಸುತ್ತಾರಾ ಅಥವಾ ಪವನ್ ಒಪ್ಪುತ್ತಾರಾ? ಎನ್ನುವುದು ಕುತೂಹಲ.

  ಪವನ್ ಕಲ್ಯಾಣ್ ಮಾಜಿ ಪತ್ನಿಗೆ ಎರಡನೇ ಮದುವೆ.! ಫೋಟೋ ವೈರಲ್ಪವನ್ ಕಲ್ಯಾಣ್ ಮಾಜಿ ಪತ್ನಿಗೆ ಎರಡನೇ ಮದುವೆ.! ಫೋಟೋ ವೈರಲ್

  ಎರಡನೇ ಪತ್ನಿ ರೇಣು ದೇಸಾಯಿ

  ಎರಡನೇ ಪತ್ನಿ ರೇಣು ದೇಸಾಯಿ

  ಪವನ್ ಲ್ಯಾಣ್ 1997ರಲ್ಲಿ ನಂದಿನಿ ಎಂಬುವರ ಜೊತೆ ಮೊದಲ ಬಾರಿಗೆ ಸಪ್ತಪದಿ ತುಳಿದಿದ್ದರು. ಆದ್ರೆ, ಎರಡು ವರ್ಷಗಳ ದಾಂಪತ್ಯದ ನಂತರ ನಂದಿನಿಯಿಂದ ವಿಚ್ಛೇದನ ಪಡೆದರು. ನಂತರ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನ ವಿವಾಹವಾದರು. ಆಮೇಲೆ 2012 ಇವರಿಂದಲೂ ಡಿವೋರ್ಸ್ ಪಡೆದುಕೊಂಡ ಪವನ್, 2013ರಲ್ಲಿ ವಿದೇಶಿ ಮಹಿಳೆ ಅನ್ನಾ ಲೆಜ್ನೆವಾ ಅವರೊಂದಿಗೆ ಮೂರನೇ ವಿವಾಹವಾದರು.

  English summary
  Telugu actor Pawan Kalyan ex wife Renu Desai playing key role in telugu pink remake movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X