"ನಾನು ಪವನ್ ಪತ್ನಿ ಅಲ್ಲ.. ಈ 55 ವರ್ಷದಲ್ಲಿ ಆತ ಎಷ್ಟು ಕೊಟ್ಟಿದ್ದಾನೆ?": ರೇಣು ದೇಸಾಯಿ
ತೆಲುಗು ನಟ, ರಾಜಕೀಯ ಮುಖಂಡ ಪವನ್ ಕಲ್ಯಾಣ್ ಇತ್ತ ಸಿನಿಮಾ ಹಾಗೂ ಅತ್ತ ರಾಜಕೀಯ ಎರಡದಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನಡೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಜನಸೇನಾನಿ ಕಣಕ್ಕಿಳಿದಿದ್ದರು.
ನಟ ಪವನ್ ಕಲ್ಯಾಣ್ ಒಂದಲ್ಲ, ಎರಡಲ್ಲ 3 ಮದುವೆ ಆಗಿದ್ದಾರೆ. ಇಬ್ಬರಿಗೆ ಡಿವೋರ್ಸ್ ನೀಡಿ ವಿದೇಶಿ ಮೂಲದ ಅನ್ನಾ ಲೆಜ್ನೆವಾ ಕೈ ಹಿಡಿದಿದ್ದಾರೆ. ಇನ್ನು ಪವನ್ ಕಲ್ಯಾಣ್ ನಟಿ ರೇಣು ದೇಸಾಯಿ ಅವರನ್ನು ಪ್ರೀತಿಸಿ ಎರಡನೇ ಮದುವೆ ಆಗಿದ್ದರು. ಇಬ್ಬರು ಮಕ್ಕಳು ಇದ್ದಾರೆ. ಡಿವೋರ್ಸ್ ಬಳಿಕ ರೇಣು ದೇಸಾಯಿ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇನ್ನು ಪವನ್ ಫ್ಯಾನ್ಸ್ ಆಕೆಯನ್ನು ಕೆಣಕುವುದು, ಆಕೆ ತಿರುಗೇಟು ನೀಡುವುದು ನಡೆಯುತ್ತಲೇ ಇದೆ.

ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಪವನ್ ಫ್ಯಾನ್ಸ್ ತಮ್ಮ ಬಗ್ಗೆ ಮಾಡಿರುವ ಕಾಮೆಂಟ್‌ಗೆ ರೇಣು ದೇಸಾಯಿ ಕೆಂಡಾಮಂಡಲವಾಗಿದ್ದಾರೆ. ರೇಣು ದೇಸಾಯಿಗೆ ಪ್ರಾಣಿ-ಪಕ್ಷಿ ಕಾಳಜಿ ಕೂಡ ಹೆಚ್ಚು. ಇತ್ತೀಚೆಗೆ ಆಕೆ ಸಾಕು ಪ್ರಾಣಿಯೊಂದರ ಚಿಕಿತ್ಸೆ 3500 ರೂ. ದೇಣಿಗೆ ಕೇಳಿದ್ದರು. ಇದು ಕೆಲವರಿಗೆ ಅಚ್ಚರಿ ತಂದಿತ್ತು. ಇಷ್ಟು ಚಿಕ್ಕ ಮೊತ್ತ ಆಕೆ ಕೊಡಲು ಸಾಧ್ಯವಿಲ್ಲವೇ? ಅಥವಾ ಆಕೆಯ ಇನ್‌ಸ್ಟಾ ಅಕೌಂಟ್ ಹ್ಯಾಕ್ ಆಗಿದ್ಯಾ? ಎಂದು ಅನುಮಾನ ಮೂಡಿತ್ತು.
ವೀಡಿಯೋ ಶೇರ್ ಮಾಡಿ ರೇಣು ದೇಸಾಯಿ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದ್ದರು. ಆ ಪೋಸ್ಟ್ ಮಾಡಿದ್ದರು ನಾನೇ. ನಾನು ಪ್ರತಿ ತಿಂಗಳು ಒಂದಷ್ಟು ಮೊತ್ತವನ್ನು ಕೊಡುತ್ತೇನೆ. ಅದು ಸಾಕಾಗದಿದ್ದಾಗ ಕೇಳಿದೆ ಅಷ್ಟೆ ಎಂದಿದ್ದರು. ಎಲ್ಲಾ ಹಣ ಅದಕ್ಕೆ ಕೊಟ್ಟರೆ ನನಗೂ, ನನ್ನ ಮಕ್ಕಳಿಗೂ ತಿನ್ನೋಕೆ ಹಣ ಇರಲ್ಲ ಎಂದಿದ್ದರು. ಹೀಗೆ ರೇಣು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಆದರೆ ಈ ಕ್ರೆಡಿಟ್ ಅನ್ನು ಪವನ್ ಹೆಸರಿಗೆ ಹೋಗಬೇಕೆಂದು ಕೆಲ ಅಭಿಮಾನಿಗಳು ಆಗ್ರಹಿಸಿದ್ದರು.
ಆಕೆಯ ಪ್ರಾಣಿ ಪ್ರೀತಿಗೆ ಕೆಲವರು ಕಾಮೆಂಟ್ ಮಾಡಿ ಎಷ್ಟೇ ಆದ್ರೂ ಪವನ್ ಪತ್ನಿ ಅಲ್ಲವೇ? ಪವರ್ ಸ್ಟಾರ್ ಗೋಲ್ಡನ್ ಹಾರ್ಟ್ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಈ ಕಾಮೆಂಟ್‌ಗೆ ರೇಣು ಬೇಸರ ವ್ಯಕ್ತಪಡಿಸಿದ್ದಾರೆ. ಪವನ್ ಕಲ್ಯಾಣ್‌ಗೆ ಪ್ರಾಣಿಗಳ ಬಗ್ಗೆ ಅಷ್ಟೇನು ಕಾಳಜಿ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕೆಲವರು ಕಾಮೆಂಟ್ ಮಾಡಿ ನೀವು ಇನ್ನು ಪವನ್ ಮಕ್ಕಳ ತಾಯಿ, ನಿಮಗೆ ಒಂದಷ್ಟು ಜವಾಬ್ದಾರಿ ಇದೆ ಅಂತೆಲ್ಲಾ ಬರೆದಿದ್ದಾರೆ.

ಪವನ್ ಫ್ಯಾನ್ಸ್ ಕಾಮೆಂಟ್ಸ್ ನೋಡಿ ಗರಂ ಆಗಿರುವ ರೇಣು, ಎಲ್ಲರಿಗೂ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ. "ನಾನು ಆತನ ಪತ್ನಿಯಲ್ಲ.. ಆತನ ಜವಾಬ್ದಾರಿ ನನ್ನ ಮೇಲೆ ಯಾಕೆ ಇರಬೇಕು? ಆತ ನನ್ನಂತೆಯೇ ಪ್ರಾಣಿಗಳನ್ನು ಪ್ರೀತಿಸುತ್ತಾನೆಂದು ನಿಮಗೆ ಹೇಗೆ ಗೊತ್ತು? ಈ 55 ವರ್ಷಗಳಲ್ಲಿ ಅವರು ಪ್ರಾಣಿಗಳ ಯೋಗಕ್ಷೇಮಕ್ಕಾಗಿ ಏನು ಮಾಡಿದ್ದಾರೆ? ಕೊನೆ ಪಕ್ಷ ಅವರ ಮನೆಯಲ್ಲಿ ಒಂದು ಬೆಕ್,ಕು ನಾಯಿ ಇಲ್ಲ..ಹಾಗಾಗಿ ದಯವಿಟ್ಟು ನನಗೆ ಪಾಠ ಮಾಡುವುದು ಬಿಡಿ" ಎಂದಿದ್ದಾರೆ.
"ಪದೇ ಪದೆ ನನ್ನ ಬಗಗೆ ಯಾಕೆ ಕಾಮೆಂಟ್ ಮಾಡುತ್ತೀರಾ. ನನ್ನ ಬೈಯ್ಯವ ಕೆಲಸ ಮಾಡುತ್ತೀರಾ? ನಿಲ್ಸಿ, ನೀವೆಲ್ಲಾ ನೀವೆಲ್ಲ ಯಾವಾಗ ಬದಲಾಗುತ್ತೀರಾ? ನಿಮಗೆ ಯಾಕೆ ಇದೆಲ್ಲಾ ಯಾಕೆ ಅರ್ಥವಾಗುತ್ತಿಲ್ಲ" ಎಂದು ರೇಣು ದೇಸಾಯಿ ಬರೆದುಕೊಂಡಿದ್ದಾರೆ. 'ಬದ್ರಿ' ಸಿನಿಮಾ ಸಮಯದಲ್ಲಿ ಪವನ್- ರೇಣು ನಡುವೆ ಲವ್ವಾಗಿತ್ತು. ಬಳಿಕ ಪವನ್ ಮೊದಲ ಪತ್ನಿ ನಂದಿನಿ ವಿಚ್ಛೇದನ ನೀಡಿ ರೇಣು ಕೈಹಿಡಿದಿದ್ದರು. ಆದರೆ 2012ರಲ್ಲಿ ಇಬ್ಬರು ದೂರಾಗಿದ್ದರು.


Click it and Unblock the Notifications










