ಆರ್‌ಜಿವಿಗೆ ಇರುವ ರೋಗದಿಂದಲೇ ಅವರು ಹೀಗೆಲ್ಲಾ ವರ್ತಿಸುತ್ತಾರೆ: ಬಿವಿಎಸ್ ರವಿ
ರಾಮ್ ಗೋಪಾಲ್ ವರ್ಮಾ ಒಂದು ಸಮಯದಲ್ಲಿ ಭಾರತೀಯ ಸಿನಿಮಾ ರಂಗದಲ್ಲಿ ಇದೊಂದು ಸಂಚಲನ ಮೂಡಿಸುವ ಹೆಸರು. 'ಶಿವ' ಇಂದ ಮೊದಲುಗೊಂಡು 'ಗಾಯಂ', 'ರಂಗೀಲಾ' , 'ಸತ್ಯ' 'ಭೂತ್', 'ಸರ್ಕಾರ್' ಹೀಗೆ ಅನೇಕ ಚಿತ್ರಗಳ ಮೂಲಕ ರಾಮ್ ಗೋಪಾಲ್ ವರ್ಮಾ ದೇಶದ ಮೋಸ್ಟ್ ಟ್ಯಾಲೆಂಟೆಡ್ ಡೈರೆಕ್ಟರ್ ಆಗಿದ್ದವರು.
'ರಕ್ತ ಚರಿತ್ರ' ಸಿನಿಮಾ ನಿರ್ದೇಶನದ ಬಳಿಕ ಆರ್‌ಜಿವಿ ಒಂದು ಅರ್ಥದಲ್ಲಿ ಕಳೆದುಹೋಗಿದ್ದಾರೆ. ಸದಾ ವಿವಾದಗಳ ಸುತ್ತಲೂ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಂಡು ಸಿನೆಮಾಗಳನ್ನು ಮಾಡುತ್ತಿದ್ದಾರೆ. ಇದು ಹೊರತಾಗಿ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ಬೋಲ್ಡ್ ಕಾಮೆಂಟ್‌ಗಳ ಮೂಲಕ ಸುದ್ದಿ ಆಗುತ್ತಿರುತ್ತಾರೆ. ವರ್ಮಾ ಅವರ ಈ ಮಾತುಗಳು, ನಡೆ ಸಾರ್ವಜನಿಕವಾಗಿ ಅನೇಕಬಾರಿ ಟೀಕೆಗಳಿಗೆ ಒಳಗಾದರೂ ಕೂಡ ವರ್ಮಾ ಮಾತ್ರ ಇದಕ್ಕೆಲ್ಲಾ ಡೋಂಟ್ ಕೇರ್ ಅಂತಾರೆ.
ಆರ್‌ಜಿವಿ ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ವರ್ಮಾ ಅವರ ನಡತೆ, ಮಾತು ಎಲ್ಲರಲ್ಲೂ ಚರ್ಚೆಗೆ ಗ್ರಾಸವಾಗುತ್ತದೆ.ಈ ಹಿನ್ನೆಲೆಯಲ್ಲಿ ವರ್ಮಾ ಅವರ ಈ ವಿಲಕ್ಷಣವಾದ ಗುಣಗಳ ಬಗ್ಗೆ ಪ್ರತಿಕ್ರಿಯಿಸಿರುವ ವರ್ಮಾ ಅವರಿಗೆ ವೈಯಕ್ತಿಕವಾಗಿ ತೀರ ಹತ್ತಿರವಿರುವ ಖ್ಯಾತ ಬರಹಗಾರ, ಟಾಲಿವುಡ್ ನಿರ್ದೇಶಕ ಬಿವಿಎಸ್ ರವಿ "ರಾಮ್ ಗೋಪಾಲ್ ವರ್ಮಾ ಅವರು ತೆಲುಗು ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಆರಂಭಿಸಿದವರು. ಇಂತಹ ಕ್ರಿಯೇಟಿವ್ ಡೈರೆಕ್ಟರ್ ಈಗ ವಿವಾದಿತ ನಿರ್ದೇಶಕರಾಗಿ ಜನರ ಬಾಯಲ್ಲಿ ನಲುಗಿದ್ದಾರೆ. ಸದಾ ಯಾವುದೋ ಒಂದು ವಿಷಯದಲ್ಲಿ ಸುದ್ದಿಯಲ್ಲಿ ನಿಲ್ಲುತ್ತಾರೆ. ಅವರ ನಡೆ -ನುಡಿ ಸಾರ್ವಜನಿಕವಾಗಿ ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದರು, ವರ್ಮಾ ಅವರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಬೇಸಿಕಲಿ ಇರುವುದೇ ಹಾಗೆ. ವರ್ಮ ಅವರಂತೆ ಮುಕ್ತವಾಗಿ ಮಾತನಾಡುವ ಮಂದಿ ಸಿನಿಮಾರಂಗದಲ್ಲಿ ಸಿಗುವುದಿಲ್ಲ. ಹೆಣ್ಣು ಮಕ್ಕಳ ಕಾಲುಗಳ ಮೇಲೆ ಮೇಲೆ ಬಿದ್ದು ಹೊರಳಾಡುವುದು ಅವರ ವೈಯಕ್ತಿಕ ವಿಷಯಗಳಾಗಿದ್ದು, ಈ ಬಗ್ಗೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ" ಎಂದು ರವಿ ಹೇಳಿದ್ದಾರೆ.

'ಆದರೆ ಅವರಿಗೊಂದು ಖಾಯಿಲೆಯಿದೆ'
"ಆದರೆ, ಅವರಿಗೊಂದು ಖಾಯಿಲೆಯಿದ್ದು, ಅವರು ಸದಾ ಸುದ್ದಿಯಲ್ಲಿ ಇರಬೇಕು ಅಂತ ಬಯಸುವ ರೋಗ ಅದು. ಆದರೆ ತಮ್ಮ ಕ್ರಿಯೇಟಿವಿಟಿ ಮೂಲಕ ಅವರಲ್ಲಿ ಜನರನ್ನು ಸೆಳೆಯುವ ಸಾಮರ್ಥ್ಯ ಕಡಿಮೆಯಾಗಿದೆ. ಹೀಗಾಗಿ ತಾನು ಸುದ್ದಿಯಲ್ಲಿರಬೇಕು ಅಂತಲೇ ತಮ್ಮ ನಡೆ ನುಡಿಯ ಬಗ್ಗೆ ಸಾರ್ವಜನಿಕವಾಗಿ ಸುದ್ದಿಯಾಗಬೇಕು ಅಂತಲೇ ಹೀಗೆಲ್ಲ ಅವರು ವರ್ತಿಸುತ್ತಿರುತ್ತಾರೆ.ಅಲ್ಲದೆ ಅವರದು ತುಂಬಾ ಜೀನಿಯಸ್ ಮೈಂಡ್ ಸೆಟ್ ಎಂದು ರವಿ ಹೇಳಿದ್ದಾರೆ.

''ಟಿಕೆಟ್ ವಿಚಾರದಲ್ಲಿ ಅದ್ಭುತವಾಗಿ ಸ್ಪಂದಿಸಿದ್ದಾರೆ''
ಸಿನಿಮಾರಂಗ ವರ್ಸಸ್ ಆಂಧ್ರ ಸರ್ಕಾರದ ನಡುವೆ ಟಿಕೆಟ್ ಪ್ರೈಸ್ ವಿಚಾರದಲ್ಲಿ ನಡೆಯುತ್ತಿರುವ ತಿಕ್ಕಾಟದ ಬಗ್ಗೆ ಮಾತನಾಡುತ್ತಾ ರವಿ "ವರ್ಮಾ ಅವರ ಟಾಪ್ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸುವಲ್ಲಿ ಅವರು ಜವಾಬ್ದಾರಿಯುತ ಚಲನಚಿತ್ರ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ವರ್ಮಾ ಅವರಿಗೆ ಯಾವುದೇ ಪ್ರಯೋಜನವಿಲ್ಲದೆ ಇದ್ದರೂ ಸಹ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದಾರೆ ಮತ್ತು ಅದರ ಪರಿಷ್ಕಾರದಲ್ಲಿ ಕೂಡ ಭಾಗವಾಗಲು ಮುಂದಾಗಿದ್ದಾರೆ. ಇದು ನನಗೆ ತುಂಬಾ ಇಷ್ಟವಾಗಿದೆ" ಎಂದು ರವಿ ಹೇಳಿದರು.

ಹುಡುಗಿಯರ ಕಾಲಿಗೆ ಬೀಳುತ್ತೇನೆ ಎನ್ನುತ್ತಾರೆ ವರ್ಮಾ: ಬಿವಿಎಸ್ ರವಿ
''ವರ್ಮಾ ಅವರು ಮದ್ಯಪಾನ ಮಾಡುವುದಾಗಿ ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಹುಡುಗಿಯರ ಜೊತೆಯಲ್ಲಿ ಸಾರ್ವಜನಿಕವಾಗಿ ಅವರು ವರ್ತಿಸುವ ರೀತಿ, ಹುಡುಗಿಯರ ಕಾಲಿಗೆ ಬೀಳುತ್ತೇನೆ ಎಂದು ಘೋಷಿಸುವುದು ಹೀಗೆ ವರ್ಮಾ ಮಾಡುವುದರಿಂದಲೇ ಎಲ್ಲರೂ ವರ್ಮಾ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಹಾಗಾಗಿ ಅವರ ಬಗ್ಗೆ ಜನಜಂಗುಳಿಯಲ್ಲಿ ಚರ್ಚೆಗಳು ನಡೆಯುತ್ತಿವೆ" ಎಂದು ರವಿ ಅಭಿಪ್ರಾಯಪಡುತ್ತಾರೆ. ಇಂತಹ ನಡವಳಿಕೆ ವರ್ಮಾ ಅವರ ವೈಯಕ್ತಿಕ ಹಾಗಾಗಿ ಟೀಕೆ, ಮೆಚ್ಚುಗೆಗೆ ಒಳಗಾಗುವುದಿಲ್ಲ" ಎಂದು ಬಿವಿಎಸ್ ರವಿ ಹೇಳಿದ್ದಾರೆ.

ಮಣಿರತ್ನಂ ಸಿನಿಮಾಗಳು ನನಗೆ ಇಷ್ಟವಾಗುವುದಿಲ್ಲ: ವರ್ಮಾ
ರಾಮ್ ಗೋಪಾಲ್ ವರ್ಮಾ- ಮಣಿರತ್ನಂ ಒಂದು ಕಾಲದಲ್ಲಿ ಸೌತ್ ಸಿನಿಮಾ ಇಂಡಸ್ಟ್ರಿಯ ಎರಡು ಅತಿ ದೊಡ್ಡ ನಿರ್ದೇಶಕರು. ಆದರೆ ಪ್ರಸ್ತುತ ಇಬ್ಬರ ಚಿತ್ರಗಳು ಅಂತಹ ಹೇಳಿಕೊಳ್ಳುವ ಯಶಸ್ಸನ್ನು ಕಾಣುತ್ತಿಲ್ಲ. ಇತ್ತೀಚೆಗೆ ಮಣಿರತ್ನಂ ಚಿತ್ರಗಳ ಬಗ್ಗೆ ಪ್ರತಿಕ್ರಿಯಿಸಿರುವ ವರ್ಮಾ ಅವರು "ನನಗೆ ಮಣಿರತ್ನಂ ಚಿತ್ರಗಳೆಂದರೆ ಅಸಲಿಗೆ ಇಷ್ಟವಾಗುವುದಿಲ್ಲ. ಸಿಕ್ಕಾಪಟ್ಟೆ ಸ್ಲೋ ಮತ್ತು ಬೋರ್ ಹೊಡೆಯುತ್ತದೆ, ಆದರೆ ಒಂದಷ್ಟು ದೃಶ್ಯಗಳು ಮಾತ್ರ ತುಂಬಾ ಚೆನ್ನಾಗಿ ಚಿತ್ರೀಕರಿಸುತ್ತಾರೆ. ನನಗೆ ಅವರ ಚಿತ್ರದ ಒಂದಷ್ಟು ದೃಶ್ಯಗಳಾದರು ಇಷ್ಟವಾಗುತ್ತೆ ಅವರಿಗೆ ನನ್ನ ಚಿತ್ರದ ಒಂದೇ ಒಂದು ಶಾಟ್ ಕೂಡ ಇಷ್ಟವಾಗುವುದಿಲ್ಲ. ಅಸಲಿಗೆ ಅವರು ನನ್ನ ಚಿತ್ರಗಳನ್ನು ನೋಡಲು ಇಷ್ಟಪಡುವುದಿಲ್ಲ" ಎಂದು ವರ್ಮಾ ಒಮ್ಮೆ ಹೇಳಿದ್ದರು.


Click it and Unblock the Notifications











