ನನ್ನ ಬಾಡಿ ಶೇಪ್- ಕರ್ವ್ಸ್ ಸೀಕ್ರೆಟ್ ಏನಂದ್ರೆ? 'ಸ್ಯಾರಿ' ಸಿನಿಮಾ ನಟಿ ಕಾಮೆಂಟ್ಸ್ ವೈರಲ್

ಬಣ್ಣದ ಲೋಕದಲ್ಲಿ ಯಾರ ನಸೀಬು ಹೇಗೆ ಬದಲಾಗುತ್ತದೆ ಎಂದು ಹೇಳುವುದು ಕಷ್ಟ. ಶ್ರೀ ಲಕ್ಷ್ಮೀ ಸತೀಶ್ ಬಳಿಕ ಆರಾಧ್ಯ ದೇವಿ ಆಗಿದ್ದು ಗೊತ್ತೇಯಿದೆ. ಇನ್ಸ್ಟಾಗ್ರಾಮ್‌ನಲ್ಲಿ ಸೀರೆ ಉಟ್ಟು ರೀಲ್ ವಿಡಿಯೋ ಮಾಡುತ್ತಿದ್ದ ಶ್ರೀಲಕ್ಷ್ಮಿ ಸತೀಶ್ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕಣ್ಣಿಗೆ ಬಿದ್ದಿದ್ದರು. ಆಕೆ ನಾಯಕಿಯಾಗಿ 'ಸ್ಯಾರಿ' ಎನ್ನುವ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು.

ಆರ್‌ಜಿವಿ ಪೋಸ್ಟ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಫಾಲೋಯಿಂಗ್ ಹೆಚ್ಚಾಗಿತ್ತು. ಬಳಿಕ ಮತ್ತಷ್ಟು ಹಾಟ್ ಹಾಟ್ ಫೋಟೊಶೂಟ್‌ಗಳಲ್ಲಿ ಆರಾಧ್ಯ ದೇವಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆ ಕನ್ನ ಹಾಕಿದ್ದಾರೆ. ಇನ್ನು 'ಸ್ಯಾರಿ' ಚಿತ್ರಕ್ಕಾಗಿ ಆಕೆಯ ಹೆಸರನ್ನು ರಾಮ್‌ಗೋಪಾಲ್ ವರ್ಮಾ ಬದಲಿಸಿದ್ದಾರೆ. ಆಗಾಗ್ಗೆ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಚಾಟ್ ನಡೆಸುತ್ತಾರೆ.

RGV s Saree Movie Heroine Aaradhya Devi interesting comments on her beauty

ಇತ್ತೀಚೆಗೆ ಇನ್ಸ್ಟಾ ಚಾಟ್ ವೇಳೆ ಅಭಿಮಾನಿಗಳ ಜೊತೆ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ. ಬಾಡಿ ಶೇಮಿಂಗ್ ಎದುರಿಸಿದ್ದ ವಿಚಾರವನ್ನು ವಿವರಿಸಿದ್ದಾರೆ. ಅಭಿಮಾನಿಗಳು ಆಕೆಯ ಕಣ್ಣು, ತುಟಿ, ಸೊಂಟ ಮತ್ತು ವಯಸ್ಸಿನ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆಲ್ಲಾ ರಿಪ್ಲೇ ಮಾಡಿ ಆಕೆ ಇನ್‌ಸ್ಟಾ ಸ್ಟೋರಿಯಲ್ಲಿ ಸ್ಕ್ರೀನ್‌ಶಾಟ್ ಶೇರ್ ಮಾಡಿದ್ದಾರೆ.

ನಿಮ್ಮ ವಯಸ್ಸು ಎಷ್ಟು? ಎಂದು ಅಭಿಮಾನಿಯೊಬ್ಬ ಕೇಳಿದ್ದಕ್ಕೆ 22 ವರ್ಷ ಎಂದಿದ್ದಾರೆ. ಆದರೆ ಬಹುತೇಕರು ಇದನ್ನು ನಂಬಲಿಲ್ಲ. ಇನ್ನು ಸದ್ಯ ಹೈದರಾಬಾದಿನಲ್ಲಿ 'ಸ್ಯಾರಿ' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿರುವುದಾಗಿ ಹೇಳಿದ್ದಾರೆ. ಎತ್ತರದ ಬಗ್ಗೆ ಪ್ರಶ್ನೆಗೆ 5 ಅಡಿ 8 ಇಂಚು ಎಂದಿದ್ದಾರೆ.

RGV s Saree Movie Heroine Aaradhya Devi interesting comments on her beauty

ಕೆಲವರು "ನಿಮ್ಮ ಶೇಪ್ ಮತ್ತು ಕರ್ವ್ಸ್ ಬಹಳ ಚೆನ್ನಾಗಿದೆ. ಅದೇ ನಿಮ್ಮ ನಿಜವಾದ ಸೌಂದರ್ಯ ಎಂದು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಆದರೆ ಆ ಶೇಪ್ ಹಾಗೂ ಕರ್ವ್ಸ್ ಅಷ್ಟು ಸುಲಭವಾಗಿ ಬರಲಿಲ್ಲ. ಅದಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದೇನೆ. ಬಹಳ ವರ್ಕೌಟ್ ಮಾಡಿದೆ. ಅದೆಲ್ಲದರ ಪ್ರತಿಫಲವಾಗಿ ಈ ರೀತಿ ಕಾಣಿಸುತ್ತೇನೆ ಎಂದು ಆರಾಧ್ಯ ದೇವಿ ವಿವರಿಸಿದ್ದಾರೆ.

ಒಂದ್ಕಾಲದಲ್ಲಿ ತನ್ನ ಮೇಲೆ ಬಾಡಿ ಶೇಮಿಂಗ್ ಕಾಮೆಂಟ್‌ಗಳು ಬಂದವು. ನಾನು ಕೂಡ ಟ್ರೋಲ್‌ಗೆ ಗುರಿಯಾಗಿದ್ದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಇನ್ನು ತುಂಡು ಬಟ್ಟೆಗಿಂತ ನೀವು ಸೀರೆಯಲ್ಲಿ ಸುಂದರವಾಗಿ ಕಾಣುತ್ತೀರಾ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾನೆ. ನನಗೆ ಶ್ರೀದೇವಿ ಎಂದರೆ ಬಹಳ ಇಷ್ಟ. ಆಕೆ ಯಾವುದೇ ಕಾಸ್ಟ್ಯೂಮ್ ತೊಟ್ಟರೂ ಅಂದವಾಗಿ ಕಾಣುತ್ತಿದ್ದರು. ಅದೇ ರೀತಿ ನಾನು ಎಲ್ಲಾ ಕಾಸ್ಟ್ಯೂಮ್ಸ್‌ನಲ್ಲಿ ಚೆನ್ನಾಗಿ ಕಾಣಲು ಪ್ರಯತ್ನಿಸುತ್ತೇನೆ ಎಂದು ರಿಪ್ಲೇ ಮಾಡಿದ್ದಾರೆ.

ಯಾವಾಗ ನಿಮ್ಮನ್ನು ಬೆಳ್ಳಿ ಪರದೆ ಮೇಲೆ ನೋಡಬಹುದು? ಎಂದು ಮತ್ತೊಬ್ಬರು ಕೇಳಿದ್ದು ನನಗೂ ಇನ್ನು ಗೊತ್ತಿಲ್ಲ. ಕಾಯುತ್ತಿದ್ದೇನೆ ಎಂದು ಆರಾಧ್ಯ ದೇವಿ ಉತ್ತರಿಸಿದ್ದಾರೆ. ಮತ್ತೊಬ್ಬರು ನಿಮ್ಮ ಶೇರ್ ಸೀಕ್ರೆಟ್ ಏನು ಎಂದು ಕೇಳಿದ್ದಕ್ಕೆ ವರ್ಕೌಟ್‌, ಡಯೆಟ್ ಹಾಗೂ ಸಕ್ಕರೆ ತಿನ್ನದೇ ಇರುವುದು ಎಂದಿದ್ದಾರೆ.

ಕೆಲ ದಿನಗಳ ಹಿಂದೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಆರಾಧ್ಯ ದೇವಿ ಸೀರೆ ಉಟ್ಟು ಮಾಡಿದ್ದ ರೀಲ್ಸ್ ವೀಡಿಯೋ ಅದು. ಈಕೆ ಯಾರು ಗೊತ್ತಾ ಎಂದು ಟ್ವೀಟ್ ಮಾಡಿ ಕೇಳಿದ್ದರು. ಬಳಿಕ ಹಲವರು ಆಕೆಯ ಬಗ್ಗೆ ಮಾಹಿತಿ ನೀಡಿದ್ದರು. ಆಕೆ ಮಲಯಾಳಂ ನಟಿ ಎಂದಿದ್ದರು. ಬಳಿಕ ಆಕೆಯ ಹಲವು ರೀಲ್ಸ್ ವೀಡಿಯೋಗಳನ್ನು ವರ್ಮಾ ಹಂಚಿಕೊಂಡಿದ್ದರು. ಆಕೆಯ ಅಂದಕ್ಕೆ ಫಿದಾ ಆಗಿ 'ಸ್ಯಾರಿ' ಎನ್ನುವ ಸಿನಿಮಾ ಘೋಷಿಸಿಬಿಟ್ಟಿದ್ದರು.

More from Filmibeat

English summary
Saree Movie actress Aaradhya Devi about her experience with body shaming;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X