For Quick Alerts
  ALLOW NOTIFICATIONS  
  For Daily Alerts

  ನಟನೆ ಬಿಟ್ಟಿದ್ದಕ್ಕೆ ಕಾರಣ ಕೊಟ್ಟ 'ಮಿರ್ಚಿ' ನಟಿ ರಿಚಾ

  |

  ರಾಣಾ ದಗ್ಗುಬಾಟಿ ನಟನೆಯ ಲೀಡರ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಿಚಾ ಗಂಗೋಪಾಧ್ಯಾಯ ಈಗ ರಿಚಾ ಲಂಗೆಲ್ಲಾ ನಟನೆ ತ್ಯಜಿಸಿ ಏಳು ವರ್ಷಗಳಾಗಿವೆ.

  ನಾಗಾರ್ಜುನ, ರಾಣಾ ದಗ್ಗುಬಾಟಿ, ಧನುಶ್, ಪ್ರಭಾಸ್, ರಚಿತೇಜಾ ಅಂಥಹಾ ಸೂಪರ್ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದ, ಪ್ರತಿಭಾನ್ವಿತ ಹಾಗೂ ಪಕ್ಕಾ ದಕ್ಷಿಣ ಭಾರತ ಮುಖಚರ್ಯೆಯುಳ್ಳ ನಟಿ ಎಂದು ಗುರುತಿಸಿಕೊಂಡಿದ್ದ ರಿಚಾ, ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ನಟನೆಗೆ ಗುಡ್‌ಬಾಯ್ ಹೇಳಿಬಿಟ್ಟರು.

  ಹೌದು, ರಿಚಾ, 2013ರಲ್ಲಿ ನಾಗಾರ್ಜುನ ಜೊತೆಗೆ 'ಭಾಯ್' ಸಿನಿಮಾದಲ್ಲಿ ನಟಿಸಿದರು, ಆ ನಂತರ ಅವರು ಇನ್ನಾವ ಸಿನಿಮಾದಲ್ಲಿಯೂ ನಟಿಸಲಿಲ್ಲ. ಸಿನಿಮಾ ರಂಗದಿಂದ ಶಾಶ್ವತವಾಗಿ ದೂರವಾಗುವ ನಿರ್ಧಾರ ತಳೆದು ಅಂತೆಯೇ ಮಾಡಿದರು.

  ರಿಚಾ, ಧನುಶ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ, ಮಾಯಕ್ಕಮ್ ಎನ್ನಾ ಬಿಡುಗಡೆ ಆಗಿ ಇಂದಿಗೆ 9 ವರ್ಷ. ಈ ಸಂದರ್ಭದಲ್ಲಿ ಸರಣಿ ಟ್ವೀಟ್ ಮಾಡಿರುವ ರಿಚಾ, 'ನಾನು ಎಂಬಿಎ ಕಲಿಯಲೆಂದು ನಟನೆ ಬಿಟ್ಟೆ. ಮಾರ್ಕೆಟಿಂಗ್ ಹಾಗೂ ಬ್ರ್ಯಾಂಡ್ ಮ್ಯಾನೇಜ್‌ಮೆಂಟ್ ಬಗ್ಗೆ ನನಗೆ ಅತೀವ ಆಸಕ್ತಿ ಇತ್ತು' ಎಂದಿದ್ದಾರೆ ರಿಚಾ.

  ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Olle Hudga Pratham

  ವಿದೇಶಿ ಹುಡುಗನನ್ನು ವಿವಾಹವಾಗಿರುವ ರಿಚಾ, ನನ್ನ ಎಂಬಿಎ ಪಯಣದಲ್ಲಿ ನನ್ನ ಜೀವನದ ಸಂಗತಿ ಸಹ ಸಿಕ್ಕರು. ನನ್ನ ಎಂಬಿಎ ಸಹಪಾಠಿ ಜೋ ಲಂಗೆಲ್ಲಾ ಅನ್ನು ನಾನು ವಿವಾಹವಾಗಿದ್ದೇನೆ. ಸಿನಿಮಾಗಳಲ್ಲಿ ನಟಿಸಿದ್ದು ನನ್ನ ಒಳ್ಳೆಯ ಆಯ್ಕೆ, ಆದರೆ ಆ ನಂತರ ಎಂಬಿಎ ಮಾಡಿದ್ದು, ಅದರ ಮೂಲಕವೇ ಜೀವನ ಕಟ್ಟಿಕೊಂಡಿದ್ದು ಸಹ ನನ್ನ ಅತ್ಯುತ್ತಮ ಆಯ್ಕೆ ಎಂದಿದ್ದಾರೆ ರಿಚಾ.

  English summary
  Actress Richa Langella opened up about why she left acting. She said i wanted build my career in marketing and brand management so i left movie industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X