Kantara-1 vs OG; ತೆಲುಗಿನಲ್ಲೇ ಪವನ್ ಕಲ್ಯಾಣ್ 'OG' ಹಿಂದಿಕ್ಕಿದ 'ಕಾಂತಾರ'-1

ದಸರಾ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರ್ತಿವೆ. ಕನ್ನಡದ 'ಕಾಂತಾರ- 1' ಸಿನಿಮಾ ಜೊತೆಗೆ ತೆಲುಗಿನ 'OG' ಹಾಗೂ ತಮಿಳಿನ 'ಇಡ್ಲಿ ಕಡೇ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಎದುರುಬದಿರಾತ್ತಿವೆ. ಈಗಾಗಲೇ 3 ಸಿನಿಮಾಗಳ ಟ್ರೈಲರ್ ಹಿಟ್ ಆಗಿ ಗಮನ ಸೆಳೆದಿದೆ. ಪವನ್ ಕಲ್ಯಾಣ್ ಚಿತ್ರವನ್ನು ರಿಷಬ್ ಶೆಟ್ಟಿ ಸಿನಿಮಾ ಹಿಂದಿಕ್ಕಿದೆ.

ಸುಜಿತ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'OG' ಸಿನಿಮಾ ಈ ವಾರವೇ ತೆರೆಗೆ ಬರ್ತಿದ್ದು ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಡಿವಿವಿ ದಾನಯ್ಯ 200 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದೆ. ತಮನ್ ಮ್ಯೂಸಿಕ್ ಚಿತ್ರಕ್ಕಿದೆ. 90ರ ದಶಕದ ಗ್ಯಾಂಗ್‌ಸ್ಟರ್ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಪ್ರಿಯಾಂಕ ಮೋಹನ್, ಇಮ್ರಾನ್ ಹಶ್ಮಿ, ಭಜರಂಗಿ ಲೋಕಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಟ್ರೈಲರ್ ಬರುವವರೆಗೂ ಸಿನಿಮಾ ಬಗ್ಗೆ ಅಷ್ಟೇನು ನಿರೀಕ್ಷೆ ಇರಲಿಲ್ಲ. ಆದರೆ ಏಕಾಏಕಿ ಹೈಪ್ ಹೆಚ್ಚಾಗಿದೆ.

Rishab Shetty s Kantara-1 Trailer Beats Pawan Kalyan s OG in Dussehra Box Office Race

ಭಾನುವಾರವೇ ಟ್ರೈಲರ್ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿತ್ತು. ಪ್ರೀ ರಿಲೀಸ್ ಈವೆಂಟ್‌ನಲ್ಲಿ ಈ ಬಗ್ಗೆ ಪವನ್ ಕಲ್ಯಾಣ್ ಬೇಸರ ವ್ಯಕ್ತಪಡಿಸಿದ್ದರು. ಅಂತಿಮವಾಗಿ ವೇದಿಕೆಯಲ್ಲಿ ಮಾತ್ರ ಟ್ರೈಲರ್ ಪ್ರದರ್ಶನ ಮಾಡಿದ್ದರು. ಮರುದಿನ 'ಕಾಂತಾರ-1' ಟ್ರೈಲರ್ ಬಿಡುಗಡೆ ಬಳಿಕ 'OG' ಸಿನಿಮಾ ಝಲಕ್ ಯೂಟ್ಯೂಬ್‌ಗೆ ಬಂದಿತ್ತು. ವೀವ್ಸ್ ವಿಚಾರದಲ್ಲಿ ಪವನ್ ಸಿನಿಮಾ ಟ್ರೈಲರ್ ಹಿಂದೆ ಬಿದ್ದಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ- 1' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಗೆ ಬರ್ತಿದೆ. ತೆಲುಗು ಪ್ರೇಕ್ಷಕರು ಕೂಡ ತುಳುನಾಡಿನ ಕಥೆ ಆಧರಿಸಿರುವ ಈ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಹಾಗಾಗಿ ಒಮ್ಮೆಲೆ ಟ್ರೈಲರ್ ನೋಡಲು ಮುಗಿಬಿದ್ದರು. ಪರಿಣಾಮ ವೀವ್ಸ್ ರಾಕೆಟ್ ವೇಗದಲ್ಲಿ ಹೆಚ್ಚಾಗಿತ್ತು.

Rishab Shetty s Kantara-1 Trailer Beats Pawan Kalyan s OG in Dussehra Box Office Race

2 ದಿನಗಳಲ್ಲಿ 'ಕಾಂತಾರ- 1' ತೆಲುಗು ವರ್ಷನ್ ಟ್ರೈಲರ್ 1.5 ಕೋಟಿ ವೀವ್ಸ್ ಹಾಗೂ 3 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಆದರೆ 'OG' ಟ್ರೈಲರ್ ಇನ್ನು 1 ಕೋಟಿ ವೀವ್ಸ್ ಮಾತ್ರ ಸಾಧಿಸಿದೆ. ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಚಿತ್ರದ ಟ್ರೈಲರ್ ಒಂದೇ ದಿನದಲ್ಲಿ 4.8 ಕೋಟಿ ವೀವ್ಸ್ ಸಾಧಿಸಿತ್ತು. ಅದಕ್ಕೆ ಹೋಲಿಸಿದರೆ 'OG' ಸಾಧನೆ ಕಮ್ಮಿ ಎನ್ನುವ ಚರ್ಚೆ ಶುರುವಾಗಿದೆ. ಅದಕ್ಕೆ ಪವನ್ ಕಲ್ಯಾಣ್ ಅಭಿಮಾನಿಗಳು ಭಿನ್ನ ಕಾರಣಗಳನ್ನು ಕೊಡುತ್ತಿದ್ದಾರೆ.

ಪ್ರೀ ರಿಲೀಸ್ ಈವೆಂಟ್‌ ವೇದಿಕೆ ಮೇಲೆ 'OG' ಚಿತ್ರದ ಟ್ರೈಲರ್ ಪ್ರದರ್ಶನ ಮಾಡಿದ್ದರು. ಅದನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿಬಿಟ್ಟಿದ್ದರು. ಹಾಗಾಗಿ ಬಳಿಕ ಅಧಿಕೃತವಾಗಿ ಯೂಟ್ಯೂಬ್‌ಗೆ ಬಂದ ಟ್ರೈಲರ್ ಬಗ್ಗೆ ಜನ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. 'OG' ಸಿನಿಮಾ ಟ್ರೈಲರ್ ನೋಡಲು ಬರೀ ಪವನ್ ಕಲ್ಯಾಣ್ ಫ್ಯಾನ್ಸ್ ಕಾತರರಾಗಿದ್ದಾರೆ. ಆದರೆ 'ಕಾಂತಾರ' ಸಿನಿಮಾ ತೆಲುಗಿನಲ್ಲಿ ದೊಡ್ಡದಾಗಿ ಹಿಟ್ ಆಗಿತ್ತು. ಹಾಗಾಗಿ ಪ್ರೀಕ್ವೆಲ್ ನೋಡಲು ತೆಲುಗು ಪ್ರೇಕ್ಷಕರೆಲ್ಲಾ ಕಾಯ್ತಿದ್ದಾರೆ. ಎಲ್ಲರೂ ಟ್ರೈಲರ್ ನೋಡಿದ್ದಾರೆ. ಅದಕ್ಕೆ ವೀವ್ಸ್ ಹೆಚ್ಚಾಗಿದೆ ಎಂದು ಚರ್ಚೆ ನಡೀತಿದೆ.

'OG' ಪಕ್ಕಾ ಕಮರ್ಷಿಯಲ್ ಸಿನಿಮಾ. ಟ್ರೈಲರ್ ಚೆನ್ನಾಗಿದೆ. ಒಮ್ಮೆ ನೋಡಿದರೆ ಸಾಕು, ಆದರೆ 'ಕಾಂತಾರ-1' ಟ್ರೈಲರ್ ಪದೇ ಪದೆ ನೋಡಬೇಕು ಎನ್ನುವಂತಿದೆ. ಹಾಗಾಗಿ ಜನ ಮತ್ತೆ ಮತ್ತೆ ನೋಡಿ ವೀವ್ಸ್ ಜಾಸ್ತಿ ಆಗಿರಬಹುದು ಎನ್ನುವುದು ಕೆಲವರ ಅಭಿಪ್ರಾಯ. ಒಟ್ಟಾರೆ ಎರಡೂ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

More from Filmibeat

English summary
Rishab Shetty’s Kantara-1 Outperforms OG in Pre-Festival Box Office Buzz
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X