ತೆಲುಗಿನಲ್ಲಿ ರಾಬರ್ಟ್ ಅಬ್ಬರ: 2 ಮಿಲಿಯನ್ ವೀಕ್ಷಣೆ, 100K ಲೈಕ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ತೆಲುಗು ಟೀಸರ್ ಬಿಡುಗಡೆಯಾಗಿದ್ದು, ಟಾಲಿವುಡ್‌ನಲ್ಲಿ ಅಬ್ಬರಿಸುತ್ತಿದೆ. ರಾಬರ್ಟ್ ಟೀಸರ್‌ಗೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದು, 2 ಮಿಲಿಯನ್ ವೀಕ್ಷಣೆ ಕಂಡಿದೆ.
ರಾಬರ್ಟ್ ತೆಲುಗು ಟೀಸರ್‌ಗೆ 121 K ಲೈಕ್ಸ್ ಬಂದಿದ್ದು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ದರ್ಶನ್ ಅವರೇ ವಾಯ್ಸ್ ಕೊಟ್ಟಿದ್ದರೆ ಇನ್ನು ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಈ ಹಿಂದೆ ಕನ್ನಡದಲ್ಲಿ ರಿಲೀಸ್ ಆಗಿದ್ದ ಟೀಸರ್ ಇದಾಗಿದ್ದು, ತೆಲುಗಿನಲ್ಲಿ ಫೆಬ್ರವರಿ 3 ರಂದು ಸಂಜೆ 4 ಗಂಟೆಗೆ ಆನಂದ್ ಆಡಿಯೋ ಯ್ಯೂಟ್ಯೂಬ್ ಚಾನಲ್‌ನಲ್ಲಿ ರಾಬರ್ಟ್ ಟೀಸರ್ ಬಿಡುಗಡೆಯಾಗಿತ್ತು.

ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ. ದರ್ಶನ್, ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಅಂದ್ಹಾಗೆ, ಏಕಕಾಲದಲ್ಲಿ ರಾಬರ್ಟ್ ಸಿನಿಮಾ ಆಂದ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆಯಾಗಲು ಅಡ್ಡಿ ಎದುರಾಗಿತ್ತು. ಬಳಿಕ, ಖುದ್ದು ದರ್ಶನ್ ಅವರೇ ಫಿಲಂ ಚೇಂಬರ್‌ಗೆ ಭೇಟಿ ನೀಡಿ ಈ ಸಮಸ್ಯೆ ಬಗೆಹರಿಸಿಕೊಂಡಿದ್ದರು. ಈಗ ನಿಗದಿಯಂತೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ರಾಬರ್ಟ್ ತೆರೆಗೆ ಬರಲಿದೆ.


Click it and Unblock the Notifications











