ರಾಬರ್ಟ್ ಟೀಸರ್ ಆಯ್ತು, ಈಗ ತೆಲುಗಿನಲ್ಲಿ ಮೊದಲ ಹಾಡು ರಿಲೀಸ್

ಕನ್ನಡದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಾಬರ್ಟ್ ಸಿನಿಮಾ ಈಗ ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವ ರಾಬರ್ಟ್ ಈಗ ತೆಲುಗಿನಲ್ಲಿ ಮೊದಲ ಹಾಡು ರಿಲೀಸ್ ಮಾಡುತ್ತಿದೆ.

ಇತ್ತೀಚಿಗಷ್ಟೆ ರಾಬರ್ಟ್ ಚಿತ್ರದ ತೆಲುಗು ಟೀಸರ್ ಬಿಡುಗಡೆ ಮಾಡಲಾಗಿತ್ತು. ಟೀಸರ್ ನೋಡಿದ ತೆಲುಗು ಮಂದಿ ಸೂಪರ್ ಎಂದಿದ್ದರು. ದರ್ಶನ್ ಅವರ ಎಂಟ್ರಿಗೆ ರೆಡ್‌ಕಾರ್ಪೆಟ್ ಹಾಕಿ ಸ್ವಾಗತಿಸಿದ್ದರು. ಈಗ ತೆಲುಗಿನಲ್ಲಿ ಮೊದಲ ಹಾಡು ಬರ್ತಿದೆ.

ಕನ್ನಡದಲ್ಲಿ ಈಗಾಗಲೇ ಬಿಡುಗಡೆಯಾಗಿರುವ 'ಬಾ ಬಾ ಬಾ ನಾ ರೆಡಿ.....' ಹಾಡು ಈಗ ತೆಲುಗಿನಲ್ಲಿ' ರಾ ರಾ ರಾ ನೇನ್ ರೆಡಿ....' ಎಂದು ರೂಪುಗೊಂಡಿದೆ.

Roberrt telugu 1st Song release on 8th february

ಫೆಬ್ರವರಿ 8 ರಂದು ಸಂಜೆ 4.05 ನಿಮಿಷಕ್ಕೆ ತೆಲುಗು ವರ್ಷನ್‌ನಲ್ಲಿ ರಾಬರ್ಟ್ ಹಾಡು ರಿಲೀಸ್ ಆಗುತ್ತಿದೆ. ಅಂದ್ಹಾಗೆ, ಕನ್ನಡದಲ್ಲಿ ಈ ಹಾಡಿಗೆ ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದರು. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದರು.

ವ್ಯಾಸರಾಜ್ ಸೊಸಲೆ, ಅನಿರುದ್ಧ್ ಶಾಸ್ತ್ರಿ, ಸಂತೋಷ್ ವೆಂಕಿ, ನಿಖಿಲ್ ಪಾರ್ಥಸಾರಥಿ, ಮಧ್ವೇಶ್ ಭಾರದ್ವಾಜ್ ಅವರು ಈ ಹಾಡಿಗೆ ದನಿಯಾಗಿದ್ದರು. ಈಗ ತೆಲುಗಿನಲ್ಲಿ ಈ ಹಾಡು ಹೇಗೆ ಬರಲಿದೆ, ಯಾರೆಲ್ಲ ದನಿಗೂಡಿಸಲಿದ್ದಾರೆ ಎಂಬ ಕುತೂಹಲ ಕಾಡ್ತಿದೆ.

ಇನ್ನುಳಿದಂತೆ ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ತೆಲುಗು ರಾಜ್ಯಗಳಲ್ಲಿ ಚಂಚಲವಾಡ ಶ್ರೀನಿವಾಸ್ ರಾವ್ ವಿತರಣೆ ಮಾಡುತ್ತಿದ್ದಾರೆ.

More from Filmibeat

English summary
Kannada actor Darshan starrer Roberrt movie telugu version first song will be released on february 8th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X