twitter
    For Quick Alerts
    ALLOW NOTIFICATIONS  
    For Daily Alerts

    ರಾಬರ್ಟ್ ಟೀಸರ್ ಆಯ್ತು, ಈಗ ತೆಲುಗಿನಲ್ಲಿ ಮೊದಲ ಹಾಡು ರಿಲೀಸ್

    |

    ಕನ್ನಡದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಾಬರ್ಟ್ ಸಿನಿಮಾ ಈಗ ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವ ರಾಬರ್ಟ್ ಈಗ ತೆಲುಗಿನಲ್ಲಿ ಮೊದಲ ಹಾಡು ರಿಲೀಸ್ ಮಾಡುತ್ತಿದೆ.

    ಇತ್ತೀಚಿಗಷ್ಟೆ ರಾಬರ್ಟ್ ಚಿತ್ರದ ತೆಲುಗು ಟೀಸರ್ ಬಿಡುಗಡೆ ಮಾಡಲಾಗಿತ್ತು. ಟೀಸರ್ ನೋಡಿದ ತೆಲುಗು ಮಂದಿ ಸೂಪರ್ ಎಂದಿದ್ದರು. ದರ್ಶನ್ ಅವರ ಎಂಟ್ರಿಗೆ ರೆಡ್‌ಕಾರ್ಪೆಟ್ ಹಾಕಿ ಸ್ವಾಗತಿಸಿದ್ದರು. ಈಗ ತೆಲುಗಿನಲ್ಲಿ ಮೊದಲ ಹಾಡು ಬರ್ತಿದೆ.

    ಭಾರಿ ಮೊತ್ತಕ್ಕೆ ರಾಬರ್ಟ್ ತೆಲುಗು ವಿತರಣೆ ಹಕ್ಕು ಪಡೆದ ನಿರ್ಮಾಪಕಭಾರಿ ಮೊತ್ತಕ್ಕೆ ರಾಬರ್ಟ್ ತೆಲುಗು ವಿತರಣೆ ಹಕ್ಕು ಪಡೆದ ನಿರ್ಮಾಪಕ

    ಕನ್ನಡದಲ್ಲಿ ಈಗಾಗಲೇ ಬಿಡುಗಡೆಯಾಗಿರುವ 'ಬಾ ಬಾ ಬಾ ನಾ ರೆಡಿ.....' ಹಾಡು ಈಗ ತೆಲುಗಿನಲ್ಲಿ' ರಾ ರಾ ರಾ ನೇನ್ ರೆಡಿ....' ಎಂದು ರೂಪುಗೊಂಡಿದೆ.

    Roberrt telugu 1st Song release on 8th february

    ಫೆಬ್ರವರಿ 8 ರಂದು ಸಂಜೆ 4.05 ನಿಮಿಷಕ್ಕೆ ತೆಲುಗು ವರ್ಷನ್‌ನಲ್ಲಿ ರಾಬರ್ಟ್ ಹಾಡು ರಿಲೀಸ್ ಆಗುತ್ತಿದೆ. ಅಂದ್ಹಾಗೆ, ಕನ್ನಡದಲ್ಲಿ ಈ ಹಾಡಿಗೆ ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದರು. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದರು.

    ತೆಲುಗಿನಲ್ಲಿ ರಾಬರ್ಟ್ ಅಬ್ಬರ: 2 ಮಿಲಿಯನ್ ವೀಕ್ಷಣೆ, 100K ಲೈಕ್ಸ್ತೆಲುಗಿನಲ್ಲಿ ರಾಬರ್ಟ್ ಅಬ್ಬರ: 2 ಮಿಲಿಯನ್ ವೀಕ್ಷಣೆ, 100K ಲೈಕ್ಸ್

    ವ್ಯಾಸರಾಜ್ ಸೊಸಲೆ, ಅನಿರುದ್ಧ್ ಶಾಸ್ತ್ರಿ, ಸಂತೋಷ್ ವೆಂಕಿ, ನಿಖಿಲ್ ಪಾರ್ಥಸಾರಥಿ, ಮಧ್ವೇಶ್ ಭಾರದ್ವಾಜ್ ಅವರು ಈ ಹಾಡಿಗೆ ದನಿಯಾಗಿದ್ದರು. ಈಗ ತೆಲುಗಿನಲ್ಲಿ ಈ ಹಾಡು ಹೇಗೆ ಬರಲಿದೆ, ಯಾರೆಲ್ಲ ದನಿಗೂಡಿಸಲಿದ್ದಾರೆ ಎಂಬ ಕುತೂಹಲ ಕಾಡ್ತಿದೆ.

    ಇನ್ನುಳಿದಂತೆ ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ತೆಲುಗು ರಾಜ್ಯಗಳಲ್ಲಿ ಚಂಚಲವಾಡ ಶ್ರೀನಿವಾಸ್ ರಾವ್ ವಿತರಣೆ ಮಾಡುತ್ತಿದ್ದಾರೆ.

    Recommended Video

    ಸಲಾರ್ ಗೆ ಎಂಟ್ರಿ ಕೊಟ್ಟ ಕನ್ನಡದ ಸ್ಟಾರ್ ವಿಲನ್ | Filmibeat Kannada

    English summary
    Kannada actor Darshan starrer Roberrt movie telugu version first song will be released on february 8th.
    Saturday, February 6, 2021, 17:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X