ತೆಲುಗಿನಲ್ಲಿ 'ರಾಬರ್ಟ್': ಟೈಟಲ್ ಅನಾವರಣಕ್ಕಾಗಿ ಮೆಗಾ ತಯಾರಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ 'ರಾಬರ್ಟ್' ಸಿನಿಮಾ ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ ಎಂದು ಪ್ರಚಾರ ಪಡೆದುಕೊಳ್ಳುತ್ತಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ ಕೊನೆಯಲ್ಲಿ ರಾಬರ್ಟ್ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

Recommended Video

ಇವರೆಲ್ಲ ಯಾವತ್ತು ರೆಡಿ ಅಂತಾರೋ ಅವತ್ತು ನನ್ನ ರಾಬರ್ಟ್ ಸಿನಿಮಾ ಬಿಡ್ತೀನಿ | Tharun Sudhir | Filmibeat Kannada

ರಾಬರ್ಟ್ ಶುರುವಾದಾಗ ಇದು ಪ್ಯಾನ್ ಇಂಡಿಯಾ ಬಿಡುಗಡೆಯಾಗಬಹುದು ಎಂದು ಹೇಳಲಾಗಿತ್ತು. ಅದಾದ ಮೇಲೆ ಈ ಕುರಿತು ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ.

ಇದೀಗ, ರಾಬರ್ಟ್ ಚಿತ್ರದ ತೆಲುಗು ವರ್ಷನ್ ಬಗ್ಗೆ ನಿರ್ದೇಶಕ ನಂದಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಣ್ಣ ನಟಿಸುತ್ತಿರುವ 'ಉಪಾಧ್ಯಕ್ಷ' ಸಿನಿಮಾದ ಟೈಟಲ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಾಡಿದ ತರುಣ್ ಸುಧೀರ್, ರಾಬರ್ಟ್ ಚಿತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Robert Telugu Version Title Will Announce Soon

''ತಾಂತ್ರಿಕವಾಗಿ ರಾಬರ್ಟ್ ಸಿನಿಮಾ ಮುಗಿದಿದೆ. ಸಣ್ಣ ಪುಟ್ಟ ಕೆಲಸ ಬಾಕಿ ಇದೆ. ಆಗಸ್ಟ್ ತಿಂಗಳಿನಿಂದ ಇದು (ಕೊರೊನಾ) ಮುಗಿಯುತ್ತೆ ಅಂದುಕೊಂಡಿದ್ವಿ, ಇನ್ನು ಮುಗಿದಿಲ್ಲ. ನಿರ್ಮಾಪಕರು, ವಿತರಕರು, ಹೀರೋ ಎಲ್ಲರೂ ಇದ್ದಾರೆ. ಇವರೆಲ್ಲ ಸೇರಿ ಯಾವಾಗ ಅಂತ ಡಿಸೈಡ್ ಮಾಡ್ತಾರೋ ನಾನು ರೆಡಿ.'' ಎಂದು ರಿಲೀಸ್ ಬಗ್ಗೆ ತಿಳಿಸಿದ್ದಾರೆ.

ತೆಲುಗಿನಲ್ಲಿ 'ರಾಬರ್ಟ್' ಸಿನಿಮಾ ತಯಾರಿ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ತರುಣ್ ಸುಧೀರ್ ''ತೆಲುಗು ಟೈಟಲ್ ಘೋಷಣೆಗೆ ವಿಶೇಷವಾಗಿ ತಯಾರಿ ಮಾಡ್ತಿದ್ದೀವಿ. ಸದ್ಯದಲ್ಲೇ ಆ ಬಗ್ಗೆ ಹೇಳುತ್ತೇವೆ'' ಎಂದಷ್ಟೇ ಮಾಹಿತಿ ನೀಡಿದ್ದಾರೆ.

ಇನ್ನುಳಿದಂತೆ ರಾಬರ್ಟ್ ಚಿತ್ರದಲ್ಲಿ ನಾಯಕಿಯಾಗಿ ಆಶಾ ಭಟ್ ನಟಿಸಿದ್ದಾರೆ. ಇದು ಇವರಿಗೆ ಮೊದಲ ಕನ್ನಡ ಸಿನಿಮಾ. ಜಗಪತಿ ಬಾಬು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್, ಸೋನಾಲ್ ಮಾಂಟೇರೋ, ರವಿ ಕಿಶನ್, ಶಿವರಾಜ್ ಕೆ ಆರ್ ಪೇಟೆ, ಚಿಕ್ಕಣ್ಣ, ಧರ್ಮಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಇದೆ. ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

More from Filmibeat

English summary
Challenging star darshan starrer Roberrt movie telugu version title will Announce Soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X