For Quick Alerts
  ALLOW NOTIFICATIONS  
  For Daily Alerts

  ಬಾಲಕೃಷ್ಣ ಸಿನಿಮಾದಲ್ಲಿ ನಟಿಸುವುದಿಲ್ಲವೆಂದ ರೋಜಾ

  |

  ತೆಲುಗಿನ ಖ್ಯಾತ ನಟಿ, ಶಾಸಕಿ ರೋಜಾ ಸಿನಿಮಾ-ರಾಜಕೀಯ ಎರಡೂ ರಂಗದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ.

  ರಾಜಕೀಯ ಪ್ರವೇಶಿಸಿದ್ದರೂ ಸಹ ಸಿನಿಮಾ ರಂಗದಲ್ಲಿ ಅವರ ಬೇಡಿಕೆ ಕಡಿಮೆ ಆಗಿಲ್ಲ. ಕನ್ನಡದಲ್ಲೂ ನಟಿಸಿರುವ ಈ ನಟಿಗೆ ತೆಲುಗು-ತಮಿಳಿನಲ್ಲಿ ಸಾಕಷ್ಟು ಬೇಡಿಕೆ ಇದೆ.

  ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ

  ಬಾಲಕೃಷ್ಣ ನಟಿಸುತ್ತಿರುವ ಹೊಸ ಚಿತ್ರಕ್ಕೆ ಲೇಡಿ ವಿಲನ್ ಪಾತ್ರಕ್ಕೆ ರೋಜಾ ಅವರನ್ನು ಸಂಪರ್ಕಿಸಲಾಗಿತ್ತು. ಆರಂಭದಲ್ಲಿ ಆಸಕ್ತಿ ತೋರಿಸಿದ್ದ ರೋಜಾ, ನಂತರ ಮತ್ತೊಂದು ಸಿನಿಮಾದ ಆಫರ್ ಬರುತ್ತಿದ್ದಂತೆ ಬಾಲಕೃಷ್ಣ ಸಿನಿಮಾಗೆ ನೋ ಹೇಳಿದ್ದಾರೆ.

  ಬಾಲಕೃಷ್ಣ ನಾಯಕ-ಬೋಯಪಾಟಿ ಶ್ರೀನಿ ನಿರ್ದೇಶಕ

  ಬಾಲಕೃಷ್ಣ ನಾಯಕ-ಬೋಯಪಾಟಿ ಶ್ರೀನಿ ನಿರ್ದೇಶಕ

  ಹೌದು, ಬಾಲಕೃಷ್ಣ ನಟಿಸುತ್ತಿರುವ ಬೋಯಪಾಟಿ ಶ್ರೀನು ನಿರ್ದೇಶಿಸುತ್ತಿರುವ ಮಾಸ್ ಚಿತ್ರಕ್ಕೆ ಲೇಡಿ ವಿಲನ್ ಪಾತ್ರದಲ್ಲಿ ನಟಿಸುವಂತೆ ಕೇಳಲಾಗಿತ್ತು ಆರಂಭದಲ್ಲಿ ಆಸಕ್ತಿವಹಿಸಿದ್ದ ರೋಜಾ ಆ ನಂತರ ನಟಿಸುವುದಿಲ್ಲವೆಂದು ಹೇಳಿದ್ದಾರೆ.

  ಪುಷ್ಪಾ ಸಿನಿಮಾದಲ್ಲೂ ಅದೇ ಪಾತ್ರ

  ಪುಷ್ಪಾ ಸಿನಿಮಾದಲ್ಲೂ ಅದೇ ಪಾತ್ರ

  ಇದಕ್ಕೆ ಕಾರಣ ಅಲ್ಲು ಅರ್ಜುನ್. ಹೌದು ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾ ಪುಷ್ಪಾ ಸಿನಿಮಾದಲ್ಲಿಯೂ ರೋಜಾ ಅವರಿಗೆ ಪ್ರಮುಖ ಪಾತ್ರದ ಆಫರ್ ನೀಡಲಾಗಿತ್ತು. ಪುಷ್ಪಾ ನಲ್ಲೂ ಲೇಡಿ ವಿಲನ್ ಪಾತ್ರವನ್ನೇ ನೀಡಲಾಗಿತ್ತು. ರೋಜಾ ಪುಷ್ಪಾ ಪಾತ್ರವನ್ನು ಒಪ್ಪಿಕೊಂಡಿದ್ದಾರೆ.

  ಪುಷ್ಪಾ ಸಿನಿಮಾ ಪಾತ್ರ ಇಷ್ಟವಾಯಿತಂತೆ ರೋಜಾ ಗೆ

  ಪುಷ್ಪಾ ಸಿನಿಮಾ ಪಾತ್ರ ಇಷ್ಟವಾಯಿತಂತೆ ರೋಜಾ ಗೆ

  ಬಾಲಕೃಷ್ಣ ಸಿನಿಮಾಗಿಂತಲೂ ಪಷ್ಪಾ ಸಿನಿಮಾದ ಪಾತ್ರ ಹೆಚ್ಚು ಚೆನ್ನಾಗಿದೆ, ಆಸಕ್ತಿಕರವಾಗಿದೆ ಎಂದು ರೋಜಾ ಗೆ ಅನಿಸಿತಂತೆ ಹಾಗಾಗಿ ಪುಷ್ಪಾ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ರೋಜಾ. ಬಾಲಕೃಷ್ಣ-ಬೋಯಪಾಟಿ ಶ್ರೀನಿ ತಂಡ ಬೇರೆ ನಟಿಯನ್ನು ಹುಡುಕುತ್ತಿದ್ದಾರೆ.

  ರಶ್ಮಿಕಾ ಮಂದಣ್ಣ ನಾಯಕಿ, ವಿಶೇಷ ಪಾತ್ರದಲ್ಲಿ ಡಾಲಿ

  ರಶ್ಮಿಕಾ ಮಂದಣ್ಣ ನಾಯಕಿ, ವಿಶೇಷ ಪಾತ್ರದಲ್ಲಿ ಡಾಲಿ

  ಪುಷ್ಪಾ ಸಿನಿಮಾ ವನ್ನು ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ಅಲ್ಲು ಅರ್ಜುನ್ ನಾಯಕ, ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದಾರೆ. ವಿಜಯ್ ಸೇತುಪತಿ ನಟಿಸಬೇಕಿದ್ದ ಪ್ರಮುಖ ಪಾತ್ರವೊಂದರಲ್ಲಿ ಕನ್ನಡದ ಡಾಲಿ ಧನಂಜಯ್ ನಟಿಸುತ್ತಿದ್ದಾರೆ.

  ಮಂತ್ರಿ ಸ್ಥಾನ ಕೈತಪ್ಪಿದ ಹಿನ್ನಲೆ ಅಜ್ಞಾತ ಸ್ಥಳದಲ್ಲಿ ನಟಿ ರೋಜಾಮಂತ್ರಿ ಸ್ಥಾನ ಕೈತಪ್ಪಿದ ಹಿನ್ನಲೆ ಅಜ್ಞಾತ ಸ್ಥಳದಲ್ಲಿ ನಟಿ ರೋಜಾ

  English summary
  Actress Roja contacted for Balakrishna movie but she said no and acting in Allu Arjun's Pushpa movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X