Ram charan: ಭಾರತದಲ್ಲಿ ಮಾಲೆ, ದೀಕ್ಷೆ.. ಅಮೆರಿಕಾದಲ್ಲಿ ಸೂಟು ಬೂಟು: ಅಸಲಿ ಕಥೆಯೇನು?

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ 15 ದಿನ ಮೊದಲೇ ರಾಮ್‌ಚರಣ್ ಅಮೆರಿಕಾ ತಲುಪಿದ್ದಾರೆ. ಅದಕ್ಕೂ ಮುನ್ನ ಒಂದಷ್ಟು ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಅಯ್ಯಪ್ಪ ಮಾಲಾಧಾರಿ ಆಗಿದ್ದ ರಾಮ್‌ಚರಣ್ ಬರಿಗಾಲಿನಲ್ಲೇ ಮುಂಬೈ ವಿಮಾನ ನಿಲ್ದಾಣ ತಲುಪಿ ಫ್ಲೈಟ್ ಏರಿದ್ದರು. ಆದರೆ ಈಗ ನ್ಯೂಯಾರ್ಕ್‌ನಲ್ಲಿ ಸೂಟು ಬೂಟು ಧರಿಸಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಅರೇ, ಹೈದರಾಬಾದ್‌ನಲ್ಲಿ ಕಪ್ಪು ಬಟ್ಟೆ ಧರಿಸಿ ಅಯ್ಯಪ್ಪ ಮಾಲಾಧಾರಿ ಆಗಿದ್ದ ಮೆಗಾ ಪವರ್ ಸ್ಟಾರ್ ಈಗ ಏಕಾಏಕಿ ಗೆಟಪ್ ಬದಲಿಸಿದ್ದಾರೆ. 'ಗುಡ್‌ ಮಾರ್ನಿಂಗ್' ಟಾಕ್‌ ಶೋನಲ್ಲೂ ಸ್ಟೈಲಿಶ್ ಸೂಟ್ ಧರಿಸಿ ಮಿಂಚಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ವೈರಲ್ ಆಗುತ್ತಿದೆ. ಒಂದೇ ದಿನದಲ್ಲಿ ಚರಣ್ ಹೀಗೆ ಗೆಟಪ್ ಬದಲಿಸಿದ್ದು ಏಕೆ? ಇಷ್ಟು ಬೇಗ ಅಯ್ಯಪ್ಪ ವ್ರತ ಮುಗೀತಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆ ನಡೀತಿತ್ತು.

RRR Actor Ramcharan looks dashing as he walks on the streets of NewYork

ಸದ್ಯ ಚರಣ್ ಪಿಆರ್‌ಓ ಟೀಂ ಈ ಬಗ್ಗೆ ಪ್ರತಿಕ್ರಿಯಿಸಿದೆ. ಆ ಮಾಹಿತಿ ಪ್ರಕಾರ ನಿನ್ನೆಗೆ ಅವರು ಸ್ವೀಕರಸಿದ್ದ 21 ದಿನಗಳ ಅಯ್ಯಪ್ಪ ಸ್ವಾಮಿ ವ್ರತ ಪೂರ್ತಿ ಆಗಿದೆಯಂತೆ. ಅದರ ಹಿನ್ನೆಲೆಯಲ್ಲಿ ಅಮೆರಿಕಾದ ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸಿ ಮಾಲೆ ತೆಗೆದಿದ್ದಾರಂತೆ. ಒಂದ್ಕಡೆ ಅಯ್ಯಪ್ಪ ಸ್ವಾಮಿ ವ್ರತ ಪೂರ್ತಿಯಾಗಿದ್ದು ಮತ್ತೊಂದು ಕಡೆ ಆಸ್ಕರ್ ಪ್ರಮೋಷನ್‌ನಲ್ಲಿ ಭಾಗಿ ಆಗುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಬಾರಿ 'RRR' ಚಿತ್ರದ 'ನಾಟು ನಾಟು' ಗೀತೆಗೆ ಆಸ್ಕರ್ ಪ್ರಶಸ್ತಿ ಸಿಗುವ ನಿರೀಕ್ಷೆ ಇದೆ.

ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಕಳೆದ ವರ್ಷ ಮಾರ್ಚ್ 25ಕ್ಕೆ ತೆರೆಗಪ್ಪಳಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕೋಟಿ ಕೋಟಿ ಕೊಳ್ಳೆ ಹೊಡೆದು ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಆಂಧ್ರ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಹಾಗೂ ಕೋಮುರಂ ಭೀಮ್ ಪಾತ್ರಗಳನ್ನು ಆಧರಿಸಿ ಒಂದು ಕಾಲ್ಪನಿಕ ಕಥೆಯನ್ನು ಕಟ್ಟಿ ಮೌಳಿ ಸಿನಿಮಾ ಕಟ್ಟಿಕೊಟ್ಟಿದ್ದರು. ಅವರ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಜಪಾನ್‌ ಥಿಯೇಟರ್‌ಗಳಲ್ಲಿ ಸಿನಿಮಾ 100 ದಿನ ಪೂರೈಸಿ ಮುನ್ನುಗ್ಗುತ್ತಿದೆ.

RRR Actor Ramcharan looks dashing as he walks on the streets of NewYork

ಡಿವಿವಿ ದಾನಯ್ಯ ಬಹುಕೋಟಿ ವೆಚ್ಚದಲ್ಲಿ 'RRR' ಚಿತ್ರವನ್ನು ನಿರ್ಮಾಣ ಮಾಡಿದ್ದರು. ಕೊರೊನಾ ಹಾವಳಿಯಿಂದ ಸಿನಿಮಾ ರಿಲೀಸ್ ತಡವಾಗಿತ್ತು. ಇನ್ನು ಅಜಯ್ ದೇವಗನ್, ಆಲಿಯಾ ಭಟ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇನ್ನು ಚಿತ್ರದಲ್ಲಿ ರಾಮರಾಜು ಪಾತ್ರದಲ್ಲಿ ರಾಮ್‌ಚರಣ್, ಕೋಮುರಂ ಭೀಮ್ ಪಾತ್ರದಲ್ಲಿ ಜ್ಯೂ.ಎನ್‌ಟಿಆರ್ ಅಬ್ಬರಿಸಿದ್ದಾರೆ. ಇಬ್ಬರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

More from Filmibeat

English summary
RRR Actor Ramcharan looks dashing as he walks on the streets of New York. he made an appearance on the popular American talk show Good Morning America. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X