"ನಾನು ಮದುವೆ ಆದಾಗ ದಪ್ಪ ಇದ್ದೆ.. ಹಣಕ್ಕಾಗಿ ರಾಮ್‌ಚರಣ್ ನನ್ನನ್ನು ಮದುವೆ ಆಗಿದ್ದಾರೆ ಅಂದ್ರು": ಉಪಾಸನಾ

ಟಾಲಿವುಡ್ ಕ್ಯೂಟ್ ಕಪಲ್ಸ್‌ ಅಲ್ಲಿ ರಾಮ್‌ಚರಣ್‌- ಉಪಾಸನಾ ಜೋಡಿ ಕೂಡ ಒಂದು. ಹೀರೊ ಆಗಿ ಚಿತ್ರರಂಗಕ್ಕೆ ಬಂದ 5 ವರ್ಷಕ್ಕೆ ನಟ ರಾಮ್‌ಚರಣ್ ಅಪೋಲೋ ಆಸ್ಪಿಟಲ್ಸ್ ಒಡೆಯನ ಮೊಮ್ಮಗಳನ್ನು ಪ್ರೀತಿಸಿ ಮದುವೆ ಆಗಿದ್ದರು. ಕಾಮನ್ ಫ್ರೆಂಡ್ಸ್‌ ಮೂಲಕ ಭೇಟಿಯಾಗಿದ್ದ ಜೋಡಿ ನಂತರ ಪ್ರೀತಿಸಿ ಹೊಸ ಬಾಳಿಗೆ ಕಾಲಿಟ್ಟಿದ್ದರು. ಮದುವೆಯಾಗಿ 10 ವರ್ಷಗಳ ನಂತರ ದಂಪತಿ ಈಗ ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಮ್‌ಚರಣ್ ಪತ್ನಿ ಉಪಾಸನಾ "ಚರಣ್ ನಾನು ಕಾಮನ್ ಫ್ರೆಂಡ್ಸ್ ಮೂಲಕ ಭೇಟಿ ಆಗಿದ್ದೆವು. ನಮ್ಮ ಸ್ನೇಹ ಪ್ರೀತಿಯಾಗಿ ಬದಲಾಗಿ ಮದುವೆ ಆಗಲು ನಿರ್ಧರಿಸಿದೆವು. ನಮ್ಮ ಕುಟುಂಬದ ಹಿನ್ನೆಲೆ ಬೇರೆ ಬೇರೆ ಆಗಿದ್ದರೂ ಒಬ್ಬರ ಮೇಲೆ ಒಬ್ಬರಿಗೆ ಇರುವ ನಂಬಿಕೆ, ಗೌರವ, ಪ್ರೀತಿಯಿಂದ ಆ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡೆವು. ಚಿಕ್ಕಂದಿನಿಂದ ಪ್ರತಿಯೊಬ್ಬರೂ ನನ್ನನ್ನು ಯಾವುದೋ ಒಂದು ವಿಷಯದಲ್ಲಿ ಜಡ್ಜ್ ಮಾಡುತ್ತಲೇ ಇದ್ದಾರೆ. ಸಮಾಜದಲ್ಲಿ ಬಹಳ ಮಂದಿ ಇಂತಹ ವಿಮರ್ಶೆಗಳನ್ನು ಎದುರಿಸುತ್ತಿರುವವರೇ."

RRR Actor Ramcharan Wife Upasana Kamineni Konidela reacts to being body shamed at her wedding

"ಮದುವೆಯಾದ ಹೊಸದರಲ್ಲಿ ನಾನು ಬಾಡಿ ಶೇಮಿಂಗ್ ಕಾಮೆಂಟ್‌ಗಳನ್ನು ಎದುರಿಸಿದ್ದೇನೆ. ನಾನು ಬಹಳ ದಪ್ಪ ಇದ್ದೀನಿ, ಸುಂದರವಾಗಿ ಇಲ್ಲ ಎಂದರು. ಮತ್ತೆ ಕೆಲವರು ರಾಮ್‌ಚರಣ್ ಕೇವಲ ಹಣಕ್ಕಾಗಿ ನನ್ನನ್ನು ಮದುವೆ ಆಗಿದ್ದಾನೆ ಎಂದು ಹೇಳಿದ್ದರು. ಅಂತಹವರ ಬಗ್ಗೆ ನಾನು ಮಾತನಾಡಲ್ಲ. ಯಾಕಂದರೆ ನಮ್ಮ ಬಗ್ಗೆ ಅವರಿಗೆ ಏನು ಗೊತ್ತಿಲ್ಲ. ಈಗ ಅವರ ಅಭಿಪ್ರಾಯ ಬದಲಾಗಿದೆ. ಆ ಸಮಯದಲ್ಲಿ ನಾನು ಕುಗ್ಗಲಿಲ್ಲ. ಧೈರ್ಯವಾಗಿ ಅದನ್ನು ಎದುರಿಸಿದೆ. ಅದಕ್ಕೆ ಈಗ ಒಬ್ಬ ಚಾಂಪಿಯನ್ ಅಂದುಕೊಳ್ಳುತ್ತೇನೆ. ಅಂತಹ ಟೀಕೆಗಳಿಂದ ನಾನು ಈಗ ಧೈರ್ಯವಂತೆ ಆಗಿದ್ದೇನೆ"

"ನಾವಿಬ್ಬರು ಪ್ರಾಕ್ಟಿಕಲ್ ಆಗಿ ಆಲೋಚಿಸುತ್ತೇವೆ. ಒಬ್ಬ ವ್ಯಕ್ತಿಯಾಗಿ ಆತ ಪ್ರತಿಸಲ ನನಗೆ ಯಾವುದಾದರೂ ವಿಚಾರದಲ್ಲಿ ಸವಾಲು ಹಾಕುತ್ತಲೇ ಇರುತ್ತಾನೆ. ನಾನು ಕೂಡ ಸವಾಲು ಹಾಕುತ್ತಿದ್ದೆ. ಹೀಗಿರುವಾಗ ನಮ್ಮಿಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ನಮ್ಮಿರದು ವಿಭಿನ್ನವಾದ ಹಿನ್ನಲೆ. ಆದರೆ ನಮ್ಮ ಆಂಟಿ ಹಾಗೂ ಸಹೋದರಿ ಮದುವೆ ವಿಚಾರದ ಪ್ರಮುಖ ಪಾತ್ರ ವಹಿಸಿದರು" ಎಂದು ಉಪಾಸನಾ ವಿವರಿಸಿದ್ದಾರೆ.

'RRR' ಚಿತ್ರದ 'ನಾಟು ನಾಟು' ಸಾಂಗ್ ಶೂಟಿಂಗ್ ವೇಳೆ ನಾನು ರಾಮ್‌ಚರಣ್ ಜೊತೆಗಿದ್ದೆ. ಮಾನಸಿಕವಾಗಿ ಪತಿಗೆ ಧೈರ್ಯ ತುಂಬುತ್ತಿದ್ದೆ. ನನ್ನ ಪತಿ ರಾಮ್‌ಚರಣ್ ಕೂಡ ಸದಾ ನನಗೆ ಬೆಂಬಲವಾಗಿ ನಿಲ್ಲುತ್ತಾರೆ" ಎಂದು ಹೇಳಿದ್ದಾರೆ. 10 ವರ್ಷಗಳ ಹಿಂದೆ ಉಪಸನಾ ಕೊಂಚ ದಪ್ಪಗಿದ್ದರು. ನಂತರ ತೂಕ ಇಳಿಸಿ ಸಣ್ಣಗಾಗಿದ್ದರು. ರಾಮ್‌ಚರಣ್- ಉಪಾಸನಾ ದಂಪತಿ ಶೀಘ್ರದಲ್ಲೇ ಹೊಸ ಅತಿಥಿಯನ್ನು ಮನೆಗೆ ಸ್ವಾಗತಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಟ ಚಿರಂಜೀವಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

RRR Actor Ramcharan Wife Upasana Kamineni Konidela reacts to being body shamed at her wedding

ಇನ್ನು 'RRR' ಸಿನಿಮಾ ಅಂತರಾಷ್ಟ್ರೀಯಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಗೋಲ್ಡನ್ ಗ್ಲೋಬಲ್ ಅವಾರ್ಡ್ ಹಾಗೂ ಆಸ್ಕರ್ ಪ್ರಶಸ್ತಿಗಳನ್ನು ಚಿತ್ರ ಬಾಚಿಕೊಂಡಿತ್ತು. ಈ ಎರಡು ಅವಾರ್ಡ್ ಸೆರಮನಿಗೆ ರಾಮ್‌ಚರಣ್‌ ಜೊತೆ ಉಪಾಸನಾ ಕೂಡ ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಲಂಡನ್ ರೀಜೆಂಟ್ಸ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿರುವ ಉಪಾಸನಾ ಅಪೋಲೊ ಸಮೂಹದ ಅಪೋಲೊ ಲೈಫ್ ವಿಭಾಗದ ಉಪಾಧ್ಯಕ್ಷೆ ಆಗಿದ್ದಾರೆ.

ಸಾಕಷ್ಟು ಸಾಮಾಜಿಕ ಕೆಲಸಗಳ ಮೂಲಕವೂ ಗುರ್ತಿಸಿಕೊಂಡಿದ್ದಾರೆ. ಸದ್ಯ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಚಿತ್ರದಲ್ಲಿ ನಟ ರಾಮ್‌ಚರಣ್ ನಟಿಸ್ತಿದ್ದಾರೆ. ನಂತರ 'ಉಪ್ಪೆನ' ಸಿನಿಮಾ ನಿರ್ದೇಶಕ ಬುಚ್ಚಿಬಾಬು ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟಿದ್ದಾರೆ. ನಂತರ ಕನ್ನಡ ನಿರ್ದೇಶಕ ನರ್ತನ್ ನಿರ್ದೇಶನದ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ.

More from Filmibeat

English summary
RRR Actor Ramcharan Wife Upasana Kamineni Konidela reacts to being body shamed at her wedding. She said that people often commented about her weight and body image. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X