'RRR' ಸಿನಿಮಾ ಚಿತ್ರೀಕರಣಕ್ಕೆ ಅಲಿಯಾ ಭಟ್ ಎಂಟ್ರಿ ಯಾವಾಗ? ಇಲ್ಲಿದೆ ಮಾಹಿತಿ

By ಫಿಲ್ಮ್ ಡೆಸ್ಕ್

ದಕ್ಷಿಣ ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಆರ್ ಆರ್ ಆರ್ ಸಿನಿಮಾ ಸಹ ಒಂದು. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದೆ ಸಿನಿಮಾತಂಡ. ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿರುವ ಆರ್ ಆರ್ ಆರ್ ಟೀಂ ಇತ್ತೀಚಿಗೆ ಜೂ ಎನ್ ಟಿ ಆರ್ ಲುಕ್ ರಿಲೀಸ್ ಮಾಡಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ನಾಯಕ ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ಆದರೆ ಚಿತ್ರೀಕರಣಕ್ಕೆ ಇನ್ನೂ ನಾಯಕಿಯ ಎಂಟ್ರಿಯಾಗಿಲ್ಲ. ಆರ್ ಆರ್ ಆರ್ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ನಟಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಅಲಿಯಾ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ. ಚಿತ್ರೀಕರಣ ಪ್ರಾರಂಭವಾಗಿ ವರ್ಷದ ಮೇಲಾಗಿದೆ. ಆದರೆ ಅಲಿಯಾ ಇನ್ನೂ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ.

ಮೂಲಗಳ ಪ್ರಕಾರ ನಟಿ ಅಲಿಯಾ ಭಟ್ ಮುಂದಿನ ವಾರ ಅಂದರೆ ನವೆಂಬರ್ ಮೊದಲ ವಾರ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದಾರೆ. ಅಲಿಯಾ ಸದ್ಯ ಬಹುನಿರೀಕ್ಷೆಯ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಥಿಯಾವಾಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ಜೊತೆಗೆ ಮುಂದಿನ ವಾರದಿಂದ ಆರ್ ಆರ್ ಆರ್ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಸದ್ಯ ಹೈದರಾಬಾದ್ ನಲ್ಲಿ ನಡೆಯುತ್ತಿದೆ.

 Rrr: Alia Bhatt Will Be Shooting Major Scenes With Ram Charan And Jr NTR

ನಟಿ ಅಲಿಯಾ ಭಟ್ ಮುಂದಿನ ವಾರ ಹೈದರಾಬಾದ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ಅಲಿಯಾ ಭಾಗಿಯಾಗಲಿದ್ದಾರೆ. ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಇಬ್ಬರು ಚಿತ್ರೀಕರಣದಲ್ಲಿ ಇರಲಿದ್ದಾರೆ.

ಈಗಾಗಲೇ ಚಿತ್ರದಿಂದ ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಲುಕ್ ರಿಲೀಸ್ ಮಾಡಲಾಗಿದೆ. ಇನ್ನೂ ನಟಿ ಅಲಿಯಾ ಭಟ್ ಲುಕ್ ಹೇಗಿರಲಿದೆ. ಸಿನಿಮಾದಲ್ಲಿ ಅಲಿಯಾ ಪಾತ್ರ ಯಾವುದು ಎನ್ನುವುದು ಕುತೂಹಲ ಮೂಡಿಸಿದೆ.

More from Filmibeat

English summary
Bollywood Actress Alia Bhatt will be shooting Major Scenes with Ram Charan and Jr NTR.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X