ಚಂದ್ರಬೋಸ್‌ಗೆ ಆಸ್ಕರ್ ವೇದಿಕೆಯಲ್ಲಿ ಮಾತನಾಡಲು ಅವಕಾಶ ಕೊಡಲಿಲ್ವಾ ಕೀರವಾಣಿ?
ನಿರ್ದೇಶಕ ಎಸ್. ಎಸ್ ರಾಜಮೌಳಿ ಮತ್ತವರ ತಂಡ ಆಸ್ಕರ್ ಪ್ರಶಸ್ತಿ ಎತ್ತಿ ಹಿಡಿದು ಇತಿಹಾಸ ನಿರ್ಮಿಸಿದೆ. ಎಂ. ಎಂ ಕೀರವಾಣಿ ಸಂಗೀತದ 'ನಾಟು ನಾಟು' ಗೀತೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇಡೀ ದೇಶವೇ ಈ ಸಾಧನೆಯನ್ನು ಕೊಂಡಾಡುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಮಾತ್ರವಲ್ಲದೇ ಸಿನಿರಸಿಕರು ಅಭಿನಂದನೆಗಳ ಮಹಾಪೂರವನ್ನೆ ಹರಿಸಿದ್ದಾರೆ.
ಸಂಗೀತ ನಿರ್ದೇಶಕ ಕೀರವಾಣಿ ಜೊತೆಗೆ ಹಾಡು ಬರೆದ ಚಂದ್ರಬೋಸ್ ಕೂಡ ಆಸ್ಕರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಆದರೆ ವೇದಿಕೆಯಲ್ಲಿ ಚಂದ್ರಬೋಸ್ ಹೆಚ್ಚು ಮಾತನಾಡಲಿಲ್ಲ. ಕೀರವಾಣಿ ಪ್ರಶಸ್ತಿ ಸ್ವೀಕಾರ ಭಾಷಣ ಮುಗಿಸಿದ ಬಳಿಕ ಕೊನೆಯಲ್ಲಿ 'ನಮಸ್ತೆ' ಎಂದು ಮಾತ್ರ ಹೇಳಿ ಸುಮ್ಮನಾದರು. ಇದು ಕೆಲವರಿಗೆ ಅಚ್ಚರಿ ಎನಿಸಿತ್ತು. ಒಂದು ವರ್ಷ 'ನಾಟು ನಾಟು' ಹಾಡು ಬರೆಯಲು ಕಷ್ಟಪಟ್ಟ ಚಂದ್ರಬೋಸ್ ಯಾಕೆ ಮಾತನಾಡಲಿಲ್ಲ. ಪ್ರಶಸ್ತಿ ಸ್ವೀಕರಿಸಿದ ಸಂಭ್ರಮದಲ್ಲಿ ಮಾತನಾಡಲು ಮರೆತರಾ, ಕೀರವಾಣಿ ಅವಕಾಶ ಕೊಡಲಿಲ್ವಾ? ಎಂದು ಕೆಲವರು ಚರ್ಚೆ ನಡೆಸ್ತಿದ್ದಾರೆ. ಆದರೆ ಅಸಲಿ ಕಾರಣ ಏನು ಎನ್ನುವುದು ಈಗ ರಿವೀಲ್ ಆಗಿದೆ.

ಅಮೆರಿಕಾ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ 95ನೇ ಅಕಾಡೆಮಿ ಅವಾರ್ಡ್ ಸೆರೆಮನಿ ಅದ್ಧೂರಿಯಾಗಿ ನೆರವೇರಿದೆ. 'ನಾಟು ನಾಟು' ಲೈವ್ ಪರ್ಫಾರ್ಮೆನ್ಸ್ ನಂತರ ಪ್ರಶಸ್ತಿ ಘೋಷಣೆ ಆಯಿತು. ಕೂಡಲೇ ರಾಜಮೌಳಿ, ದೀಪಿಕಾ ಪಡುಕೋಣೆ, ಚರಣ್, ತಾರಕ್ ಸೇರಿದಂತೆ ಇಡೀ 'RRR' ಕುಣಿದು ಸಂಭ್ರಮಿಸಿತು. ಪ್ರಶಸ್ತಿ ಎತ್ತಿ ಹಿಡಿದ ಚಂದ್ರಬೋಸ್ ಥಿಯೇಟರ್ ಮೂಲೆ ಮೂಲೆಗೆ ತೋರಿಸುತ್ತಾ ಸಂಭ್ರಮಿಸಿದ್ದರು. ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಹಾಡಿನ ರೂಪದಲ್ಲೇ ಪ್ರಶಸ್ತಿ ಸ್ವೀಕಾರ ಭಾಷಣ ಮಾಡಿದ್ದರು.ಅಂತಹ ಅವಕಾಶ ಮತ್ತೆ ಸಿಗಲ್ಲ, ಚಂದ್ರಬೋಸ್ ಕೂಡ 2 ಮಾತನಾಡಿದ್ದರೆ ಚೆನ್ನಾಗಿತ್ತು ಎಂದು ಕೆಲವರು ಹೇಳುತ್ತಿದ್ದಾರೆ.
ಅಷ್ಟಕ್ಕೂ ಚಂದ್ರಬೋಸ್ ಪ್ರಶಸ್ತಿ ಸ್ವೀಕಾರ ಭಾಷಣ ಮಾಡದಿರಲು ಕಾರಣ ಅಕಾಡೆಮಿ ನಿಯಮ ಎನ್ನುವುದು ಈಗ ಬಹಿರಂಗವಾಗಿದೆ. ಆ ನಿಮಯದ ಪ್ರಕಾರ ಪ್ರಶಸ್ತಿ ಗೆದ್ದವರಿಗೆ ವೇದಿಕೆ ಮೇಲೆ ಹೆಚ್ಚು ಅವಕಾಶ ಸಿಗುವುದಿಲ್ಲ. ಅಕಾಡೆಮಿ ಕೊಟ್ಟ ಕಾಲಾವಕಾಶದಲ್ಲಿ ಭಾಷಣ ಮುಗಿಸಬೇಕು. ಅಂದಹಾಗೆ ಆಸ್ಕರ್ ವಿಜೇತರಿಗೆ ವೇದಿಕೆಯಲ್ಲಿ ಮಾತನಾಡಲು ಕೇವಲ 45 ಸೆಕೆಂಡ್ ಮಾತ್ರ ಅವಕಾಶ ಸಿಗುತ್ತದೆ. ಒಂದು ಕೆಟಗರಿಯಲ್ಲಿ ಗೆದ್ದವರಿಗೆ 45 ಸೆಕೆಂಡ್ ಅಷ್ಟೇ. ಅಂದರೆ ಆ ಕೆಟಗರಿಯಲ್ಲಿ ಎಷ್ಟು ಜನ ಪ್ರಶಸ್ತಿ ಸ್ವೀಕರಿಸಿದರೂ ಒಬ್ಬರಿಗೆ ಮಾತ್ರ 45 ಸೆಕೆಂಡ್ ಮಾತನಾಡುವ ಅವಕಾಶ ಇದೆ. ಇದೇ ಕಾರಣಕ್ಕೆ ಚಂದ್ರಬೋಸ್ ವೇದಿಕೆಯಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ.

ಕೀರವಾಣಿ ಮಾತನಾಡಿ ಮುಗಿಸಿದ ಬಳಿಕ ಕೊನೆಗೆ "ನಮಸ್ತೆ" ಎಂದಷ್ಟೇ ಹೇಳಿ ನಾಟು ನಾಟು ಹಾಡು ಬರೆದ ಚಂದ್ರಬೋಸ್ ಸುಮ್ಮನಾದರು. ಒಂದು ವೇಳೆ ಅವಕಾಶ ಸಿಕ್ಕಿದ್ದರೆ ಅವರು ತಮ್ಮ ವಾಕ್ ಚಾತುರ್ಯದಿಂದ ಹಾಲಿವುಡ್ ಮಂದಿಯನ್ನು ಕೂಡ ಆಕರ್ಷಿಸುತ್ತಿದ್ದರು. ಇನ್ನು ಈ ಆಸ್ಕರ್ ಪ್ರಶಸ್ತಿ ಸ್ವೀಕಾರ ಭಾಷಣದ ಕಾಲಾವಧಿಯನ್ನು 45 ಸೆಕೆಂಡ್‌ಗೆ ಇಳಿಸಿದ್ದರ ಹಿಂದೆ ದೊಡ್ಡ ಇತಿಹಾಸ ಇದೆ. 1942ರಲ್ಲಿ ನಟಿ ಗ್ರೀಗ್ ಗ್ರಾಸನ್ ಅತ್ತುತ್ತಮ ನಟಿ ಪ್ರಶಸ್ತಿ ಪಡೆದು 6 ನಿಮಿಷಗಳ ಕಾಲ ಮಾತನಾಡಿದ್ದರು. ಆ ನಂತರ ಇದನ್ನು 45 ಸೆಕೆಂಡಿಗೆ ಇಳಿಸಲಾಯಿತು.
ಆಸ್ಕರ್ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕಾರ ಭಾಷಣದ ವೇಳೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಹುದು ಎನ್ನುವ ಕಾರಣಕ್ಕೂ ಅಕಾಡೆಮಿ ಇಂತಹ ನಿಮಯ ತಂದಿದೆ. ಕೆಲವರು ಬರೀ ಪ್ರಶಸ್ತಿ ಪಡೆದು "ಥ್ಯಾಂಕ್ಯು" ಹೇಳಿ ಸುಮ್ಮನಾಗಿದ್ದಾರೆ. ಕೆಲವೊಮ್ಮೆ ವೇದಿಕೆ ಮೇಲೆ ವಿಚಿತ್ರ ಪ್ರಸಂಗಗಳು ನಡೆದಿವೆ. 1992ರಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದ ಜಾಕ್ ಪಾಲನ್ಸ್ ಒಂದು ಕೈಯಲ್ಲಿ ಪುಶ್‌ಅಪ್ಸ್ ಮಾಡಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಇಂತಹ ಹತ್ತು ಹಲವು ಕಾರಣಗಳಿಂದ 45 ಸೆಕೆಂಡ್ ಕಾಲಾವಕಾಶವನ್ನು ಮಾತ್ರ ಅಕಾಡೆಮೆ ನೀಡಿದೆ.

ಕೀರವಾಣಿ- ಚಂದ್ರಬೋಸ್ ಮೊದಲೇ ಮಾತನಾಡಿಕೊಂಡಂತೆ ಒಬ್ಬರು ಮಾತ್ರ ಮಾತನಾಡಿದರು. ಚಂದ್ರಬೋಸ್ ಕೊನೆಗೆ "ನಮಸ್ತೆ" ಎಂದು ಹೇಳಿ ಸುಮ್ಮನಾದರು. ಇನ್ನು ಕಾರ್ಯಕ್ರಮದ ಬಳಿಕ ಆಸ್ಕರ್ ಬ್ಯಾಕ್‌ಸ್ಟೇಜ್‌ನಲ್ಲಿ ವಿಜೇತರಿಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುವ ಅವಕಾಶ ಇದೆ. ಅಲ್ಲಿ ಕೀರವಾಣಿ ಜೊತೆಗೆ ಚಂದ್ರಬೋಸ್ ಕೂಡ ಮಾತನಾಡಿದರು.


Click it and Unblock the Notifications











