ಬೆಂಗಳೂರಿನಲ್ಲಿ ನಡೆಯಬೇಕಿದ್ದ RRR ಪ್ರಿ-ರಿಲೀಸ್ ಕಾರ್ಯಕ್ರಮ ರದ್ದು!
ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ 'RRR' ರಿಲೀಸ್‌ಗೆ ಓಮಿಕ್ರಾನ್ ಕಂಟಕ ಎದುರಾಗಿದೆ. ಪೂರ್ವ ನಿಗದಿಯಂತೆ ಜ.7ರಂದು 'RRR' ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ದೇಶದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳಿಂದಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಕಾರಣದಿಂದ ಜ.2ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ರಿ ರಿಲೀಸ್ ಕಾರ್ಯಕ್ರಮಕ್ಕೂ ಬ್ರೇಕ್ ಹಾಕಲಾಗಿದೆ.
ಪ್ರೀ-ರಿಲೀಸ್ ಕಾರ್ಯಕ್ರಮದ ನಿಮಿತ್ತ ಜೂನಿಯರ್ ಎನ್ ಟಿಆರ್, ಆಲಿಯಾ ಭಟ್, ರಾಮ್ ಚರಣ್ ತೇಜ ಸೇರಿದಂತೆ ಇಡೀ ಚಿತ್ರ ತಂಡ ಬೆಂಗಳೂರಿಗೆ ಬರಬೇಕಿತ್ತು. ಜೊತೆಗೆ ಕನ್ನಡದ ಕಲಾವಿದರಿಗೂ ಆಹ್ವಾನ ನೀಡಲಾಗಿತ್ತು.

ಬೆಂಗಳೂರಿನಲ್ಲಿ ನಡೆಯಬೇಕಿದ್ದ RRR ಅದ್ಧೂರಿ ಕಾರ್ಯಕ್ರಮ ಮುಂದೂಡಿಕೆ!
ಆರ್‌ಆರ್‌ಆರ್ ಚಿತ್ರದ ಪ್ರೀ- ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ಸಕಲ ಸಿದ್ಧತೆಗೆ ಚಿತ್ರತಂಡ ಮುಂದಾಗಿತ್ತು. ಜನವರಿ 2ರಂದು ಅದ್ಧೂರಿ ಕಾರ್ಯಮವನ್ನು ನಡೆಸಲು ಯೋಜನೆ ರೂಪಿಸಲಾಗಿತ್ತು. ಈ ಕಾರ್ಯಮದಲ್ಲಿ ಇಡೀ ಚಿತ್ರ ತಂಡ ಭಾಗಿ ಆಗಬೇಕಿತ್ತು. ಆದರೆ ಈ ಈ ಯೋಜನೆ ಸಂಪೂರ್ಣ ತಲೆ ಕೆಳಗಾಗಿದೆ. ಈ ಕಾರ್ಯಕ್ರಮ ರದ್ದಾಗಿದೆ.

ಕನ್ನಡ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು!
ಬೆಂಗಳೂರಿನಲ್ಲಿ ನಡೆಯ ಬೇಕಿದ್ದ RRR ಚಿತ್ರದ ಈ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಕನ್ನಡದ ಸ್ಟಾರ್ ನಟರನ್ನು ಆಹ್ವಾನಿಸಲಾಗಿತ್ತು. ನಟ ಶಿವರಾಜ್‌ಕುಮಾರ್, ಉಪೇಂದ್ರ, ಯಶ್, ಧ್ರುವ ಸರ್ಜಾ ಈ ಕಾರ್ಯಮಕ್ಕೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಇನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಬೇಕಿತ್ತು. ಆದರೆ ಸದ್ಯ ಈ ಕಾರ್ಯಕ್ರಮ ರದ್ದಾಗಿದೆ. ಕರ್ನಾಟಕದಲ್ಲಿಯೂ ಜನವರಿ 7ನೇ ತಾರೀಕಿನ ವರೆಗೂ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ.

ಜನವರಿ 7ರಂದು ಚಿತ್ರ ರಿಲೀಸ್ ಇಲ್ಲ!
RRR ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇದ್ದರೂ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಹಿಂದೇಟು ಹಾಕಿದೆ. ಅನಿವಾರ್ಯವಾಗಿ ಚಿತ್ರವನ್ನು ಮುಂದೂಡಲಾಗಿದೆ. ಈ ಬಗ್ಗೆ ಟಾಲಿವುಡ್‌ನಲ್ಲಿ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಶನಿವಾರ ಸಂಜೆ RRR ಚಿತ್ರ ಬಿಡುಗಡೆ ಮುಂದೂಡಿರುವ ಬಗ್ಗೆ ಅಧಿಕೃತ ಮಾಹಿತಿ ಪ್ರಕಟಿಸಿದೆ.

ದೇಶದಾದ್ಯಂತ RRR ಪ್ರಚಾರ ಕಾರ್ಯ!
ಇನ್ನು RRR ಟೀಂ ಚಿತ್ರದ ಪ್ರಚಾರ ಕಾರ್ಯವನ್ನು ಹೆಚ್ಚಿನ ಮುತುವರ್ಜಿ ವಹಿಸಿ ಮಾಡುತ್ತಿದೆ. ಈಗಾಗಲೇ ಕೇರಳ ಮತ್ತು ಚೆನ್ನೈನಲ್ಲಿ ಆರ್‌ಆರ್‌ಆರ್ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ನೆರವೇರಿದೆ. ಹಾಗಾಗಿ ಜನವರಿ 2ರಂದು ಕರ್ನಾಟಕದಲ್ಲಿ ಕಾರ್ಯಕ್ರಮ ಮಾಡಲು ಚಿತ್ರತಂಡ ಮುಂದಾಗಿತ್ತು. ಇನ್ನು ಪ್ರಚಾರಕ್ಕಾಗಿಯೇ ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತಿದೆ. 25 ರಿಂದ 30 ಕೋಟಿ ಹಣವನ್ನು ಕೇವಲ ಚಿತ್ರದ ಪ್ರಚಾರಕ್ಕಾಗಿಯೇ ಖರ್ಚು ಮಾಡಲಾಗಿದೆ ಎಂದು ವರದಿ ಆಗಿದೆ.


Click it and Unblock the Notifications











