RRR Box Office Prediction : ಆರ್​​ಆರ್​ಆರ್ ಸಿನಿಮಾದ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ಖ್ಯಾತ ಜೋತಿಷಿ!

'RRR' ಸಿನಿಮಾ ಇಂದು ತೆರೆಯಲ್ಲಿ ಅಬ್ಬರಿಸಿದೆ. 'RRR' ಸಿನಿಮಾವನ್ನು ಜನ ಮುಗಿಬಿದ್ದು ನೋಡುತ್ತಿದ್ದಾರೆ. ಜೂ.ಎನ್‌ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ಹಲವು ತಾರಗಣದ ಈ ಸಿನಿಮಾ ಜನರ ನಿರೀಕ್ಷೆಯನ್ನು ಮುಟ್ಟುತ್ತಿದೆ.

ಕಲೆಕ್ಷನ್ ವಿಚಾರದಲ್ಲೂ ಸುದ್ದಿಯಾಗಿರುವ ಈ ಸಿನಿಮಾ ಮೊದಲ ದಿನದ ಲೆಕ್ಕಾಚಾರವೇ ಜನರ ಹುಬ್ಬೇರಿಸಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ, ಜೊತೆಗೆ ರಾಜಮೌಳಿ ನಿರ್ದೇಶನದ ಚಿತ್ರ ಆಗಿರೋದ್ರಿಂದ ಚಿತ್ರಮೇಲೆ ಸಾಕಷ್ಟು ನಿರೀಕ್ಷೆಗಳಿತ್ತು. ಈ ನಿರೀಕ್ಷೆಯಂತೆ ಇವತ್ತು ಸಿನಿಮಾ ಬಿಗ್ ಒಪನಿಂಗ್ ಪಡೆದುಕೊಂಡಿದೆ.

ಇನ್ನು ಇಂದೇ ಸಿನಿಮಾ ನೋಡಿದ ಹಲವರು ಸಿನಿಮಾದ ಬಗ್ಗೆ ವಿಮರ್ಶೆ ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 'RRR' ಸಿನಿಮಾದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಖ್ಯಾತ ಜೋತಿಷಿ ಯೊಬ್ಬರು 'RRR' ಸಿನಿಮಾದ ಬಗ್ಗೆ ಭವಿಷ್ಯ ಮಾಡಿದ್ದಾರೆ.

Recommended Video

RRR Collection | ರಿಲೀಸ್ ಗೂ ಮುಂಚೆ 500 ಕೋಟಿ ಬಾಚಿಕೊಂಡಿದೆ RRR | Jr NTR | Ram Charan
'RRR' ಸಿನಿಮಾದ ಬಗ್ಗೆ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ

'RRR' ಸಿನಿಮಾದ ಬಗ್ಗೆ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ

ಬಾಹುಬಲಿ 2 ಸಿನಿಮಾದ ಬಳಿಕ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'RRR'. ಹೀಗಾಗಿ ಈ ಸಿನಿಮಾದ ಬಗ್ಗೆ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಇತ್ತು. ಅದರಲ್ಲೂ ಚಿತ್ರದಲ್ಲಿ ಜೂ.ಎನ್‌ಟಿಆರ್, ರಾಮ್ ಚರಣ್ ಜೊತೆಗೆ ಬಾಲಿವುಡ್ ತಾರೆಯರು ಕೂಡ ಮಿಂಚಿದ್ದಾರೆ. ಸಾಕಷ್ಟು ಕಾರಣಕ್ಕೆ ಮೊದಲಿನಿಂದಲೂ ನಿರೀಕ್ಷೆ ಹುಟ್ಟಿಸಿದ್ದ 'RRR' ಸಿನಿಮಾ ಇಂದು ರಿಲೀಸ್ ಆಗಿ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಹಾಗೆ ಸಾಕಷ್ಟು ಮಂದಿ 'RRR' ಸಿನಿಮಾ ವಿಮರ್ಶೆ ಮಾಡಿದ್ದಾರೆ. ವಿಶೇಷ ಅಂದ್ರೆ ಸೆಲೆಬ್ರಿಟಿ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಕೂಡ ಚಿತ್ರದ ಭವಿಷ್ ನುಡಿದಿದ್ದಾರೆ.

ಬೇರೆ ಸಿನಿಮಾ ಮಾಡದ ದಾಖಲೆಯನ್ನು ಮಾಡಲಿದೆ

ಬೇರೆ ಸಿನಿಮಾ ಮಾಡದ ದಾಖಲೆಯನ್ನು ಮಾಡಲಿದೆ

ಸೆಲೆಬ್ರೆಟಿ ಜೊತಿಷಿ ಎಂದೇ ಖ್ಯಾತರಾಗಿರುವ ಇವರು ಸಾಕಷ್ಟು ಸಿನಿಮಾಗಳಿಗೆ ತಮ್ಮದೇ ರೀತಿಯಲ್ಲಿ ಭವಿಷ್ಯ ನುಡಿದಿದ್ದಾರೆ. ಇದೀಗ 'RRR' ಸಿನಿಮಾದ ಬಗ್ಗೆ ಪಂಡಿತ್ ಜಗನ್ನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ಇಂದು ಬಿಡುಗಡೆಯಾಗಿರುವ 'RRR' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬೇರೆ ಯಾವ ಸಿನಿಮಾವು ಮಾಡದ ದಾಖಲೆಯನ್ನು ಮಾಡಲಿದೆ ಎಂದು ಹೇಳಿದ್ದಾರೆ.

ಸಾಕಷ್ಟು ವಿಚಾರದಲ್ಲಿ ಈ ಸಿನಿಮಾ ಜನರನ್ನು ಆಕರ್ಷಿಸಿದೆ

ಸಾಕಷ್ಟು ವಿಚಾರದಲ್ಲಿ ಈ ಸಿನಿಮಾ ಜನರನ್ನು ಆಕರ್ಷಿಸಿದೆ

ಮಾತು ಮುಂದುವರೆಸಿ "ಇಂತಹ ದೊಡ್ಡ ತಾರಾಗಣವಿರುವ ಚಿತ್ರ ಜನರನ್ನು ಸೆಳೆಯುವಲ್ಲಿ ವಿಫಲ ಆಗುತ್ತೆ ಅನ್ನೋದು ಸುಲಭವಲ್ಲ. ಖಂಡಿತಾ ಈ ಸಿನಿಮಾವನ್ನು ಜನರು ಇಷ್ಟ ಪಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಇಬ್ಬರೂ ನಟರು ಅವರದ್ದೇ ಆದ ಫ್ಯಾನ್ ಬೇಸ್ ಹೊಂದಿದ್ದಾರೆ. ಪ್ರಸ್ತುತ ಬಾಲಿವುಡ್‌ನ ಟಾಪ್ ನಟಿ ಆಲಿಯಾ ಭಟ್ ಮತ್ತು ಸೂಪರ್‌ಸ್ಟಾರ್ ಅಜಯ್ ದೇವಗನ್ ಕೂಡ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ವಿಚಾರದಲ್ಲಿ ಈ ಸಿನಿಮಾ ಜನರನ್ನು ಆಕರ್ಷಿಸಲಿದೆ. ಹೀಗಾಗಿ ಗಲ್ಲಾಪೆಟ್ಟಿಗೆಯಲ್ಲಿ ಖಂಡಿತಾ ಅಂದುಕೊಂಡಿದ್ದಕಿಂತಲೂ ಹೆಚ್ಚು ಕಲೆಕ್ಷನ್ ಮಾಡುತ್ತೆ" ಎಂದಿದ್ದಾರೆ.

ಈ ಸಿನಿಮಾಗೆ ಕಂಟಕ ಕೂಡ ಎದುರಾಗುತ್ತೆ

ಈ ಸಿನಿಮಾಗೆ ಕಂಟಕ ಕೂಡ ಎದುರಾಗುತ್ತೆ

ಮುಂದುವರೆದು ಮಾತನಾಡಿದ ಪಂಡಿತ್ ಜಗನ್ನಾಥ್ ಗುರೂಜಿ ಅವರು "ಬಾಕ್ಸ್ ಆಫೀಸ್‌ನಲ್ಲಿ ಊಹೆಗೂ ಮೀರಿ ಕಲೆಕ್ಷನ್ ಮಾಡುವ ಈ ಸಿನಿಮಾಗೆ ಕಂಟಕ ಕೂಡ ಎದುರಾಗುತ್ತೆ. ಕೆಲವು ದಿನಗಳ ನಂತರ 'RRR' ಸುತ್ತಾ ಸ್ವಲ್ಪ ವಿವಾದ ಉಂಟಾಗಬಹುದು, ಆದರೆ ಯಾವುದೂ ಚಿತ್ರದ ಯಶಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲಾ, ಜನರ ಆಸಕ್ತಿಯನ್ನು ತಗ್ಗಿಸೋದಿಲ್ಲಾ. ರಾಜಮೌಳಿ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಸಾಮರ್ಥ್ಯ ಚಿತ್ರದ ಗೆಲುವಿಗೆ ಕಾರಣವಾಗಿದೆ" ಎಂದಿದ್ದಾರೆ.

ಆಲಿಯಾ ಭಟ್ ಅವರು ನಿಜವಾದ ಅದೃಷ್ಟಶಾಲಿ ನಟಿ

ಆಲಿಯಾ ಭಟ್ ಅವರು ನಿಜವಾದ ಅದೃಷ್ಟಶಾಲಿ ನಟಿ

ಇನ್ನು ಆಲಿಯಾ ಭಟ್ ಬಗ್ಗೆ ಮಾತನಾಡಿರುವ ಪಂಡಿತ್ ಜಗನ್ನಾಥ್ ಗುರೂಜಿ "ಹೌದು, ಆಲಿಯಾ ಭಟ್ ಅವರು ನಿಜವಾದ ಅದೃಷ್ಟಶಾಲಿ ನಟಿ. ಈ ಸಿನಿಮಾದ ಮೂಲಕ ಅವರು ಸೌತ್‌ನಲ್ಲಿ ತಮ್ಮದೇ ಛಾಪು ಮೂಡಿಸುತ್ತಾರೆ. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚೆಚ್ಚು ಅವಕಾಶಗಳು ಸೌತ್‌ನಿಂದ ಅರಸಿಕೊಂಡು ಬರುತ್ತೆ. ಇವರು ನಟಿಸುವ ಪ್ರತೀ ಸಿನಿಮಾವೂ ಹಿಟ್ ಲಿಸ್ಟ್ ಸೇರುತ್ತೆ" ಎಂದಿದ್ದಾರೆ. ಹೀಗೆ ಚಿತ್ರದ ಬಗ್ಗೆ ಭವಿಷ್ಯ ನುಡಿದಿರುವ ಪಂಡಿತ್ ಜಗನ್ನಾಥ್ ಗುರೂಜಿ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡೋದರ ಜೊತೆಗೆ ಚಿತ್ರಕ್ಕೆ ಕಾಂಟ್ರೊವರ್ಸಿ ಕೂಡ ಸುತ್ತಿಕೊಳ್ಳುತ್ತೆ ಅಂದಿರೋದು ಚಿತ್ರತಂಡದವರ ತಲೆಗೆ ಹುಳಬಿಟ್ಟಂತಾಗಿದೆ.

More from Filmibeat

English summary
Astrologer Pandit Jagannath Guruji predicted box office collection of RRR movie. Here is what he said about the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X