For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ದಾಖಲೆ ಮುರಿಯಲು ವಿಫಲವಾದ 'ಆರ್‌ಆರ್‌ಆರ್‌'

  |

  ತೆಲುಗಿನ ಬಹುನಿರೀಕ್ಷಿತ ಸಿನಿಮಾ 'ಆರ್ಆರ್ಆರ್' ಅಕ್ಟೋಬರ್ 13 ರಂದು ಬಿಡುಗಡೆ ಆಗಲಿದೆ. ಆರ್ಆರ್ಆರ್ ಸಿನಿಮಾದ ಮೇಲೆ ಹಲವು ನಿರೀಕ್ಷೆಗಳಿವೆ, ಬಾಹುಬಲಿ ಸಿನಿಮಾದ ದಾಖಲೆಗಳನ್ನು ಪುಡಿಗಟ್ಟಲಿದೆ ಎನ್ನಲಾಗುತ್ತಿದೆ.

  ಆದರೆ ಯಾಕೋ ಆರ್ಆರ್ಆರ್ ಸಿನಿಮಾ ಬಾಹುಬಲಿ ಸಾಧಿಸಿದ ಯಶಸ್ಸನ್ನು ಸಾಧಿಸುದಿಲ್ಲವೇನೋ ಎಂಬ ಅನುಮಾನ ಈಗಿನಿಂದಲೇ ಕಾಡಲು ಪ್ರಾರಂಭವಾಗಿದೆ. ಅದಕ್ಕೆ ಕಾರಣವೂ ಇದೆ.

  ಬಾಹುಬಲಿ ಸಿನಿಮಾದ ದಾಖಲೆಯೊಂದನ್ನು ಮುರಿಯಲು ಈಗಾಗಲೇ ವಿಫಲವಾಗಿದೆ ಆರ್ಆರ್ಆರ್ ಸಿನಿಮಾ. ಬಾಹುಬಲಿ ಸಿನಿಮಾದ ಪ್ರದರ್ಶನ ಹಕ್ಕು ತಮಿಳುನಾಡಿನಲ್ಲಿ ದೊಡ್ಡ್ ಮೊತ್ತಕ್ಕೆ ಮಾರಾಟವಾಗಿತ್ತು. ಆದರೆ ಆ ದಾಖಲೆಯನ್ನು ಮುರಿಯಲು ಆರ್ಆರ್ಆರ್ ವಿಫಲವಾಗಿದೆ.

  ಬಾಹುಬಲಿ ಸಿನಿಮಾ ಮಾರಾಟವಾಗಿದ್ದು ಯಾವ ಮೊತ್ತಕ್ಕೆ?

  ಬಾಹುಬಲಿ ಸಿನಿಮಾ ಮಾರಾಟವಾಗಿದ್ದು ಯಾವ ಮೊತ್ತಕ್ಕೆ?

  ಬಾಹುಬಲಿ ಸಿನಿಮಾವನ್ನು ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು 47 ಕೋಟಿ ರೂಪಾಯಿ ಹಣ ಕೊಟ್ಟು ಖರೀದಿಸಲಾಗಿತ್ತು. ಆರ್ಆರ್ಆರ್ ಸಿನಿಮಾದ ಹಕ್ಕು ಇನ್ನೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಲಿದೆ ಎನ್ನಲಾಗಿತ್ತು, ಆದರೆ ಅದು ಸಾಧ್ಯವಾಗಿಲ್ಲ.

  42 ಕೋಟಿಗೆ ವಿತರಣೆ ಹಕ್ಕು ಮಾರಾಟ

  42 ಕೋಟಿಗೆ ವಿತರಣೆ ಹಕ್ಕು ಮಾರಾಟ

  ಆರ್ಆರ್ಆರ್ ಸಿನಿಮಾ ತಮಿಳುನಾಡು ಪ್ರದರ್ಶನ ಹಕ್ಕನ್ನು ಲೈಕಾ ಹೌಸ್‌ನವರು ಕೊಂಡು ಕೊಂಡಿದ್ದು, ಹಕ್ಕು ಖರೀದಿಗೆ ನೀಡಿರುವ ಮೊತ್ತ 42 ಕೋಟಿ ರೂಪಾಯಿಗಳು. ಇದೇ ಲೈಕಾ ಹೌಸ್ ಈ ಮೊದಲು ವಡಾ ಚೆನ್ನೈ, ದರ್ಬಾರ್ ಇನ್ನೂ ಹಲವು ಪ್ರಮುಖ ಸಿನಿಮಾಗಳನ್ನು ವಿತರಣೆ ಮಾಡಿತ್ತು.

  ಸ್ಪರ್ಧೆ ಒಡ್ಡಲು ಸಿನಿಮಾಗಳಿವೆ

  ಸ್ಪರ್ಧೆ ಒಡ್ಡಲು ಸಿನಿಮಾಗಳಿವೆ

  ಅನ್‌ಲಾಕ್‌ ನ ನಂತರ ಸ್ಟಾರ್ ಹೀರೋಗಳ ಸಿನಿಮಾಗಳು ಸರತಿ ಸಾಲಿನಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಆರ್ಆರ್ಆರ್ ಸಿನಿಮಾಕ್ಕೆ ಬೇರೆ ಸಿನಿಮಾಗಳು ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಆರ್ಆರ್ಆರ್ ನಂತರವೂ ಹಲವು ಸಿನಿಮಾಗಳು ಸರತಿಯಲ್ಲಿ ಬಿಡುಗಡೆ ಆಗಲಿದ್ದು, ಆರ್ಆರ್ಆರ್ ಸಿನಿಮಾ ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ಇರುವುದಿಲ್ಲ ಎನ್ನಲಾಗುತ್ತಿದೆ

  ಹಾಡಲ್ಲೇ ಹೀಗೆ ಇನ್ನೂ ಸಿನಿಮಾ ಹೇಗಿರುತ್ತೊ..? | Pogaru | Filmibeat Kannada
  ರಾಜಮೌಳಿ ನಿರ್ದೇಶಿಸಿರುವ ಸಿನಿಮಾ

  ರಾಜಮೌಳಿ ನಿರ್ದೇಶಿಸಿರುವ ಸಿನಿಮಾ

  ಇನ್ನು ಆರ್ಆರ್ಆರ್ ಸಿನಿಮಾವನ್ನು ಬಾಹುಬಲಿ ನಿರ್ದೇಶಿಸಿದ್ದ ರಾಜಮೌಳಿಯೇ ನಿರ್ದೇಶಿಸಿದ್ದಾರೆ. ಜೂ.ಎನ್‌ಟಿಆರ್, ರಾಮ್ ಚರಣ್ ತೇಜ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್, ಒಲಿವಿಯಾ ಮೋರಿಸ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಅಜಯ್ ದೇವಗನ್ ಸಹ ನಟಿಸಿದ್ದಾರೆ.

  English summary
  RRR movie fail to beat record set by Bahubali. This movie's distrubution rights sold for 47 crore in Tamil Nadu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X