RRR Piracy: ಆನ್ ಲೈನ್‌ನಲ್ಲಿ RRR ಫುಲ್ ಸಿನಿಮಾ ಲೀಕ್!
'RRR' ಚಿತ್ರ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಮೊದಲ ದಿನವೇ ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆದಿದೆ. ಸಾಲು, ಸಾಲು ರೆಕಾರ್ಡ್ ಮಾಡಲು ಸಜ್ಜಾಗಿರುವ ಈ ಚಿತ್ರಕ್ಕೀಗ ದೊಡ್ಡ ಸಂಕಷ್ಟ ಎದುರಾಗಿದೆ.
ಯಾವುದೋ ಒಂದು ದೊಡ್ಡ ಚಿತ್ರ ರಿಲೀಸ್ ಆಗುತ್ತದೆ ಎಂದರೆ ಆ ಚಿತ್ರಕ್ಕೆ ಪೈರಸಿ ಭಯ ಇದ್ದೇ ಇರುತ್ತದೆ. ಇದೇ ರೀತಿ RRR ಚಿತ್ರಕ್ಕೂ ಈಗ ಪೈರಸಿ ಸಮಸ್ಯೆ ಎದುರಾಗಿದೆ. ಸಿನಿಮಾ ರಿಲೀಸ್ ಆದ ದಿನವೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಪೈರಸಿ ಸಿನಿಮಾ ಒದಗಿಸುವ ಫಿಲ್ಮಿವ್ಯಾಪ್, ತಮಿಳ್‌ರಾಕರ್ಸ್, ಮೂವಿರೂಲ್ಸ್ ಸಹಿತ ಹಲವು ತಾಣಗಳಲ್ಲಿ ಪೂರ್ತಿ ಸಿನಿಮಾ ಲಭ್ಯವಾಗಿದೆ ಎಂದು ಡಿಎನ್‌ಎ ವರದಿ ಮಾಡಿದೆ.
ಆದರೆ RRR ಅಂತಹ ಚಿತ್ರದ ಪೈರಸಿ ಕಾಪಿ ನೋಡಿದರೆ ಏನು ಪ್ರಯೋಜನ ಇಲ್ಲ. ಯಾಕೆಂದರೆ ಆ ದೃಶ್ಯ ವೈಭವವನ್ನು ಚಿತ್ರಮಂದಿರದ ದೊಡ್ಡ ಪರದೇ ಮೇಲೆ ನೋಡಿದರೆ, ಅದರ ಪೂರ್ಣ ಅನುಭವ ಪಡೆಯಬಹುದು. ಆದರೆ ಪೈರಸಿ ಯಾವುದೇ ಸಿನಿಮಾಕ್ಕೆ ಕಂಟಕವೇ. ಹಾಗಾಗಿ 'ಆರ್ ಆರ್ ಆರ್' ಚಿತ್ರದ ಕುರಿತು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಉತ್ತಮ ವಿಮರ್ಶೆ ಹಂಚಿಕೊಂಡಿದ್ದು, ಈ ಚಿತ್ರ ಪೈರಸಿ ಕಾಪಿಯನ್ನು ನೋಡಬೇಡಿ ಎಂದು ಮನವಿ ಮಾಡಿದ್ದಾರೆ.

ಆದರೆ ಈ ಚಿತ್ರದ ಪೈರಸಿ ಚಿತ್ರದ ಕಲೆಕ್ಷನ್ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವ ಸೂಚನೆ ಇಲ್ಲ. ಈಗಾಗಲೇ ಸಾಕಷ್ಟು ಟಿಕೆಟ್‌ಗಳು ಮುಂಗಡ ಬುಕ್ಕಿಂಗ್ ಆಗಿವೆ. ಮೊದಲ ದಿನವೇ ಬಾಕ್ಸಾಫೀಸ್ RRR ದೂಳೆಬ್ಬಿಸಿದೆ. ಮೊದಲ ವಾರಾತ್ಯಂತ ಒಳಗೆ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿ ಮತ್ತೊಂದು ದಾಖಲೆ ಮಾಡಲಿದೆ ಎನ್ನಲಾಗುತ್ತಿದೆ. ಹಾಗಾಗಿ ಪೈರಸಿ ಅಷ್ಟು ದೊಡ್ಡ ಮಟ್ಟರದಲ್ಲಿ ಈ ಚಿತ್ರಕ್ಕೆ ತೊಂದರೆ ಕೊಡಲಾರದು.
Recommended Video

ಇನ್ನು ಇತ್ತೀಚೆಗೆ ಬಿಡುಗಡೆಯಾದ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ರಾಧೇ ಶ್ಯಾಮ್' ಚಿತ್ರ ಕೂಡ ಪೈರಸಿಗೆ ಸಿಲುಕಿತ್ತು. ಕೊರೊನಾ ಲಾಕ್ ಡೌನ್ ಬಳಿಕ ರಿಲೀಸ್ ಆದ ಬಹುತೇಕ ಚಿತ್ರಗಳು ಪೈರಸಿ ಸಮಸ್ಯೆಯನ್ನು ಎದುರಿಸಿವೆ. ಅದರಲ್ಲಿ ಕನ್ನಡದ 'ಏಕ್ ಲವ್ ಯಾ', ತೆಲುಗಿನ ಅಖಂಡ, ಪುಷ್ಪ ಚಿತ್ರಗಳು ಕೂಡ ಸಾಲಿನಲ್ಲಿ ಇವೆ. ದೊಡ್ಡ ದೊಡ್ಡ ಚಿತ್ರಗಳು ಏನೇ ಪ್ರಯತ್ನ ಪಟ್ಟರು ಪೈರಸಿಯನ್ನು ತಡೆಯಲುವ ಸಾಧ್ಯವೇ ಆಗುತ್ತಿಲ್ಲ.


Click it and Unblock the Notifications











