RRR: ಹೊರ ಬಂತು ಹೊಸ ರಿಲೀಸ್ ದಿನಾಂಕ!

ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವುದು ಸಿನಿಮಾ ಮಂದಿಗೆ ದೊಡ್ಡ ತಲೆ ನೋವು ಆಗಿದೆ. ಇದರಿಂದ ಸಿನಿಮಾ ಶೂಟಿಂಗ್, ಸಿನಿಮಾ ರಿಲೀಸ್, ಸಿನಿಮಾ ಕಾರ್ಯಕ್ರಮಗಳಿಗೆ ಸಾಕಷ್ಟು ತೊಂದರೆ ಆಗುತ್ತಲಿರುವುದಂತೂ ಹೌದು. ಇದೇ ಕಾರಣಕ್ಕೆ ಭಾರತೀಯ ಚಿತ್ರ ರಂಗದ ಬಹು ದೊಡ್ಡ ನಿರೀಕ್ಷಿತ ಚಿತ್ರ RRR ರಿಲೀಸ್‌ ಪೋಸ್ಟ್‌ ಪೋನ್‌ ಆಗಿದೆ.

ಆರ್‌ಆರ್‌ಆರ್‌ ರಿಲೀಸ್‌ ಪೋಸ್ಟ್‌ ಪೋನ್ ಅಭಿಮಾನಿಗಳಲ್ಲಿ, ಸಿನಿಮಾ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಆದರೆ ಕೊರೊನಾ ಹೆಚ್ಚಾದ ಕಾರಣ ಚಿತ್ರವನ್ನು ಪೋಸ್ಟ್‌ ಪೋನ್‌ ಮಾಡುವುದು ಅನಿವಾರ್ಯ ಆಗಿತ್ತು. ಆದರೆ ಸಿನಿಮಾ ಮತ್ತೆ ಯಾವಾಗ ರಿಲೀಸ್‌ ಎನ್ನುವ ಬಗ್ಗೆ ಚಿತ್ರ ತಂಡ ಮಾಹಿತಿ ನೀಡಿರಲಿಲ್ಲ.

ಜನವರಿ 7ಕ್ಕೆ ರಿಲೀಸ್ ಆಗ್ಬೇಕಿದ್ದ RRR ಚಿತ್ರ ಮುಂದೆ ಹೋಗಿದೆ. ಆದರೆ ಈಗ ಆರ್‌ಆರ್‌ಆರ್‌ ಬಳದಲ್ಲಿ ನಡೆಯುತ್ತಿರುವ ಚರ್ಚೆಯ ಬಗ್ಗೆ ಸುದ್ದಿ ಒಂದು ಹೊರ ಬಂದಿದೆ. ಆರ್‌ಆರ್‌ಆರ್‌ ಚಿತ್ರದ ರಿಲೀಸ್‌ ಯಾವಾಗ ಎನ್ನುವ ವಿಚಾರ ಚರ್ಚೆ ಆಗುತ್ತಿದೆ. ಇದೇ ವರ್ಷ ಈದ್ ಹಬ್ಬದ ಪ್ರಯುಕ್ತ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಏಪ್ರಿಲ್ 29ಕ್ಕೆ RRR ರಿಲೀಸ್?

ಏಪ್ರಿಲ್ 29ಕ್ಕೆ RRR ರಿಲೀಸ್?

RRR ಚಿತ್ರ ತಂಡ ಈದ್ ಹಬ್ಬದಂದು ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಪ್ರಕರಣಗಳು ಕಡಿಮೆಯಾಗುತ್ತಿವೆ ಹಾಗಾಗಿ ಚಿತ್ರವನ್ನು ರಿಲೀಸ್‌ ಮಾಡುವ ಪ್ಲ್ಯಾನ್ ಮಾಡುತ್ತಿದೆಯಂತೆ ಚಿತ್ರತಂಡ. ಮಾರ್ಚ್ ತಿಂಗಳ ಒಳಗೆ ಪರಿಸ್ಥಿತಿ ತಿಳಿಯಾದರೆ ಚಿತ್ರನ್ನು ಏಪ್ರಿಲ್‌ನಲ್ಲಿ ರಿಲೀಸ್‌ ಮಾಡುವ ಯೋಚನೆ ಮಾಡಿದೆ ಅಂತೆ ಚಿತ್ರ ತಂಡ. RRR ಚಿತ್ರಕ್ಕೆ ಅತೀ ಹೆಚ್ಚು ಬಂಡವಾಳ ಹೂಡಿಕೆ ಮಾಡಲಾಗಿದೆ. ಹಾಗಾಗಿ ಚಿತ್ರವನ್ನು ಸುಲಭವಾಗಿ ಬಿಟ್ಟು ಕೊಡಲು ನಿರ್ಮಾಪಕರು ಸಿದ್ಧರಿಲ್ಲ. ಈಗಾಗಲೇ ಆರ್ ಆರ್ ಆರ್ ಚಿತ್ರ ದೇಶದೆಲ್ಲೆಡೆ ಸುತ್ತಿ ರೀಲಿಸ್ ಪ್ರಚಾರ ಕಾರ್ಯಗಳನ್ನು ಮಾಡಿ ಮುಗಿಸಿದೆ. ಏಪ್ರಿಲ್ 29ರಂದು ಅಂದರೇ ಈದ್ ಹಬ್ಬದಂದು ತೆರೆ ಕಾಣಲಿದೆ ಎನ್ನಲಾಗುತ್ತಿದೆ.

ಏಪ್ರಿಲ್ 29ಕ್ಕೆ ಬರಲಿವೆ ಬಾಲಿವುಡ್ ಬಿಗ್ ಚಿತ್ರಗಳು!

ಏಪ್ರಿಲ್ 29ಕ್ಕೆ ಬರಲಿವೆ ಬಾಲಿವುಡ್ ಬಿಗ್ ಚಿತ್ರಗಳು!

ಈಗಾಗಲೇ ಒಂದಷ್ಟು ಚಿತ್ರಗಳು ರಿಲೀಸ್‌ ದಿನಾಂಕವನ್ನು ಮುಂಚೂಣಿಯಾಗಿ ನಿಗದಿ ಮಾಡಿಕೊಂಡಿವೆ. ಅಜಯ್ ದೇವಗನ್ ನಿರ್ದೇಶನದ 'ರನ್ ವೇ' ಮತ್ತು ಟೈಗರ್ ಶ್ರಾಫ್ ನಟನೆಯ 'ಹೀರೋಪಂತಿ 2' ಚಿತ್ರಗಳು ಏಪ್ರಿಲ್ 29ರ ಮೇಲೆ ಕಣ್ಣಿಟ್ಟಿವೆ. ಹಾಗೇನಾದರು RRR ಏಪ್ರಿಲ್ 29ಕ್ಕೆ ರಿಲೀಸ್ ಆದರೆ ದೊಡ್ಡ ಮಟ್ಟದಲ್ಲಿ ಕ್ಲ್ಯಾಶ್ ಆಗುವುದಂತೂ ಖಚಿತ ಎನ್ನಲಾಗುತ್ತಿದೆ. ಒಂದು RRR ಬೇರೆ ರಿಲೀಸ್ ದಿನಾಂಕ ನೋಡಿಕೊಳ್ಳಬೇಕು. ಅಥವಾ ಈ ಚಿತ್ರಗಳು ಅನಿವಾರ್ಯವಾಗಿ ಪೋಸ್ಟ್ ಪೋನ್ ಆಗಬೇಕು.

RRR ರಿಲೀಸ್ ಬೇರೆ ಚಿತ್ರಗಳಿಗೆ ಕಂಟಕ!

RRR ರಿಲೀಸ್ ಬೇರೆ ಚಿತ್ರಗಳಿಗೆ ಕಂಟಕ!

ಆರ್‌ಆರ್‌ಆರ್‌ ಚಿತ್ರ ರಿಲೀಸ್‌ ದಿನಾಂಕ ಪ್ರಕಟ ಆಗುತ್ತಲೇ, ಬಾಲಿವುಡ್, ತಮಿಳು, ತೆಲುಗು, ಕನ್ನಡದ ಹಲವು ಚಿತ್ರಗಳು ತಮ್ಮ ರಿಲೀಸ್‌ ದಿನಾಂಕದಲ್ಲಿ ಬದಲಾವಣೆ ಮಾಡಿಕೊಂಡಿವೆ. ಇನ್ನು ಕೆವು ದೊಡ್ಡ ಬಾಲಿವುಡ್‌ ಚಿತ್ರಗಳು RRR ಗಾಗಿ ದಾರಿ ಬಿಟ್ಟು ಮುಂದಕ್ಕೆ ಹೋಗಿವೆ. ಹಾಗಾಗಿ ಆರ್‌ಆರ್‌ಆರ್‌ ಮತ್ತೆ ಹೊಸ ದಿನಾಂಕವನ್ನು ಪ್ರಕಟ ಮಾಡಿದರೆ ಅದು ಹಲವು ಚಿತ್ರರಂಗದ ಹಲವು ಚಿತ್ರಗಳಿಗೆ ತಲೆ ನೋವು ತಂದೊಡ್ಡಲಿದೆ.

ಇಡೀ ವರ್ಷ ಸಿನಿಮಾಗಳಿಂದ ಪ್ಯಾಕಪ್!

ಇಡೀ ವರ್ಷ ಸಿನಿಮಾಗಳಿಂದ ಪ್ಯಾಕಪ್!

ಕೊರೊನಾ ಹೆಚ್ಚು ಕಡಿಮೆ ಆಗುತ್ತಿದ್ದ ಹಾಗೆ ಸಿನಿಮಾ ರಿಲೀಸ್ ದಿನಾಂಕದಲ್ಲಿಯೂ ಹಲವು ಬದಲಾವಣೆಗಳು ಆಗುತ್ತಿವೆ. 2022 ವರ್ಷ ಪೂರ್ತಿ ಸಿನಿಮಾಗಳು ರಿಲೀಸ್‌ಗಾಗಿ ಸಾಲು ಗಟ್ಟಿ ನಿಂತಿವೆ. ಹಾಗಾಗಿಯೇ RRR ಚಿತ್ರಕ್ಕೆ ಜನವರಿಯನ್ನು ಬಿಟ್ಟು ಕೊಡಲಾಗುತ್ತು. ಆದರೆ ಈಗ ಚಿತ್ರ ಪೋಸ್ಟ್ ಪೋನ್ ಆಗಿದೆ. ಮುಂದೆ ಹೊದ ದಿನಾಂಕ ಪ್ರಟಕ ಮಾಡಲಿದೆ. ವರ್ಷ ಇಡೀ ಸಿನಿಮಾಗಳು ರಿಲೀಸ್‌ ದಿನಾಂಕವನ್ನು ನಿಗದಿ ಮಾಡಿ ಕೊಂಡಿವೆ. ಹಾಗಾಗಿ RRR ಚಿತ್ರ ಯಾವಾಗ ರಿಲೀಸ್ ಆದರೂ ಕೂಡ ಈ ಚಿತ್ರ ಬೇರೆ ಚಿತ್ರಗಳಿಗೆ ಅದು ತೊಂದರೆ ಮಾಡಲಿದೆ ಎನ್ನಲಾಗುತ್ತಿದೆ.

More from Filmibeat

English summary
RRR Will Release On April 29 On Eid,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X